ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ:
ವಿದ್ಯಾಗಿರಿಯ ಬಸವೇಶ್ವರ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಮಹಿಳಾ ಸಬಲೀಕರಣ ಘಟಕ ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ಅಡಿಯಲ್ಲಿ ಮುಟ್ಟಿನ ನೈರ್ಮಲ್ಯ ದಿನವನ್ನು ಆಚರಿಸಲಾಯಿತು.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಡಾ.ವಿದ್ಯಾಶ್ರೀ.ಜಿ.ಎಂ ವಿದ್ಯಾರ್ಥಿನಿಯರನ್ನು ಉದ್ದೇಶಿಸಿ ಮಾತನಾಡಿ, ಋತುಚಕ್ರವು ಮಹಿಳೆಯರು ಅನುಭವಿಸುವ ಜೈವಿಕ ಪ್ರಕ್ರಿಯೆಯಾಗಿದೆ. ಮುಟ್ಟಿನ ದಿನಗಳಲ್ಲಿ ಮಹಿಳೆಯರು ಎದುರಿಸುವ ಸವಾಲುಗಳನ್ನು ಎದುರಿಸಲು ಸಹಾಯ ಮಾಡುವುದು. ಅನಾದಿ ಕಾಲದಿಂದಲೂ ಮುಟ್ಟು ಎಂಬುದು ಅಸ್ಪಷ್ಟತೆಯ ಅಂಶವಾಗಿದೆ. ಮುಟ್ಟಾದ ಹೆಣ್ಣು ಮಕ್ಕಳನ್ನು ಮನೆಯಲ್ಲಿ ಅಪರಾಧ ಭಾವದಲ್ಲಿ ಗಮನಿಸುವುದನ್ನು ತಪ್ಪಿಸಬೇಕು. ಮುಟ್ಟಿನ ದಿನಗಳಲ್ಲಿ ಶುಚಿತ್ವವನ್ನು ಕಾಪಾಡಿಕೊಳ್ಳಿರಿ ಎಂದು ವಿದ್ಯಾರ್ಥಿನಿಯರಿಗೆ ಕಿವಿಮಾತುಗಳನ್ನು ಹೇಳಿದರು.ಕಾರ್ಯಕ್ರಮಕ್ಕೆ ಆಗಮಿಸಿದ್ದ ಅತಿಥಿಗಳಿಗೆ ಪ್ರಾಚಾರ್ಯರು ಸವಿ ನೆನಪಿನ ಕಾಣಿಕೆಯನ್ನು ನೀಡಿದರು. ಮಹಾವಿದ್ಯಾಲಯದ ಪ್ರಾಚಾರ್ಯರಾದ ಟಿ.ಬಿ.ಕೋರಿಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕಾರ್ಯಕ್ರಮಾಧಿಕಾರಿ ಜಿ.ಎಸ್ ಕೆಂಗಾಪುರ, ಎಂ.ಆರ್.ನಾಡಗೌಡರ, ಗಂಗಾ ಬಡಿಗೇರ, ಅನುಜಾ ಪಾಟೀಲ ಉಪಸ್ಥಿತರಿದ್ದರು. ರಂಜಿತಾ ಪ್ರಾರ್ಥಿಸಿದರು. ಪೂಜಾ ಜಯಗೊಂಡರ ಸ್ವಾಗತಿಸಿ ಪರಿಚಯಿಸಿದರು. ಸೀಮಾ ಹೀರೆಮಠ ವಂದಿಸಿದರು, ಗಾಯತ್ರಿ ಹೆದ್ದಾರಿ ನಿರೂಪಿಸಿದರು.