ನನ್ನ ಕಿಡ್ನಾಪ್ ಮಾಡಿಲ್ಲ ಎಂದ ಮಗಳು

| Published : May 15 2025, 01:40 AM IST

ಸಾರಾಂಶ

ಅರೇಹಳ್ಳಿ ಪಟ್ಟಣದ ಮುಖ್ಯ ರಸ್ತೆಯಲ್ಲಿ ಕಿಡ್ನಾಪ್‌ ಮಾಡಿದ್ದಾರೆ ಎನ್ನಲಾದ ಯುವತಿ ತನ್ನ ಪತಿಯ ಜೊತೆ ಪ್ರತ್ಯಕ್ಷವಾಗಿ ನನ್ನನ್ನು ಯಾರೂ ಅಪಹರಿಸಿಲ್ಲ ನಾನೇ ಪತಿಯೊಂದಿಗೆ ತೆರಳಿದ್ದೇನೆ ಎಂದು ಹೇಳಿಕೆ ನೀಡಿದ್ದು ಪ್ರಕರಣಕ್ಕೆ ಹೊಸ ತಿರುವು ಬಂದಿದೆ. ಚನ್ನರಾಯಪಟ್ಟಣದ ಯುವಕ, ಕೆಲ ತಿಂಗಳ ಹಿಂದೆ ಅರೇಹಳ್ಳಿಯ ಹುಡುಗಿಯನ್ನು ಪ್ರೀತಿಸಿದ್ದ. ಪೋಷಕರ ನಿರಾಕರಣೆ ನಡುವೆಯೂ ಮದುವೆ ಆಗಿದ್ದ ಎನ್ನಲಾಗಿದೆ. ಆದರೆ, ಪೋಷಕರು ಮಗಳನ್ನು ಒಪ್ಪಿಸಿ, ಹುಡುಗನ ಮನೆಯಿಂದ ವಾಪಸ್‌ ಕರೆ ತಂದಿದ್ದರು. ನಂತರ, ಪತಿ ತನ್ನ ಪತ್ನಿಯನ್ನು ಮರಳಿ ಕರೆದೊಯ್ಯಲು ಯತ್ನಿಸಿದನಾದರೂ ಆಗಿರಲಿಲ್ಲ.

ಕನ್ನಡಪ್ರಭ ವಾರ್ತೆ ಬೇಲೂರು

ತಾಲೂಕಿನ ಅರೇಹಳ್ಳಿ ಪಟ್ಟಣದ ಮುಖ್ಯ ರಸ್ತೆಯಲ್ಲಿ ಕಿಡ್ನಾಪ್‌ ಮಾಡಿದ್ದಾರೆ ಎನ್ನಲಾದ ಯುವತಿ ತನ್ನ ಪತಿಯ ಜೊತೆ ಪ್ರತ್ಯಕ್ಷವಾಗಿ ನನ್ನನ್ನು ಯಾರೂ ಅಪಹರಿಸಿಲ್ಲ ನಾನೇ ಪತಿಯೊಂದಿಗೆ ತೆರಳಿದ್ದೇನೆ ಎಂದು ಹೇಳಿಕೆ ನೀಡಿದ್ದು ಪ್ರಕರಣಕ್ಕೆ ಹೊಸ ತಿರುವು ಬಂದಿದೆ.ತಾಲೂಕಿನ ಅರೇಹಳ್ಳಿ ಪಟ್ಟಣದ ಮುಖ್ಯ ರಸ್ತೆಯಲ್ಲಿ ಮಂಗಳವಾರ ಕಾರಿನಲ್ಲಿ ಬಂದ ವಿವಾಹಿತ ಅಳಿಯ, ಮಾವನ ಎದುರಲ್ಲೇ ತನ್ನ ಪತ್ನಿಯನ್ನು ಅಪಹರಣ ಮಾಡಿದ್ದು ಆಳಿಯನ ಕಾರನ್ನು ತಡೆದು ನಿಲ್ಲಿಸಲು ಹೋಗಿ, ಡೋರ್‌ನಲ್ಲಿ ನೇತಾಡುತ್ತಿದ್ದ ಮಾವನನ್ನು ರಸ್ತೆಯುದ್ದಕ್ಕೂ ಸುಮಾರು 200 ಮೀ. ದೂರ ಎಳೆದೊ ಈ ಬೆಚ್ಚಿಬೀಳಿಸುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವೈರಲ್ ಆಗಿದೆ. ಚನ್ನರಾಯಪಟ್ಟಣದ ಯುವಕ, ಕೆಲ ತಿಂಗಳ ಹಿಂದೆ ಅರೇಹಳ್ಳಿಯ ಹುಡುಗಿಯನ್ನು ಪ್ರೀತಿಸಿದ್ದ. ಪೋಷಕರ ನಿರಾಕರಣೆ ನಡುವೆಯೂ ಮದುವೆ ಆಗಿದ್ದ ಎನ್ನಲಾಗಿದೆ. ಆದರೆ, ಪೋಷಕರು ಮಗಳನ್ನು ಒಪ್ಪಿಸಿ, ಹುಡುಗನ ಮನೆಯಿಂದ ವಾಪಸ್‌ ಕರೆ ತಂದಿದ್ದರು. ನಂತರ, ಪತಿ ತನ್ನ ಪತ್ನಿಯನ್ನು ಮರಳಿ ಕರೆದೊಯ್ಯಲು ಯತ್ನಿಸಿದನಾದರೂ ಆಗಿರಲಿಲ್ಲ. ಮಂಗಳವಾರ ಬೆಳಗ್ಗೆ ತಂದೆ-ಮಗಳು ರಸ್ತೆಯಲ್ಲಿ ನಡೆದು ಹೋಗುವಾಗ ಕಾರಿನಲ್ಲಿ ಬಂದ ಯುವಕ, ತನ್ನ ಪತ್ನಿಯನ್ನು ಕಾರಿನೊಳಗೆ ಎಳೆದೊಯ್ದು, ಚಲಾಯಿಸಲು ಮುಂದಾದಾಗ ಮಾವ ಕಾರನ್ನು ತಡೆದು ನಿಲ್ಲಿಸಲು ಪರದಾಡಿದಾಗ ಕಾರು ನಿಲ್ಲಿಸದೆ, ಬಾಗಿಲು ಹಿಡಿದು ನೇತಾಡುತ್ತಿದ್ದರೂ ಕಾರು ಚಲಾಯಿಸಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಅಪಹರಿಸಿದ್ದಾರೆ ಎನ್ನಲಾದ ಯುವತಿ ತನ್ನ ಪತಿಯ ಜೊತೆ ಬುಧವಾರ ಪ್ರತ್ಯಕ್ಷವಾಗಿ ನನ್ನನ್ನು ಅಪಹರಿಸಿಲ್ಲ ನಾನೇ ಪತಿಯೊಂದಿಗೆ ತೆರಳಿದ್ದೇನೆ ಎಂದು ಹೇಳಿಕೆ ನೀಡಿದ್ದಾರೆ. ಪ್ರಿಸ್ಟಲ್ ಡಿಯಾಲ್ ಫರ್ನಾಂಡೀಸ್ ಆದ ನಾನು ಬೇಲೂರು ತಾಲೂಕಿನ ಮಲಸಾವರ ಗ್ರಾಮದ ಲ್ಯಾನ್ಸಿ ಫರ್ನಾಂಡೀಸ್ ಅವರ ಮಗಳು, ನನಗೆ 19 ವರ್ಷ ದಾಟಿದ್ದು ಕಳೆದ ಮೂರು ತಿಂಗಳ ಹಿಂದೆ ಚನ್ನರಾಯಪಟ್ಟಣ ಮೂಲದ ಪ್ರಜ್ವಲ್ (25 ವರ್ಷ) ಎಂಬುವವರೊಂದಿಗೆ ಉಪನೋಂದಣಿ ಅಧಿಕಾರಿಗಳ ಕಚೇರಿಯಲ್ಲಿ ರಿಜಿಸ್ಟರ್ ಮ್ಯಾರೇಜ್ ಆಗಿದ್ದೇನೆ. ನಮ್ಮ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದಕ್ಕಾಗಿ ನಾವಿಬ್ಬರು ಖುದ್ದಾಗಿ ವಿವಾಹ ಸಂಬಂಧ ಪೂರಕ ದಾಖಲೆ ನೀಡಿ ಎಲ್ಲವನ್ನೂ ಸರಿಪಡಿಸಿಕೊಂಡಿದ್ದೆವು. ಬಳಿಕ ಶುಕ್ರವಾರ ನಮ್ಮ ತಂದೆ ತಾಯಿ ಇಲ್ಲಿಗೆ ಬಂದು ಅಜ್ಜಿ ತಾತನಿಗೆ ಆರೋಗ್ಯ ಸರಿ ಇಲ್ಲ ಎನ್ನುತ್ತಾ ಮನೆಗೆ ಕರೆತಂದು ನಿನ್ನನ್ನು ವಶೀಕರಣ ಮಾಡಿಕೊಂಡು ವಿವಾಹವಾಗಿದ್ದಾನೆ ಎಂದೆಲ್ಲಾ ತಿಳಿ ಹೇಳಿ ಅವನ ಸಂಬಂಧವನ್ನು ಬಿಡುವಂತೆ ಮನವೊಲಿಸಿದ್ದಲ್ಲದೆ ನನ್ನ ಮೋಬೈಲ್ ಕಸಿದುಕೊಂಡಿದ್ದರು. ನಂತರ ಸಾಮಾಜಿಕ ಜಾಲತಾಣದ ಮೂಲಕ ಪತಿಯನ್ನು ಸಂಪರ್ಕಿಸಿ ನನ್ನನ್ನು ಕರೆದುಕೊಂಡು ಹೋಗಲು ತಿಳಿಸಿದ್ದರಿಂದ ನಿನ್ನೆ ಬೆಳಿಗ್ಗೆ ಕಾರಿನಲ್ಲಿ ಬಂದು ಕರೆದುಕೊಂಡು ಹೋಗಿದ್ದಾರೆ ಎಂದರು. ಅದೇನೇ ಇರಲಿ ಕಾರಿನಲ್ಲಿ ಅಪಹರಣಕಾರರಿಗಿಂತಲೂ ಹೆಚ್ಚಿನ ಪ್ರಾಣಕ್ಕೆ ಸಂಚಕಾರ ತರುವ ರೀತಿಯಲ್ಲಿ ರಸ್ತೆಯುದ್ದಕ್ಕೂ ಹೆತ್ತ ತಂದೆಯನ್ನು ಎಳೆದೊಯ್ಯುತಿದ್ದನ್ನು ಕಾರಿನ ಒಳಗೆ ನೋಡುತ್ತಿದ್ದ ಮಗಳಿಗೆ ದಯೆ ಕರುಣೆ ಇಲ್ಲವೇ ಎಂಬ ಆಕ್ರೋಶ ಇದೀಗ ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿ ವ್ಯಕ್ತವಾಗುತ್ತಿದೆ. ಬಾಕ್ಸ್‌: ಪ್ರೀತಿಸಿ ಮದುವೆಯಾಗಿದ್ದ ಗಂಡನನ್ನು ಬಿಡುವಂತೆ ಮನವೊಲಿಸಿದ್ದರು

ಪ್ರೀತಿಸಿ ಮದುವೆಯಾಗಿದ್ದು ಪೋಷಕರಿಗೆ ಇಷ್ಟವಿರಲಿಲ್ಲ. ನಮ್ಮ ತಂದೆ ತಾಯಿ ಇಲ್ಲಿಗೆ ಬಂದು ಅಜ್ಜಿ ತಾತನಿಗೆ ಆರೋಗ್ಯ ಸರಿ ಇಲ್ಲ ಎನ್ನುತ್ತಾ ಮನೆಗೆ ಕರೆತಂದು ನಿನ್ನನ್ನು ವಶೀಕರಣ ಮಾಡಿಕೊಂಡು ವಿವಾಹವಾಗಿದ್ದಾನೆ ಎಂದೆಲ್ಲಾ ತಿಳಿ ಹೇಳಿ ಅವನ ಸಂಬಂಧವನ್ನು ಬಿಡುವಂತೆ ಮನವೊಲಿಸಿದ್ದರು. ನನ್ನ ಮೊಬೈಲ್ ಕಸಿದುಕೊಂಡಿದ್ದರು. ನಂತರ ಸಾಮಾಜಿಕ ಜಾಲತಾಣದ ಮೂಲಕ ಪತಿಯನ್ನು ಸಂಪರ್ಕಿಸಿ ನನ್ನನ್ನು ಕರೆದುಕೊಂಡು ಹೋಗಲು ತಿಳಿಸಿದ್ದರಿಂದ ಮಂಗಳವಾರ ಬೆಳಿಗ್ಗೆ ಕಾರಿನಲ್ಲಿ ಬಂದು ಕರೆದುಕೊಂಡು ಹೋಗಿದ್ದಾರೆ ಎಂದು ಯುವತಿ ತಿಳಿಸಿದರು.