ಹಣ, ಹೆಂಡದ ಬಲ ವಿರುದ್ಧ ನನ್ನ ಹೋರಾಟ ಗೆಲ್ಲುತ್ತೆ

| Published : Apr 09 2024, 12:50 AM IST

ಹಣ, ಹೆಂಡದ ಬಲ ವಿರುದ್ಧ ನನ್ನ ಹೋರಾಟ ಗೆಲ್ಲುತ್ತೆ
Share this Article
  • FB
  • TW
  • Linkdin
  • Email

ಸಾರಾಂಶ

ಈ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸುನೀಲ್‌ ಬೋಸ್‌ಗೆ ಅಪ್ಪನ ನಾಮ ಬಲ, ಸರ್ಕಾರದ ಬಲ, ಹಣ, ಹೆಂಡದ ಬಲ ಇದ್ದರೆ, ಬಿಜೆಪಿ ಅಭ್ಯರ್ಥಿಗೆ ಕೇಂದ್ರ ಸರ್ಕಾರದ ಬಲ, ಹಣದ ಬಲ ಇದೆ, ಇವರಿಬ್ಬರ ನಡುವೆ ನನ್ನ ಹೋರಾಟದ ಬಲ ಗೆಲ್ಲುತ್ತದೆ ಎಂದು ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದ ಬಹುಜನ ಪಕ್ಷದ ಅಭ್ಯರ್ಥಿ ಎಂ. ಕೃಷ್ಣಮೂರ್ತಿ ಹೇಳಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಈ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸುನೀಲ್‌ ಬೋಸ್‌ಗೆ ಅಪ್ಪನ ನಾಮ ಬಲ, ಸರ್ಕಾರದ ಬಲ, ಹಣ, ಹೆಂಡದ ಬಲ ಇದ್ದರೆ, ಬಿಜೆಪಿ ಅಭ್ಯರ್ಥಿಗೆ ಕೇಂದ್ರ ಸರ್ಕಾರದ ಬಲ, ಹಣದ ಬಲ ಇದೆ, ಇವರಿಬ್ಬರ ನಡುವೆ ನನ್ನ ಹೋರಾಟದ ಬಲ ಗೆಲ್ಲುತ್ತದೆ ಎಂದು ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದ ಬಹುಜನ ಪಕ್ಷದ ಅಭ್ಯರ್ಥಿ ಎಂ. ಕೃಷ್ಣಮೂರ್ತಿ ಹೇಳಿದರು.ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನನ್ನ ಸ್ಪರ್ಧೆ ಅನಿರೀಕ್ಷಿತ ಮತ್ತು ಆಶ್ಚರ್ಯಕರವಾಗಿದೆ. ನಮ್ಮ ಅಧಿಕೃತ ಅಭ್ಯರ್ಥಿಯಾಗಿದ್ದ ನಿವೃತ್ತ ತಹಸೀಲ್ದಾರ್ ಮಹದೇವಯ್ಯಅವರ ಸ್ವರ್ಧೆ ಕೊನೆಗಳಿಯಲ್ಲಿ ತಾಂತ್ರಿಕ ಕಾರಣದಿಂದಾಗಿ ನಾಮಪತ್ರ ಸಲ್ಲಿಸಲಾಗಲಿಲ್ಲ. ಪಕ್ಷದ ವರಿಷ್ಠರ ಸೂಚನೆ ಮೇರೆಗೆ ನಾನು ನಾಮಪತ್ರ ಸಲ್ಲಿಸಿದ್ದೇನೆ ಎಂದರು.ನಾನು ಹೆಚ್ಚು ಹೋರಾಟ ಮಾಡಿದ್ದೇನೆ:

ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳಿಗಳಿಂತ ನಾನು ಹೆಚ್ಚು ಹೋರಾಟದ ಮೂಲಕ ಬಂದವನು, ಉಮ್ಮತ್ತೂರು ಕೆರೆಗೆ ನೀರು ತುಂಬಿಸುವುದು, ಕುಂತೂರು ಸಕ್ಕರೆ ಕಾರ್ಖಾನೆ ಕಾರ್ಮಿಕರ ಪರ ಹೋರಾಟ, ೧೦೮ ಸಿಬ್ಬಂದಿ ಪರವಾಗಿ, ಕೋವಿಡ್ ಸಂದರ್ಭದಲ್ಲಿ ಕೆಲಸಕ್ಕೆ ತೆಗೆದುಕೊಂಡಿದ್ದ ನರ್ಸ್‌ಗಳನ್ನು ವಜಾ ಮಾಡಿದಾಗ ಅವರ ಪರ ಹೋರಾಟ, ಇಡೀ ರಾಜ್ಯಾದ್ಯಂತ ಹೋರಾಟ, ಎಸ್ಸಿ, ಎಸ್ಟಿ ನೌಕರರ ಹಿಂಬಡ್ತಿ, ಹಳೇ ಪಿಂಚಣಿಗಾಗಿ ನೌಕರರ ಪರವಾಗಿ ಹೋರಾಟ ಸೇರಿದಂತೆ ಹಲವು ಹೋರಾಟಗಳಲ್ಲಿ ಭಾಗವಹಿಸಿ ಎಲ್ಲರಿಗೂ ಚಿರಪರಿಚಿತನಾಗಿದ್ದೇನೆ, ಈ ಹೋರಾಟದ ಹಿನ್ನಲೆ ಕಾಂಗ್ರೇಸ್ ಮತ್ತು ಬಿಜೆಪಿ ಅಭ್ಯರ್ಥಿಗಳಿಗೆ ಇಲ್ಲ ಎಂದರು.ಅಭ್ಯರ್ಥಿಗಳ ಹಿನ್ನೆಲೆ ಜನರಿಗೆ ಗೊತ್ತು:

ಈ ಇಬ್ಬರು ಅಭ್ಯರ್ಥಿಗಳ ಹಿನ್ನಲೆ ಏನು ಎಂದು ಜನರಿಗೆ ಗೊತ್ತು. ಒಬ್ಬರಿಗೆ ಹಣ ಹೆಂಡದ ಬಲ ಇದ್ದರೆ, ಇನ್ನೊಬ್ಬರು ರಾಜಕಾರಣಕ್ಕಾಗಿ ಪಕ್ಷದಿಂದ ಪಕ್ಷಕ್ಕೆ ಹಾರಿ ಬಂದಿರುವವರು, ಕಡು ಬಡತನದಲ್ಲಿ ಬೆಳೆದ ನಾನು ಎಂಎ ಹಿಂದಿಯಲ್ಲಿ ಚಿನ್ನದ ಪದಕ ಪಡೆದು, ಅಂಬೇಡ್ಕರ್ ಹೇಳಿದಂತೆ ಸಂಸತ್ ದೇಗುಲವಿದ್ದಂತೆ ಅಲ್ಲಿಗೆ ದೇವರುಗಳು ಹೋಗಬೇಕೆ ಹೊರತು ದೆವ್ವಗಳಲ್ಲ ಎಂಬ ನಿಲುವು ಇಟ್ಟುಕೊಂಡು ಪಾರ್ಲಿಮೆಂಟ್‌ಗೆ ಹೋಗಬೇಕೆಂಬ ಉದ್ದೇಶದಿಂದ ನೌಕರಿಗೆ ರಾಜೀನಾಮೆ ನೀಡಿ ಬಿಎಸ್ಪಿಗೆ ಸೇರಿ, ೨೦೦೯ ಮತ್ತು ೨೦೧೪ರಲ್ಲಿ ಪಾರ್ಲಿಮೆಂಟ್‌ಗೆ ಸ್ಪರ್ಧೆ, ೨೦೨೩ ವರುಣಾ, ಮಳವಳ್ಳಿ ಕ್ಷೇತ್ರದಲ್ಲಿ ವಿಧಾನಸಭೆಗೆ ಸ್ವರ್ಧೆ ಮಾಡಿ ಸೋತಿದ್ದೇನೆ. ಜಿಲ್ಲಾ ಸಂಯೋಜಕ, ರಾಜ್ಯ ಪ್ರಧಾನ ಕಾರ್ಯದರ್ಶಿ, ರಾಜ್ಯಧ್ಯಕ್ಷ, ರಾಜ್ಯ ಸಂಯೋಜಕನಾಗಿ ನೇಮಕವಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದೇನೆ ಎಂದರು. ಸುನೀಲ್ ಬೋಸ್‌ಗೆ ಯಾವುದೇ ವರ್ಚಸ್ಸಿಲ್ಲ, ಬಾಲರಾಜು ಪಕ್ಷದಿಂದ ಪಕ್ಷಕ್ಕೆ ಹಾರಾಟ ಮಾಡಿದ್ದಾರೆ ಈ ಹಿನ್ನಲೆಯಲ್ಲಿ ಮತದಾರರು ನನ್ನ ಮೇಲೆ ವಿಶ್ವಾಸ ಇಟ್ಟಿದ್ದಾರೆ, ಇಲ್ಲಿ ತ್ರಿಕೋನ ಸ್ಪರ್ಧೆ ನಡೆಯುತ್ತಿದೆ ಎಂದರು, ಈ ಕ್ಷೇತ್ರ ನೈಸರ್ಗಿಕ ಸಂಪತ್ತಿನಿಂದ ಕೂಡಿದೆ, ಆಡಳಿತ ನಡೆಸಿದ ಪಕ್ಷಗಳು ಇಲ್ಲಿಯ ಸಂಪತ್ತು ಲೂಟಿ ಮಾಡುತ್ತಿದ್ದಾರೆ, ನೀರಾವರಿಗೆ ಆದ್ಯತೆ ನೀಡಿಲ್ಲ. ಸ್ವಾತಂತ್ರ್ಯ ಬಂದು ೭೭ ವರ್ಷವಾದರೂ ಇಂದಿಗೂ ಈ ಜಿಲ್ಲೆ ಹಿಂದುಳಿದೆ. ಈ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಚಿಂತನೆ ನಡೆಸಿದ್ದೇನೆ, ನನಗೆ ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದರು.ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರ ೧೦ ವರ್ಷಗಳಲ್ಲಿ ಈ ಹಿಂದುಳಿದ ಜಿಲ್ಲೆಗೆ ಮೋದಿ ನೀಡಿದ ೧೦ ಕೊಡುಗೆ ಏನು ಪ್ರಶ್ನಿಸಿದರು,ಸಂವಿಧಾನ, ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಬಜೆಟ್‌ನಲ್ಲಿ ಚರ್ಚೆ ನಡೆಯುತ್ತಿಲ್ಲ. ೨೫ ಜನ ಬಿಜೆಪಿ ಅಭ್ಯರ್ಥಿಗಳು ಸಂಸತ್ತಿನಲ್ಲಿ ಚರ್ಚೆ ಮಾಡಿಲ್ಲ. ನರೇಂದ್ರ ಮೋದಿ ಮತ್ತು ಅಮಿತ್ ಆದೇಶ ಪಾಲನೆ ಮಾಡುವುದಷ್ಟೇ ಅವರ ಕೆಲಸವಾಗಿತ್ತು, ಉದ್ಯಮಿಗಳ ೧೧ ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದಾರೆ, ಶೇ. ೪೬ ರಷ್ಟು ಬಡವರು ತೆರಿಗೆ ಕಟ್ಟುತ್ತಿದ್ದಾರೆ. ಶ್ರೀಮಂತರಿಗೆ ತೆರಿಗೆ ಕಡಿಮೆ ಮಾಡಲಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ದೇವರಾಜು ಕಪ್ಪಸೋಗೆ, ಪ್ರದಾನ ಕಾರ್ಯದರ್ಶಿ ಲಕ್ಕೂರು ಪ್ರಸಾದ್ ಹಾಜರಿದ್ದರು.

ಹಣ ಮತ್ತು ಹೆಂಡ ಹಂಚದೆ ಚುನಾವಣೆ ನಡೆಸಿ:

ನಾವು ನೋಟು ಮತ್ತು ವೋಟ್ ಕೇಳ್ತಿವಿ. ಒಂದು ಪೈಸೆ ಹಣ ಮತ್ತು ಹೆಂಡ ಹಂಚದೆ ಚುನಾವಣೆ ನಡೆಸಿ. ಎಂದು ಕಾಂಗ್ರೆಸ್‌ ಮತ್ತು ಬಿಜೆಪಿಗೆ ಸವಾಲು ಹಾಕಿದರು, ಪ್ರತಿಯೊಂದು ಪಾರ್ಟಿಯು ಒಂದೊಂದು ಜಾತಿ ಮತ ನಂಬಿಕೊಂಡಿದೆ. ಅದೇ ರೀತಿ ದಲಿತರು ಮತ್ತು ಹಿಂದುಳಿದವರ ಮತವನ್ನು ನಾವು ನಂಬಿದ್ದೇವೆ ಎಂದರು. ಬಿಎಸ್ಪಿ ಅಭ್ಯರ್ಥಿ ಹಾಕುವುದೇ ಕಾಂಗ್ರೆಸ್ ಸೋಲಿಸಲು ಎಂಬ ಪಿತೂರಿ ನಡೆಯುತ್ತಿದೆ. ಬಿಎಸ್ಪಿ ಮೂರನೇ ಪ್ರಬಲ ಶಕ್ತಿಯಾಗಿ ಬೆಳೆಯಲು ಕಾಂಗ್ರೇಸ್ ಬಿಜೆಪಿ ಅವಕಾಶ ನೀಡದೇ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂದರು.ಕೊಳ್ಳೇಗಾಲದಲ್ಲಿ ಬಿಎಸ್ಪಿಯಿಂದ ಗೆದ್ದು ಆಶಯಗಳಿಗೆ ದಕ್ಕೆ ತಂದ ವ್ಯಕ್ತಿಯನ್ನು ಜನ ಸೋಲಿಸಿದ್ದಾರೆ ಈಗ ಜೈ ಭೀಮ್ ಬದಲು ಜೈ ಸಾವರ್ಕರ್ ಮತ್ತು ಜೈ ಶ್ರೀ ರಾಮ್ ಹೇಳುತ್ತಿದ್ದಾರೆ. ಸಂವಿಧಾನ ಪರಾಮರ್ಶೆ, ಮನುವಾದಿಗಳಿಗೆ ನೊರೊಂದು ಪ್ರಶ್ನೆ ಕೇಳಿದ್ದಿರಲ್ಲ ಈಗ ಬಿಜೆಪಿಗೆ ಹೋಗಿ ಉತ್ತರ ಕಂಡುಕೊಂಡಿದ್ದೀರಾ ಎಂದು ಎನ್. ಮಹೇಶ್‌ಗೆ ಛೇಡಿಸಿದರು.