ಬಡವರ್ಗದ ವಿದ್ಯಾರ್ಥಿಗಳಿಗೆ ವಸತಿ ಶಾಲೆಗಳು ವರದಾನವಾಗಿವೆ. ವಸತಿ ಶಾಲೆಗಳು ಹೆಚ್ಚಾದಂತೆ ಶೈಕ್ಷಣಿಕ ಪ್ರಗತಿಯು ಹೆಚ್ಚಾಗುತ್ತಿದೆ ಎಂದು ಶಾಸಕ ಬಸವರಾಜು ವಿ. ಶಿವಗಂಗಾ ಚನ್ನಗಿರಿಯಲ್ಲಿ ಹೇಳಿದ್ದಾರೆ.
- ಹಿರೇಕೋಗಲೂರಲ್ಲಿ ಇಂದಿರಾ ಗಾಂಧಿ ವಸತಿ ಶಾಲೆಗೆ ಗುದ್ದಲಿ ಪೂಜೆ
- - -ಚನ್ನಗಿರಿ: ಬಡವರ್ಗದ ವಿದ್ಯಾರ್ಥಿಗಳಿಗೆ ವಸತಿ ಶಾಲೆಗಳು ವರದಾನವಾಗಿವೆ. ವಸತಿ ಶಾಲೆಗಳು ಹೆಚ್ಚಾದಂತೆ ಶೈಕ್ಷಣಿಕ ಪ್ರಗತಿಯು ಹೆಚ್ಚಾಗುತ್ತಿದೆ ಎಂದು ಶಾಸಕ ಬಸವರಾಜು ವಿ. ಶಿವಗಂಗಾ ಹೇಳಿದರು.
ತಾಲೂಕಿನ ಹಿರೇಕೋಗಲೂರು ಗ್ರಾಮದಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ₹22 ಕೋಟಿ ವೆಚ್ಚದಲ್ಲಿ ಇಂದಿರಾ ಗಾಂಧಿ ವಸತಿ ಶಾಲೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.ಚನ್ನಗಿರಿ ಕ್ಷೇತ್ರದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ಗುಣಮಟ್ಟದ ಶಿಕ್ಷಣ ಕೊಡಿಸಬೇಕು ಎನ್ನುವುದು ನನ್ನ ಮುಖ್ಯ ಉದ್ದೇಶವಾಗಿದೆ. ಆ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ಒಂದು ಕಾಮಗಾರಿಯ ಕೆಲಸ ಕಡಿಮೆಯಾದರೂ ಪರವಾಗಿಲ್ಲ, ಶಿಕ್ಷಣ ಕ್ಷೇತ್ರಕ್ಕೆ ಎಲ್ಲ ರೀತಿಯ ಸೌಲಭ್ಯಗಳನ್ನು ಕೊಡಿಸಲು ಬದ್ಧನಾಗಿದ್ದೇನೆ. ಬಡ ಮಕ್ಕಳಿಗೂ ಉತ್ತಮ ಗುಣಮಟ್ಟದ ಶಿಕ್ಷಣ ಸಿಗಬೇಕು ಎಂದರು.
ಶಾಲಾ ಕಟ್ಟಡದ ಕಾಮಗಾರಿ ಉತ್ತಮ ಗುಣಮಟ್ಟದಿಂದ ಕೂಡಿರಬೇಕು. ಒಂದು ವರ್ಷದೊಳಗಾಗಿ ಕಟ್ಟಡವನ್ನು ಹಸ್ತಾಂತರಿಸಬೇಕು. ಈ ಕಾರ್ಯ ವಿಳಂಬವಾದರೆ ಸಹಿಸುವುದಿಲ್ಲ ಎಂದು ಗುತ್ತಿಗೆದಾರರಿಗೆ ಶಾಸಕರು ತಾಕೀತು ಮಾಡಿದರು.ಗ್ರಾಮದ ಸರ್ವೇ ನಂಬರ್ 46ರಲ್ಲಿ 9 ಎಕರೆ 20 ಗುಂಟೆ ಜಾಗದಲ್ಲಿ ಈ ವಸತಿ ಶಾಲೆ ನಿರ್ಮಾಣ ವಾಗುತ್ತಿದೆ. ಈ ಶಾಲೆಯಲ್ಲಿ 250 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುವಷ್ಠು ಅವಕಾಶ ವಿದೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ಸುಮ ಕೃಷ್ಣಮೂರ್ತಿ, ಉಪಾಧ್ಯಕ್ಷ ರಮೇಶ್, ಪಿಡಿಒ ಹೊನ್ನಕ್ಕ, ಕಾರ್ಯದರ್ಶಿ ಲಕ್ಷ್ಮೀ ಶೇಖರ್, ಮುಖಂಡರಾದ ಜಗದೀಶ್ ಕೋಟೆ, ಕೆ.ಪಿ. ವೆಂಕಟೇಶ್, ವಸಂತಕುಮಾರ್, ಯೋಗೀಶ್, ಮುನಿಯಪ್ಪ, ಮಲ್ಲಿಕಾರ್ಜುನ್, ಬಿ.ಜಿ.ಸ್ವಾಮಿ, ರೈತ ಮುಖಂಡ ಕುಮಾರ್, ಪ್ರಾಚಾರ್ಯ ವಿಶ್ವಕುಮಾರ್, ಶಿವಪ್ರಸಾದ್, ಗ್ರಾಮಸ್ಥರು ಇದ್ದರು.- - -
-19ಕೆಸಿಎನ್‌ಜಿ2.ಜೆಪಿಜಿ:ಹಿರೇಕೋಗಲೂರಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ₹22 ಕೋಟಿ ವೆಚ್ಚದಲ್ಲಿ ಇಂದಿರಾ ಗಾಂಧಿ ವಸತಿ ಶಾಲೆ ನಿರ್ಮಾಣಕ್ಕೆ ಶಾಸಕ ಬಸವರಾಜು ವಿ.ಶಿವಗಂಗಾ ಗುದ್ದಲಿ ಪೂಜೆ ನೆರವೇರಿಸಿದರು.