ಅಭಿವೃದ್ಧಿಗೆ ನನ್ನ ಶ್ರಮ ಮೀಸಲು : ಶಾಸಕ ಸುರೇಶ್

| Published : Feb 04 2024, 01:37 AM IST

ಅಭಿವೃದ್ಧಿಗೆ ನನ್ನ ಶ್ರಮ ಮೀಸಲು : ಶಾಸಕ ಸುರೇಶ್
Share this Article
  • FB
  • TW
  • Linkdin
  • Email

ಸಾರಾಂಶ

ಪುರಸಭೆಯ ಅಧ್ಯಕ್ಷ ಶ್ರೀಮತಿ ತಿರ್ಥಕುಮಾರಿ ವೆಂಕಟೇಶ್ ಮಾತನಾಡಿ ಎಲ್ಲಾ ವಾರ್ಡಗಳ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಲಾಗಿದ್ದು ಅದರಂತೆ ಕ್ರಮವಹಿಸಲಾಗುತ್ತಿದೆ ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೇಲೂರು

ಮುಖ್ಯ ಪ್ರವಾಸಿ ಕೇಂದ್ರವಾಗಿರುವ ಬೇಲೂರು ಪಟ್ಟಣದ ಅಭಿವೃದ್ಧಿಗೆ ಹೆಚ್ಚಿನ ಶ್ರಮ ಮೀಸಲಿಡುವುದಾಗಿ ಶಾಸಕ ಹೆಚ್. ಕೆ. ಸುರೇಶ್‌ ಹೇಳಿದರು.

ಶನಿವಾರ ಬೆಳಿಗ್ಗೆ ಬೇಲೂರು ಪುರಸಭೆಯ ಅಧ್ಯಕ್ಷರು ವಾರ್ಡ್ ಸದಸ್ಯರು ಹಾಗೂ ಪುರಸಭೆಯ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಇಂಜಿನಿಯರ್ ಹಾಗೂ ಇತರೆ ಅಧಿಕಾರಿಗಳ ಜೊತೆಗೆ ವಾರ್ಡ ನಂಬರ್ 11,14 ಮತ್ತು 15ನೇ ವಾರ್ಡ್‌ಗೆ ತೆರಳಿ ಪ್ರಾರಂಭ ಹಂತದಲ್ಲಿರುವ ಕಾಮಗಾರಿಗಳ ಗುಣ ಮಟ್ಟ ಪ್ರಗತಿಯನ್ನು ಪರಿಶೀಲಿಸಿದರು. ಹಾಗೂ ನಗರೋತ್ಥಾನ ಯೋಜನೆಯಡಿ ಕೈಗೊಳ್ಳುವ ಕಾಮಾಗಾರಿಗಳ ಬಗ್ಗೆ ಸಾವರ್ಜನಿಕರೊಂದಿಗೆ ಮಾತನಾಡಿ, ಯಾವ ಕೆಲಸಗಳು ಅವಶ್ಯಕತೆ ಇದೆ ಎಲ್ಲಿ ಕೆಲಸಗಳು ಕೈಗೊಳ್ಳಲಾಗುವುದು. ಕಾಮಗಾರಿಗಳ ಗುಣಮಟ್ಟದ ಬಗ್ಗೆ ಸಾರ್ವಜನಿಕರು ಪರಿಶೀಲಿಸಬೇಕು. ಒಂದು ವೇಳೆ ಕಾಮಗಾರಿಗಳ ಗುಣಮಟ್ಟ ಸರಿಇಲ್ಲವೆಂದು ಕಂಡು ಬಂದರೆ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರಬೇಕೆಂದು ಸೂಚಿಸಿದರು.

ಚರಂಡಿ, ರಸ್ತೆ ಕಾಮಗಾರಿಗಳು ಸಾರ್ವಜನಿಕರಿಗೆ ಅವಶ್ಯಕ ವಾಗಿದ್ದು ಮುಂದಿನ ದಿನಗಳಲ್ಲಿ ಪ್ರತಿಯೊಂದು ವಾರ್ಡನ ಮೂಲಭೂತ ಸೌಕರ್ಯಗಳಿಗೆ ಹೆಚ್ಚು ಒತ್ತು ನೀಡಲಾಗುವುದುದೆಂದು ತಿಳಿಸಿದರು. ವಾರ್ಡ್‌ನಲ್ಲಿ ಸ್ವಚ್ಛತೆಗೆ ಹೆಚ್ವು ಆದ್ಯತೆ ನೀಡಲಾಗುವುದು ಬೇಲೂರು ಸ್ವಚ್ಚ ಹಾಗೂ ಸುಂದರ ನಗರವನ್ನಾಗಿಸಲು ಸಾರ್ವಜನಿಕರ ಸಹಕಾರ ಮುಖ್ಯ .

14ನೇ ವಾರ್ಡ್‌ ಚರಂಡಿ ಗುಣಮಟ್ಟದ ಬಗ್ಗೆ ಜನರು ದೂರಿದ್ದು ಕೂಡಲೆ ಸರಿ ಪಡಿಸಿ ಎಂದು ಇಂಜಿನಿಯರ್ ಜಗದೀಶ್ ರವರಿಗೆ ಸೂಚಿಸಿದರು. ಪುರಸಭೆಯ ಅಧ್ಯಕ್ಷ ಶ್ರೀಮತಿ ತಿರ್ಥಕುಮಾರಿ ವೆಂಕಟೇಶ್ ಮಾತನಾಡಿ ಎಲ್ಲಾ ವಾರ್ಡಗಳ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಲಾಗಿದ್ದು ಅದರಂತೆ ಕ್ರಮವಹಿಸಲಾಗುತ್ತಿದೆ ಎಂದು ತಿಳಿಸಿದರು.

ಈ ಸಮಯದಲ್ಲಿ ಪುರಸಭೆಯ ಅಧ್ಯಕ್ಷರು, ಸದಸ್ಯರಾದ ಬಿ.ಆರ್ ಪ್ರಭಾಕರ , ಗಿರೀಶ, ಸತೀಶ, ಮತ್ತು ಅಶೋಕ ಹಾಗೂ ಬಿ.ಜೆ.ಪಿ ಮುಖಂಡರಾದ ವಿನಯ , ರಂಗನಾಥ ಹೇಮಂತಕುಮಾರ , ಮನು, ಶ್ರೇಯೆಸ್ ಮುರಳಿ , ಶೇಖರ, ಪ್ರಸನ್ನ, ಮಂಜುನಾಥ ಇತರರು ಹಾಜರಿದ್ದರು.