ಕನ್ನಡಪ್ರಭ ವಾರ್ತೆ ಹುಣಸೂರು

ನನ್ನ ಮತ್ತು ಶಾಸಕ ಜಿ.ಡಿ.ಹರೀಶ್‌ ಗೌಡರ ಬಾಂಧವ್ಯ ರಾಜಕಾರಣವನ್ನೂ ಮೀರಿದುದು. ಹರೀಶ್‌ ಗೌಡರ ನೇತೃತ್ವದಲ್ಲಿ ಹುಣಸೂರಿನಲ್ಲಿ ಪಕ್ಷದ ಈ ಕಾರ್ಯಕ್ರಮ ಅಭೂತಪೂರ್ವವಾಗಿದೆ. ಈ ಜನಸಾಗರ ನೋಡಿದರೆ ಚುನಾವಣಾ ಕಾವು ಹುಣಸೂರಿನಿಂದಲೇ ಆರಂಭಗೊಂಡಿದೆ ಎನ್ನಬಹುದು. ಮತದಾರ ಆಳುವ ಸರ್ಕಾರಕ್ಕೆ ಪಾಠ ಕಲಿಸಲು ಸಜ್ಜಾಗಿದ್ದಾನೆ ಎಂದು ಸಂತಸ ವ್ಯಕ್ತಪಡಿಸಿದರು.

ಹುಣಸೂರಿನಲ್ಲೇ ನ್ನ ರಾಜಕಾರಣ- ಹರೀಶ್‌ಗೌಡ;

2012ರಲ್ಲಿ ಕಸಬಾ ಕೃಷಿಪತ್ತಿನ ಸಹಕಾರ ಸಂಘದ ನಿರ್ದೇಶಕನಾಗಿ ಸಹಕಾರಿಯಾಗಿ ಆರಂಭಗೊಂಡ ನನ್ನ ಜೀವನ 2023ರಲ್ಲಿ ಹುಣಸೂರು ಮಹಾಜನತೆಯ ಬೆಂಬಲದಿಂದ ರಾಜಕಾರಣದ ಮೊದಲ ಹೆಜ್ಜೆ ಇಟ್ಟಿದ್ದೇನೆ. ಹುಣಸೂರಿನ ಜನರ ಋಣವನ್ನು ನಾನೆಂದೂ ಮರೆಯಲಾರೆ. ಅಂತೆಯೇ ನನ್ನ ರಾಜಕಾರಣದ ಜೀವನ ನಿಖಿಲ್‌ ಅವರೊಂದಿಗೆ ಎಂದಿಗೂ ಮುಂದುವರೆಯಲಿದ್ದು, ನಾನು ಕೂಡ ಮುಂಬರುವ 2028ರ ಚುನಾವಣೆಯನ್ನೂ ಹುಣಸೂರಿನಿಂದಲೇ ಮುಂದುವರೆಸಲಿದ್ದೇನೆ. ಈ ಜನರ ಋಣವನ್ನು ನಾನೆಂದೂ ಮರೆಯುವುದಿಲ್ಲವೆಂದು ಶಾಸಕ ಜಿ.ಡಿ. ಹರೀಶ್‌ ಗೌಡ ಹೇಳುವ ಮೂಲಕ ಕಾರ್ಯಕರ್ತರ ಮನದಲ್ಲಿದ್ದ ಕ್ಷೇತ್ರ ಬದಲಾವಣೆಯ ಗೊಂದಲಕ್ಕೆ ಸಂಪೂರ್ಣ ತೆರೆ ಎಳೆದರು.

ಜನವೋ ಜನ... ಸಮಾವೇಶದಲ್ಲಿ ತಾಲೂಕಿನಾದ್ಯಂತ 20 ಸಾವಿರಕ್ಕೂ ಅಧಿಕ ಮಂದಿ ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳು ಭಾಗವಹಿಸಿದ್ದರು. ಇಡೀ ಮೈದಾನದಲ್ಲಿ ಮತ್ತು ಮೆರವಣಿಗೆಯಲಿ ಜನಸಾಗರವೇ ಕಂಡುಬಂದಿತ್ತು. ಸಮಾವೇಶಕ್ಕೆ ಬಂದವರಿಗೆ ರುಚಿಯಾದ ಊಟದ ವ್ಯವಸ್ಥೆ ಮಾಡಲಾಗಿತ್ತು. ಜನಸಾಗರವನ್ನು ಕಂಡು ನಾಯಕರು ಫುಲ್ ಖುಷ್ ಆಗಿದ್ದಂತೂ ನಿಜ. ನೂತನ ಅಧ್ಯಕ್ಷರಾಗಿ ಎಂ.ಬಿ. ಸುರೇಂದ್ರ:


ಇದೇ ವೇಳೆ ತಾಲೂಕಿನ ಜೆಡಿಎಸ್ ಘಟಕದ ನೂತನ ಅಧ್ಯಕ್ಷರಾಗಿ ಜಿಪಂ ಮಾಜಿ ಸದಸ್ಯ ಎಂ.ಬಿ. ಸುರೇಂದ್ರ, ನಗರಾಧ್ಯಕ್ಷರಾಗಿ ನಗರಸಭೆ ಮಾಜಿ ಸದಸ್ಯ ಎಸ್. ಶರವಣ ಪಕ್ಷದ ಬಾವುಟ ಸ್ವೀಕರಿಸಿ ಪದಗ್ರಹಣ ಮಾಡಿದರು. ಪಕ್ಷದ ವಿವಿಧ ಹಂತದ ಪದಾಧಿಕಾರಿಗಳನ್ನು ಶಾಸಕ ಜಿ.ಡಿ. ಹರೀಶ್ ಗೌಡ ಘೋಷಿಸಿ ಬಾಕಿ ಉಳಿದಿರುವ ಹುದ್ದೆಗಳನ್ನು ಶೀಘ್ರ ನೇಮಿಸುವುದಾಗಿ ತಿಳಿಸಿದರು.

ಬೈಕ್ ರ್ಯಾಲಿ.., ಸಾವಿರ ಕಳಶಹೊತ್ತ ಮಹಿಳೆಯರು.. ಜಾನಪದ ಕಲಾತಂಡ.. ತಾಲೂಕಿನ ಬಿಳಿಕೆರೆಯ ಹೊಸಲು ಮಾರಮ್ಮ ದೇಗುಲದ ಆವರಣದಿಂದ ಒಂದು ಸಾವಿರಕ್ಕೂ ಹೆಚ್ಚು ಯುವಕರು ಬೈಕ್ ರ್ಯಾಲಿ ಮೂಲಕ ತಮ್ಮ ನೆಚ್ಚಿನ ನಾಯಕರನ್ನು ಹುಣಸೂರಿಗೆ ಕರೆತಂದರು. ಹುಣಸೂರಿನ ಎಪಿಎಂಸಿ ವೃತ್ತದಲ್ಲಿನ ಅರಸು ಪುತ್ಥಳಿಗೆ ನಿಖಿಲ್ ಕುಮಾರಸ್ವಾಮಿ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದ ನಂತರ ಆಂಜನೇಯಸ್ವಾಮಿ ದೇವಾಲಯದ ಆವರಣದಿಂದ ಮಂಗಳೂರಿನ ಚಂಡೆವಾದನ, ಹುಲಿವೇಷಧಾರಿಗಳ ಕುಣಿತ, ಕರಗ, ಗಾರುಡಿ ಕುಣಿತ, ಚಿಲಿಪಿಲಿ ಕುಣಿತ, ವೀರಗಾಸೆ ಕುಣಿತ, ಭದ್ರಕಾಳಿ ಕುಣಿತ, ನಂದಿಕಂಬ, ಮಂಗಳವಾದ್ಯ ಸೇರಿದಂತೆ 20ಕ್ಕೂ ಹೆಚ್ಚು ಜಾನಪದ ಕಲಾತಂಡಗಳು, 800ಕ್ಕೂ ಹೆಚ್ಚು ಕಳಶಹೊತ್ತ ಮಹಿಳೆಯರ ದಂಡಿನೊಂದಿಗೆ ಮೆರವಣಿಗೆ ಮುನೇಶ್ವರ ಕಾವಲ್ ಮೈದಾನವನ್ನು ತಲುಪಿತು. ಅರಸು ಪುತ್ಥಳಿ ಬಳಿ ಅಬಿಮಾನಿಗಳು ಕ್ರೇನ್ ಮೂಲಕ ನೆಚ್ಚಿನ ನಾಯಕರಿಗೆ ಮುಸಂಬಿ ಹಣ್ಣಿನ ಬೃಹದಾಕಾರದ ಹಾಕಿ ಸಂಭ್ರಮಿಸಿದರು.