24ಕ್ಕೆ ಜೆಎಸ್‌ಎಸ್‌ವಿಜ್ಞಾನ ತಂತ್ರಜ್ಞಾನ ವಿವಿಯ 7ನೇ ಘಟಿಕೋತ್ಸವ

| Published : Mar 23 2025, 01:32 AM IST

24ಕ್ಕೆ ಜೆಎಸ್‌ಎಸ್‌ವಿಜ್ಞಾನ ತಂತ್ರಜ್ಞಾನ ವಿವಿಯ 7ನೇ ಘಟಿಕೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಶೀಲ ಸಾಧನೆ ಗುರುತಿಸಿ ಕಾರ್ಯಕ್ರಮದಲ್ಲಿ ಒಟ್ಟು 148 ರ್ಯಾಂಕ್‌ ಮತ್ತು 64 ಪದಕಗಳನ್ನು ವಿತರಿಸಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಮೈಸೂರುನಗರದ ಜೆಎಸ್‌ಎಸ್‌ ವಿಜ್ಞಾನ ಮತ್ತು ತಂತ್ರಜ್ಞಾನ ವಿವಿಯ 7ನೇ ಘಟಿಕೋತ್ಸವವನ್ನು ಮಾ. 24 ರಂದು ಆಯೋಜಿಸಲಾಗಿದ್ದು, ಅತಿಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ 30 ಪದಕ ಪ್ರದಾನ ಮಾಡಲಾಗುತ್ತಿದೆ ಎಂದು ಕುಲಪತಿ ಡಾ.ಎ.ಎನ್‌. ಸಂತೋಷ್‌ ಕುಮಾರ್‌ ತಿಳಿಸಿದರು.ನಗರದ ಎಸ್‌.ಜಿ.ಸಿ.ಇ ಆವರಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, 1,678 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುತ್ತಿದ್ದು, ಬಿಇ- 992, ಬಿಸಿಎ - 51, ಎಂಟೆಕ್ - 90, ಎಂಸಿಎ - 114, ಎಂಎಸ್ಸಿ- 140, ಎಂಬಿಎ- 282 ಹಾಗೂ ವಿವಿಧ ವಿಭಾಗಗಳಲ್ಲಿ ಡಾಕ್ಟರೇಟ್ ಪದವಿ ಪಡೆದಿರುವ 9 ವಿದ್ಯಾರ್ಥಿಗಳು ಪದವಿ ಪಡೆಯುವುದಾಗಿ ಅವರು ಹೇಳಿದರು.ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಶೀಲ ಸಾಧನೆ ಗುರುತಿಸಿ ಕಾರ್ಯಕ್ರಮದಲ್ಲಿ ಒಟ್ಟು 148 ರ್ಯಾಂಕ್‌ ಮತ್ತು 64 ಪದಕಗಳನ್ನು ವಿತರಿಸಲಾಗುತ್ತಿದೆ. ಪದಕಗಳಲ್ಲಿ 30 ಸುವರ್ಣ ಪದಕಗಳಿದ್ದು ವಿಭಾಗಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾಥಿಗಳಿಗೆ ನೀಡಲಾಗುತ್ತಿದ. 34 ದತ್ತಿ ಪದಕಗಳನ್ನು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ ಎಂದರು.ಘಟಿಕೋತ್ಸವ ಸಮಾರಂಭವು ಜೆಎಸ್‌ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿವಿಯ ಕುಲಾಧಿಪತಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅಧ್ಯಕ್ಷತೆ ವಹಿಸಲಿದ್ದು, ವಿದ್ಯಾರ್ಥಿಗಳಿಗೆ ಪದವಿ ಮತ್ತು ಪದಕ ಪ್ರದಾನ ಮಾಡುವರು. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್‌ ಅವರು ಘಟಿಕೋತ್ಸವ ಭಾಷಣ ಮಾಡುವರು.ಜೆಎಸ್‌ಎಸ್‌ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ. ಬೆಟಸೂರಮಠ, ತಾಂತ್ರಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಬಿ. ಸುರೇಶ್‌ ಪಾಲ್ಗೊಳ್ಳುವರು. ಹೊಸ ಕೋರ್ಸ್‌ಗಳುಎಂಎಸ್ಸಿ ಇನ್‌ ಎಲೆಕ್ಟ್ರಾನಿಕ್ಸ್‌, ಎಂಎಸ್ಸಿ ಇನ್‌ ಎಲೆಕ್ಟ್ರಾನಿಕ್ಸ್‌(ಸೆಮಿ ಕಂಡಕ್ಟರ್‌ಟೆಕ್ನಾಲಜಿ), ಎಂಎಸ್ಸಿ ಎಕನಾಮಿಕ್ಸ್‌ - ಬ್ರಿಡ್ಜಿಂಗ್‌ ಟೆಕ್ನಾಲಜಿ ವಿತ್‌ ಬ್ಯುಸೆನೆಸ್‌ ಅಂಡ್‌ಪಾಲಿಸಿ ಇನ್‌ಸೈಟ್ಸ್‌, ಬಿಇ ಇನ್‌ ಕಂಪ್ಯೂಟರ್‌ಸೈನ್ಸ್‌ ಅಂಡ್‌ಎಂಜಿನಿಯರಿಂಗ್‌, ಬಿಇ ಕಂಪ್ಯೂಟರ್‌ಸೈನ್ಸ್‌ ಅಂಡ್‌ ಟೆಕ್ನಾಲಜಿ (ಫಾರ್‌ಡಿಫರೆಂಟ್ಲಿ ಅಬ್ಲೇಡ್‌) ಒಡಂಬಡಿಕೆಸೆಂಟರ್‌ಫಾರ್‌ಸೈನ್ಸ್‌ಅಂಡ್‌ಟೆಕ್ನಾಲಜಿ ಆಫ್‌ದಿ ನಾನ್‌ಅಲಿಗ್ನಡ್‌ಅಂಡ್‌ಅದರ್‌ ಡೆವಲಪಿಂಗ್‌ ಸೆಂಟ್ರೀಸ್‌, ಪಿಐ ಸ್ಕ್ಯೂರ್‌ ಟೆಕ್ನಾಲಜಿ ಯುಎಸ್‌ಎ, ಯೂನಿವರ್ಸಿಟಿ ಆಫ್‌ವೆಲವೆರಹಮಟೊನ್‌ ಯುಕೆ, ಸಿರ್ಕ್ಯೂಟ್ರೋನಿಕ್‌, ಧಾರವಾಡ ಗ್ಲೋಬಲ್‌ ಇನ್ಫೋಟೆಕ್‌, ಎಕ್ಸೆಲ್‌ಆರ್‌ಎಡ್‌ಟೆಕ್‌ಪಿವಿಟಿ, ಸ್ಚೆವರ್ನ್‌ಕ್ಲೈನ್‌ ಫಿಕ್ಸ್‌ಅಕಾಡೆಮಿ, ಬೋರ್ಡ್‌ಆಫ್‌ಅಪ್ರೆಂಟಿಶಿಪ್‌ಟ್ರೈನಿಂಗ್‌ಮತ್ತು ಬಿಲ್ಡರ್‌ ಅಸೋಸಿಯೇಷನ್‌ಆಫ್‌ ಇಂಡಿಯಾದ ಜತೆ ಸಂಸ್ಥೆಯು ಒಡಂಬಡಿಕೆ ಮಾಡಿಕೊಂಡಿದೆ.ಸುದ್ದಿಗೋಷ್ಠಿಯಲ್ಲಿ ಕುಲಸಚಿವರಾದ ಡಾ.ಎಸ್‌.ಎ. ಧನರಾಜ್‌, ಪರೀಕ್ಷಾ ನಿಯಂತ್ರಣಾದಿಕಾರಿ ಡಾ.ಪಿ. ನಂಜುಂಡಸ್ವಾಮಿ, ಡೀನ್‌ ಮನೋಜ್‌ಕುಮಾರ್‌, ಪ್ರಾಂಶುಪಾಲ ನಟರಾಜ್‌ ಇದ್ದರು.