ಕುವೆಂಪು ಸಮಗ್ರ ಸಾಹಿತ್ಯದ ಬಗ್ಗೆ ವಿಚಾರ ಸಂಕಿರಣ ಅಗತ್ಯ

| Published : Dec 30 2024, 01:03 AM IST

ಸಾರಾಂಶ

ಪ್ರೌಢಶಾಲೆಗೆ ಮೈಸೂರಿಗೆ ಬಂದು ಕುವೆಂಪು ಅವರು ಸ್ವಾತಂತ್ರ್ಯಪೂರ್ವದಲ್ಲಿ ಇದ್ದ ಎಲ್ಲಾ ಅಡೆತಡೆಗಳನ್ನು ಎದುರಿಸಿ ವಿದ್ಯೆ ಕಲಿತರು.

ಕನ್ನಡಪ್ರಭ ವಾರ್ತೆ ಮೈಸೂರು

ಕುವೆಂಪು ಅವರ ಸಮಗ್ರ ಸಾಹಿತ್ಯದ ಬಗ್ಗೆ ವಿಚಾರ ಸಂಕಿರಣ ನಡೆಸಿ ಎಂದು ಪ್ರಗತಿಪರ ಲೇಖಕ ಡಾ.ಕಾಳೇಗೌಡ ನಾಗವಾರ ಸಲಹೆ ಮಾಡಿದರು.

ಮೈಸೂರು ನಾಗರಿಕ ಸಾಂಸ್ಕೃತಿಕ ವೇದಿಕೆಯು ಕುವೆಂಪು ಕ್ಷೇಮಾಭಿವೃದ್ಧಿ ಸಂಘ, ರಾಮಕೃಷ್ಣನಗರ ಹಿತರಕ್ಷಣಾ ಸಮಿತಿ, ನಂದಿ ಬಳಗ, ಕರ್ನಾಟಕ ಸೇನಾಪಡೆ ಮತ್ತಿತರ ಸಂಘ, ಸಂಸ್ಥೆಗಳ ನೆರವಿನೊಂದಿಗೆ ಭಾನುವಾರ ವಿಶ್ವಮಾನವ ಜೋಡಿ ರಸ್ತೆಯಲ್ಲಿ ಏರ್ಪಡಿಸಿದ್ದ ಕುವೆಂಪು ಜನ್ಮದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರೌಢಶಾಲೆಗೆ ಮೈಸೂರಿಗೆ ಬಂದು ಕುವೆಂಪು ಅವರು ಸ್ವಾತಂತ್ರ್ಯಪೂರ್ವದಲ್ಲಿ ಇದ್ದ ಎಲ್ಲಾ ಅಡೆತಡೆಗಳನ್ನು ಎದುರಿಸಿ ವಿದ್ಯೆ ಕಲಿತರು. ಮೈಸೂರಿನಲ್ಲಿ ನೆಲೆನಿಂತು ಎಲ್ಲ ರೀತಿಯ ಸಾಹಿತ್ಯ ರಚಿಸಿದರು. ಅವರ ಸಾಹಿತ್ಯದಲ್ಲಿರುವ ವೈಚಾರಿಕೆಯನ್ನು ಇಂದಿನ ಯುವಪೀಳಿಗೆಗೆ ತಲುಪಿಸಬೇಕಾಗಿದೆ ಎಂದರು.

ಹನ್ನೇರಡೆ ಶತಮಾನದ ಬಸವಣ್ಣನವರಂತೆ ಇಪ್ಪತ್ತನೇ ಶತಮಾನದ ಕುವೆಂಪು ಅವರು ಜಾತೀಯತೆಯ ನಿರ್ಮೂಲನೆಗೆ ಶ್ರಮಿಸಿದರು ಎಂದು ಅವರು ಹೇಳಿದರು. ಸುಯೋಗ್‌ ಆಸ್ಪತ್ರೆಯ ಮುಖ್ಯಸ್ಥ ಡಾ.ಎಸ್‌.ಪಿ. ಯೋಗಣ್ಣ, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌ ಸೇರಿದಂತೆ ಹಲವಾರು ಗಣ್ಯರು, ಎಲ್ಲಾ ಸಂಘ, ಸಂಸ್ಥೆಗಳ ಪದಾಧಿಕಾರಿಗಳು ಇದ್ದರು. ಮೈಸೂರು ನಾಗರಿಕ ಸಾಂಸ್ಕೃತಿಕ ವೇದಿಕೆ ಅಧ್ಯ೭ ಕೆ.ಎಸ್. ನಾಗರಾಜ್‌ ಕಾರ್ಯಕ್ರಮ ನಿರೂಪಿಸಿದರು.

ಇತ್ತೀಚೆಗೆ ನಿಧನರಾದ ಮಾಜಿ ಪ್ರಧಾನಿ ಡಾ.ಮನಮೋಹನ್‌ ಸಿಂಗ್‌, ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.