ವಲಯ ಅಧ್ಯಕ್ಷ ಅರುಣ್ ಮಂಡಲ್ ಹಾಗೂ ಶಾಂತಿ ಪೋಸ್ಟರ್ ಜಿಲ್ಲಾ ಅಧ್ಯಕ್ಷ ಸಿ.ಆರ್‌. ದಿನೇಶ್

ಕನ್ನಡಪ್ರಭ ವಾರ್ತೆ ಮೈಸೂರುನಗರದ ರೆಲಿಷ್ ಲಿಯೋ ಲಯನ್ಸ್ ಕ್ಲಬ್, ಎಲ್‌.ಸಿ.ಎಂ ಕ್ರೌನ್, ಎಲ್‌.ಸಿ.ಎಂ ವಿವಿ ಸಿಇ ಕ್ಯಾಂಪಸ್ ಮತ್ತು ಮೈಸೂರು ಕ್ಲಾಸಿಕ್ ಲಿಯೋ ಕ್ಲಬ್‌ ಸಹಯೋಗದಲ್ಲಿ ಹಂಗರ್ ಫೀಡ್ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಿತು.ಕಾರ್ಯಕ್ರಮವನ್ನು ಪ್ರತಿ ವಾರಾಂತ್ಯ ಜಯದೇವ ಹೃದ್ರೋಗ ವಿಜ್ಞಾನ ಸಂಸ್ಥೆ ಬಳಿ ಆಯೋಜಿಸಲಾಗುತ್ತದೆ.ಕಾರ್ಯಕ್ರಮದಲ್ಲಿ ವಲಯ ಅಧ್ಯಕ್ಷ ಅರುಣ್ ಮಂಡಲ್ ಹಾಗೂ ಶಾಂತಿ ಪೋಸ್ಟರ್ ಜಿಲ್ಲಾ ಅಧ್ಯಕ್ಷ ಸಿ.ಆರ್‌. ದಿನೇಶ್ ಇದ್ದರು.ಜಿಲ್ಲಾ ಲಿಯೋ ಅಧ್ಯಕ್ಷ ಲಿಯೋ ಆರ್ಯವ್ ಮಾನಿಕ್ಯ ಮಂಡಲ್, ಜಿಲ್ಲಾ ಲಿಯೋ ಕಾರ್ಯದರ್ಶಿ ಲಿಯೋ ಕೀರ್ತಿ ಕುಮಾರ್, ಎಲ್‌.ಸಿ.ಎಂ ರೆಲಿಷ್ ಅಧ್ಯಕ್ಷೆ ಸಿಂಥಿಯಾ ಡಿ’ಮೆಲ್ಲೋ, ಎಲ್‌.ಸಿ.ಎಂ ವಿವಿ ಸಿಇ ಕ್ಯಾಂಪಸ್ ಅಧ್ಯಕ್ಷೆ ಎ.ಎಸ್‌. ಕೀರ್ತನಾ, ಎಲ್‌.ಸಿ.ಎಂ ಕ್ರೌನ್ ಅಧ್ಯಕ್ಷ ಇಮಾದ್ ಮತ್ತು ಖಜಾಂಚಿ ಮಂದಾರ ಅವರು ನೇತೃತ್ವವಹಿಸಿದ್ದರು.ಹಂಗರ್ ಫೀಡ್ ಡ್ರೈವ್‌ ಅನ್ನು ದರ್ಶಿನಿ ಅವರು ಪ್ರಾಯೋಜಿಸಿದ್ದರು. ಸಕ್ರಿಯವಾಗಿ ಪಾಲ್ಗೊಂಡ ಸದಸ್ಯರಲ್ಲಿ ಆಲೆನ್ ಸ್ಟೀಫನ್, ರಿಷಬ್, ಅನಘಾ ಆಚಾರ್ಯ,ಕೆ. ಬೆಣಕ, ವಿ. ಜೀವನ್ ಮತ್ತು ಎಸ್‌. ತನ್ಮಯಿ ಇದ್ದರು.