ಮೈಸೂರು ದಸರಾ: ಉಡುಪಿಯ ಹುಲಿವೇಷ ತಂಡ ಪ್ರಥಮ

| Published : Oct 05 2025, 01:01 AM IST

ಸಾರಾಂಶ

ನಾಗರಾಜ್ ಐತಾಳ್ ನೇತೃತ್ವದ ಈ ಹುಲಿವೇಷ ತಂಡವು ತನ್ನ ಸಾಂಪ್ರದಾಯಿಕ ವೇಷ ಮತ್ತು ಕುಣಿತದಿಂದ ಈಗಾಗಲೇ ಅನೇಕ ಬಹುಮಾನಗಳನ್ನು ಗೆದ್ದುಕೊಂಡಿದೆ. ಈ ಬಾರಿಯ ಉಡುಪಿಯ ಕೃಷ್ಣಮಠದಲ್ಲಿ ನಡೆದ ಶ್ರೀ ಕೃಷ ಜನ್ಮಾಷ್ಟಮಿಯ ಹುಲಿವೇಷ ಸ್ಪರ್ಧೆಯಲ್ಲಿಯೂ ಈ ತಂಡ ಬಹುಮಾನವನ್ನು ಗೆದ್ದುಕೊಂಡಿತ್ತು.

ಕನ್ನಡಪ್ರಭ ವಾರ್ತೆ ಉಡುಪಿ

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-೨೦೨೫ರ ಅಂಗವಾಗಿ ಅ.೨ರಂದು ನಡೆದ ಜಂಬೂ ಸವಾರಿ ಮೆರವಣಿಗೆಯಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿದ ಉಡುಪಿ ಜಿಲ್ಲೆಯ ಪಡುಬೈಲೂರು ಶ್ರೀ ಇಷ್ಟ ಮಹಾಲಿಂಗೇಶ್ವರ ಹುಲಿವೇಷ ತಂಡವು ಪ್ರಥಮ ಸ್ಥಾನ ಗಳಿಸಿದ್ದು, ೧೫,೦೦೦ ರು. ನಗದು ಬಹುಮಾನ ಪಡೆದಿದೆ ಎಂದು ಮೈಸೂರು ದಸರಾ ಮೆರವಣಿಗೆ ಮತ್ತು ಪಂಜಿನ ಕವಾಯತು ಉಪಸಮಿತಿ ಉಪವಿಶೇಷಾಧಿಕಾರಿ ಸೀಮಾ ಲಾಟ್ಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ನಾಗರಾಜ್ ಐತಾಳ್ ನೇತೃತ್ವದ ಈ ಹುಲಿವೇಷ ತಂಡವು ತನ್ನ ಸಾಂಪ್ರದಾಯಿಕ ವೇಷ ಮತ್ತು ಕುಣಿತದಿಂದ ಈಗಾಗಲೇ ಅನೇಕ ಬಹುಮಾನಗಳನ್ನು ಗೆದ್ದುಕೊಂಡಿದೆ. ಈ ಬಾರಿಯ ಉಡುಪಿಯ ಕೃಷ್ಣಮಠದಲ್ಲಿ ನಡೆದ ಶ್ರೀ ಕೃಷ ಜನ್ಮಾಷ್ಟಮಿಯ ಹುಲಿವೇಷ ಸ್ಪರ್ಧೆಯಲ್ಲಿಯೂ ಈ ತಂಡ ಬಹುಮಾನವನ್ನು ಗೆದ್ದುಕೊಂಡಿತ್ತು.