ಕೆಂಚಲಗೂಡು ಗ್ರಾಮಸ್ಥರು, ರೈತ ಸಂಘ ಪ್ರತಿಭಟನೆ

| Published : Sep 18 2025, 01:10 AM IST

ಕೆಂಚಲಗೂಡು ಗ್ರಾಮಸ್ಥರು, ರೈತ ಸಂಘ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಕೆಂಚಲಗೂಡು ಗ್ರಾಮ ಮತ್ತು ಸುತ್ತಮುತ್ತಲಿನ ಗ್ರಾಮಗಳ ಧನ, ಕುರಿ, ಮೇಕೆ ಗಳ ಮೇಲೆ ಚಿರತೆ ದಾಳಿ ಮಾಡುತ್ತಿವೆ.

ಕನ್ನಡಪ್ರಭ ವಾರ್ತೆ ಜಯಪುರಮೈಸೂರು ತಾಲೂಕು ಜಯಪುರ ಹೋಬಳಿಯ ಕೆಂಚಲಗೂಡು ಗ್ರಾಮ ಮತ್ತು ಸುತ್ತಮುತ್ತ ಬಡಾವಣೆಗಳಲ್ಲಿ ಮೂಲಭೂತ ಸೌಕರ್ಯಕ್ಕಾಗಿ ಮತ್ತು ಚಿರತೆ ಹಾವಳಿ ತಡೆಯಲು, ಬಡಾವಣೆಗಳಲ್ಲಿ ಬೆಳೆದಿರುವ ಬೃಹತ್ ಗಾತ್ರದ ಗಿಡಗಂಟಿಗಳನ್ನು ತೆರುವುಗೊಳಿಸಬೇಕೆಂದು ಆಗ್ರಹಿಸಿ ಧನಗಹಳ್ಳಿ ಗ್ರಾಪಂ ಕಚೇರಿ ಆವರಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಗ್ರಾಮಸ್ಥರು ಬುಧವಾರ ಪ್ರತಿಭಟಿಸಿದರು.ಪ್ರತಿಭಟನೆ ಉದ್ದೇಶಿಸಿ ರಾಜ್ಯ ರೈತ ಸಂಘದ ಮೈಸೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ. ಮರಂಕಯ್ಯ ಮಾತನಾಡಿದರು.ಕೆಂಚಲಗೂಡು ಗ್ರಾಮ ಮತ್ತು ಸುತ್ತಮುತ್ತಲಿನ ಗ್ರಾಮಗಳ ಧನ, ಕುರಿ, ಮೇಕೆ ಗಳ ಮೇಲೆ ಚಿರತೆ ದಾಳಿ ಮಾಡುತ್ತಿವೆ. ಗ್ರಾಮದ ಸುತ್ತಮುತ್ತ ಇರುವ ಬಡಾವಣೆಗಳಲ್ಲಿ ಬೆಳೆದುಕೊಂಡಿರುವ ಗಿಡಗಂಟಿಗಳೇ ಕಾರಣವಾಗಿದ್ದು , ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕೂಡಲೇ ಗಿಡಗಂಟಿಗಳನ್ನು ತೆರುವುಗೊಳಿಸಬೇಕು. ಚಿರತೆಗಳು ಮನುಷ್ಯರ ಮೇಲೆ ದಾಳಿ ಮಾಡುವುದನ್ನು ತಪ್ಪಿಸಬೇಕು. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳದಲ್ಲಿ ಬೋನು ಇರಿಸಿ ಚಿರತೆಗಳನ್ನು ಸೆರೆ ಇಡಿದು, ಸ್ಥಳೀಯರು ನಿರ್ಭೀತಿಯಿಂದ ಓಡಾಡಲು ಅವಕಾಶ ಮಾಡಿಕೊಡಬೇಕು ಎಂದರು.ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಧನಗಹಳ್ಳಿ ಗ್ರಾಪಂ ಪಿಡಿಓ ನರಹರಿಯವರೆಗೆ ರೈತಸಂಘ ಸಂಘದ ಮುಖಂಡರು, ಮೈಸೂರು ತಾಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ನೀಡಿದರು.ಪ್ರತಿಭಟನಾ ಕಾರರ ಅಹವಾಲು ಆಲಿಸಿದ ಪಿಡಿಓ ನರಹರಿ, ರೈತ ಸಂಘ ಮುಖಂಡರು ನೀಡಿರುವ ಹಕ್ಕೊತ್ತಾಯ ಪತ್ರವನ್ನು ಹಿರಿಯ ಅಧಿಕಾರಿಗಳಿಗೆ ತಲುಪಿಸಲಾಗುವುದು. ಸಾರ್ವಜನಿಕರಿಗೆ ತೊಂದರೆಯಾಗದಂತೆ ಸರ್ಕಾರಿ ಸೇವೆ ಒದಗಿಸಲಾಗುವುದು ಎಂದರು.ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರಾದ ವಿಜಯೇಂದ್ರ, ಆನಂದ ಪ್ರಭಾಕರ್, ಚಂದ್ರಶೇಖರ್, ಬಸಪ್ಪ ನಾಯಕ, ಸಾಲುಂಡಿ ಬಸವರಾಜು, ನಾಗರಾಜ್ ನಾಯಕ, ಮಹಾದೇವಿ, ಸಾಲುಂಡಿ ರವಿಕುಮಾರ್, ಹಾಗೂ ಅರಣ್ಯ ಇಲಾಖೆಯ ಬಿ.ಎ. ಸತೀಶ, ವಿರೂಪಾಕ್ಷ, ಜಯಪುರ ಪೊಲೀಸ್ ಠಾಣಾ ಪಿಎಸ್.ಐ ಕಾಳೇಗೌಡ ಮತ್ತು ಗ್ರಾಪಂ ಪ್ರತಿನಿಧಿಗಳು ಇದ್ದರು.