ಮುಖ್ಯಮಂತ್ರಿಗಳ ಶಾಸಕರುಗಳಿಗೆ ನೀಡಿದ ವಿಶೇಷ ಅನುದಾನ 50 ಕೋಟಿ.ರೂ.ಗಳಲ್ಲಿ 1 ಕೋಟಿ ರು. ಭವನಕ್ಕೆ

ಕನ್ನಡಪ್ರಭ ವಾರ್ತೆ ಕೆ.ಆರ್. ನಗರ

ದೇಶದಲ್ಲಿ ವಾಸಿಸುವ ಎಲ್ಲ ವರ್ಗದ ಜನತೆಗೆ ಅನುಕೂಲವಾಗುವಂತ ಶ್ರೇಷ್ಠವಾದ ಸಂವಿಧಾನವನ್ನು ಡಾ.ಬಿ.ಆರ್. ಅಂಬೇಡ್ಕರ್ ರವರು ನೀಡಿದ ಕಾರಣಕ್ಕಾಗಿ ನಾವೆಲ್ಲರೂ ನೆಮ್ಮದಿಯ ಜೀವನ ನಡೆಸುತ್ತಿದ್ದೇವೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.

ಪಟ್ಟಣದ ಮೈಸೂರು-ಹಾಸನ ರಸ್ತೆಯಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಪುತ್ಥಳಿ ಬಳಿ ಸಮಾಜ ಕಲ್ಯಾಣ ಇಲಾಖೆ, ಪುರಸಭೆ ಮತ್ತು ತಾಲೂಕು ಆಡಳಿತ ವತಿಯಿಂದ ನಡೆದ ಡಾ.ಬಿ.ಆರ್. ಅಂಬೇಡ್ಕರ್ ರವರ 135ನೇ ಜನ್ಮದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಬಾಬ ಸಾಹೇಬ್‌ರವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಾವೆಲ್ಲರೂ ನಡೆಯಬೇಕು ಎಂದರು.

ಡಾ.ಬಿ.ಆರ್. ಅಂಬೇಡ್ಕರ್ ರವರ ಸಮುದಾಯದ ಮುಂದುವರೆದ ಕಾಮಗಾರಿಗೆ ಸರ್ಕಾರದ ವತಿಯಿಂದ 2 ಕೋಟಿ ರು. ಮಂಜೂರು ಆಗಿರುವ ಬಗ್ಗೆ ಸಮಾಜ ಕಲ್ಯಾಣ ಇಲಾಖೆಯ ಸಚಿವರು ತಿಳಿಸಿದ್ದಾರೆ, ಮುಖ್ಯಮಂತ್ರಿಗಳ ಶಾಸಕರುಗಳಿಗೆ ನೀಡಿದ ವಿಶೇಷ ಅನುದಾನ 50 ಕೋಟಿ.ರೂ.ಗಳಲ್ಲಿ 1 ಕೋಟಿ ರು. ಭವನಕ್ಕೆ ನೀಡಲಾಗಿದ್ದು, ಒಟ್ಟು 3 ಕೋಟಿ ರು..ಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.

ಸಾಲಿಗ್ರಾಮ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕ ನಾಗರಾಜು ಪ್ರಧಾನ ಭಾಷಣ ಮಾಡಿದರು. ತಹಸೀಲ್ದಾರ್ ಜಿ. ಸುರೇಂದ್ರಮೂರ್ತಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಶಂಕರ್‌ಮೂರ್ತಿ, ಜಿ.ಪಂ.ಮಾಜಿ ಸದಸ್ಯ ಸಿದ್ದಪ್ಪ, ತಾ.ಪ. ಮಾಜಿ ಅಧ್ಯಕ್ಷ ಎಂ.ಎಚ್. ಸ್ವಾಮಿ, ಆದಿಜಾಂಬವ ಸಂಘದ ಅಧ್ಯಕ್ಷ ಎಂ.ಲೋಕೇಶ್, ಉದ್ಯಮಿ ಎಸ್.ರವಿ ಮುಖಂಡರಾದ ಹನಸೋಗೆ ನಾಗರಾಜು, ಸಿದ್ದಯ್ಯ, ಎ.ಆರ್.ಕಾಂತರಾಜು, ಡಿ.ಕೆ.ಕೊಪ್ಪಲು ರಾಜಯ್ಯ, ಮಂಜುರಾಜು, ದಿವಾಕರ್, ಸುರೇಶ್ ಮಾತನಾಡಿದರು.

ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಗಡ್ಡಮಹೇಶ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಂ.ಎಸ್.ಮಹದೇವ್, ಪುರಸಭೆ ಮಾಜಿ ಸದಸ್ಯರಾದ ಪ್ರಕಾಶ್, ಶಂಕರ್‌ ಸ್ವಾಮಿ, ಕಾಂಗ್ರೆಸ್ ವ ಎಸ್‌ಸಿ ಘಟಕದ ಅಧ್ಯಕ್ಷ ಡಿ.ವಿ.ಗುಡಿ ನಂದೀಶ್, ಕಂಠಿಕುಮಾರ್, ಎಂಎಸ್‌ಎಸ್ ಅಧ್ಯಕ್ಷ ಎಂ.ಎಸ್. ರವಿಕುಮಾರ್, ಕಾರ್ಯದರ್ಶಿ ಬಿ.ಎಚ್. ಕುಮಾರ್, ಖಜಾಂಚಿ ಎಚ್.ಎಂ. ಮಂಜು, ದಸಂಸ ತಾಲೂಕು ಅಧ್ಯಕ್ಷ ಎಂ.ಎಸ್. ಮಲ್ಲೇಶ್ ಇದ್ದರು.

----------------