ಕಬ್ಬು ಕಟಾವಿಗೆ ಕಾರ್ಮಿಕರನ್ನು ತರಲು ಮೈಷುಗರ್ ಹರಸಾಹಸ

| Published : Aug 17 2024, 12:50 AM IST

ಕಬ್ಬು ಕಟಾವಿಗೆ ಕಾರ್ಮಿಕರನ್ನು ತರಲು ಮೈಷುಗರ್ ಹರಸಾಹಸ
Share this Article
  • FB
  • TW
  • Linkdin
  • Email

ಸಾರಾಂಶ

ಮೈಷುಗರ್ ಕಾರ್ಖಾನೆ ಕಳೆದ ೧೭ ದಿನದಲ್ಲಿ ೨೧ ಸಾವಿರ ಟನ್ ಕಬ್ಬನ್ನು ಮಾತ್ರ ಅರೆಯಲು ಶಕ್ತವಾಗಿದೆ. ಕಬ್ಬು ನಿರಂತರವಾಗಿ ೨೪ ಗಂಟೆಗಳ ಕಾಲ ಅರೆದರೆ ಇಳುವರಿಯನ್ನು ಶೇ.೮ ರಿಂದ ಶೇ.೮.೫ರವರೆಗೆ ಕೊಂಡೊಯ್ಯಬಹುದು. ನಿತ್ಯ ೫ ಸಾವಿರ ಟನ್ ಕಬ್ಬು ಅರೆಯುವ ಜಾಗದಲ್ಲಿ ೨೫೦ ರಿಂದ ೩೫೦ ಟನ್ ಕಬ್ಬು ಅರೆಯುತ್ತಿರುವುದರಿಂದ ಇಳುವರಿ ಕುಂಠಿತಗೊಂಡಿದೆ. ಈ ಸಾಲಿನಲ್ಲಿ ಕಾರ್ಖಾನೆಯ ಪ್ರಸ್ತುತ ಇಳುವರಿ ಶೇ.೬.೧೦ಕ್ಕೆ ಕುಸಿದಿದೆ ಎಂದು ಹೇಳಲಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮೈಷುಗರ್ ವ್ಯಾಪ್ತಿಯಲ್ಲಿ ಬೆಳೆದು ನಿಂತಿರುವ ಕಬ್ಬನ್ನು ಕಟಾವು ಮಾಡುವುದಕ್ಕೆ ಕೂಲಿ ಕಾರ್ಮಿಕರನ್ನು ಕರೆತರುವುದಕ್ಕೆ ಮೈಷುಗರ್ ಕಾರ್ಖಾನೆ ಆಡಳಿತ ಮಂಡಳಿ ಹರಸಾಹಸ ನಡೆಸುತ್ತಿದೆ.ಪ್ರಸಕ್ತ ಸಾಲಿನಲ್ಲಿ ಕಾರ್ಖಾನೆ ೩ ಲಕ್ಷ ಟನ್ ಕಬ್ಬನ್ನು ಒಪ್ಪಿಗೆ ಮಾಡಿಕೊಂಡಿದೆ. ಕಬ್ಬು ಕೂಡ ಕಟಾವಿಗೆ ಸಿದ್ಧಗೊಂಡಿದೆ. ಆದರೆ, ಕಟಾವು ಮಾಡುವುದಕ್ಕೆ ಕೂಲಿ ಕಾರ್ಮಿಕರ ಕೊರತೆ ಎದುರಾಗಿದೆ. ಇದರ ಪರಿಣಾಮ ನಿತ್ಯ ನಿರೀಕ್ಷಿತ ಪ್ರಮಾಣದಷ್ಟು ಕಬ್ಬು ಕಾರ್ಖಾನೆಗೆ ಬಾರದೆ ಕಬ್ಬು ಅರೆಯುವಿಕೆ ಕುಂಠಿತಗೊಂಡಿದೆ. ಕಬ್ಬು ಅರೆಯುವಿಕೆ ಕಾರ್ಯ ನಿಂತು ನಿಂತು ಸಾಗುತ್ತಿದೆ. ಕಬ್ಬು ಕಟಾವಿಗೆ ೧೪೬ ಬ್ಯಾಚ್ ಸಿದ್ಧತೆ:ಕಬ್ಬು ಕಟಾವು ಮಾಡಲು ೨ ಕೋಟಿ ರು. ಮುಂಗಡ ಹಣ ಪಡೆದುಕೊಂಡು ಹೋಗಿರುವ ಬಳ್ಳಾರಿ ಮತ್ತು ವಿಜಯಪುರದ ಗುತ್ತಿಗೆದಾರನ ಮೂಲಕ ಕೂಲಿ ಕಾರ್ಮಿಕರನ್ನು ಕರೆತರುವ ಪ್ರಯತ್ನವೂ ನಡೆದಿದೆ. ಇದಲ್ಲದೆ ಹೊರಗಿನಿಂದ ೭೯ ಹಾಗೂ ಸ್ಥಳೀಯವಾಗಿ ೫೧ ಬ್ಯಾಚ್, ಪಂಡರಾಪುರದಿಂದ ೯ ಬ್ಯಾಚ್, ಮತ್ತೊಂದೆಡೆಯಿಂದ ೪ ಬ್ಯಾಚ್ ಸೇರಿದಂತೆ ೧೪೬ ಬ್ಯಾಚ್‌ಗಳನ್ನು ಕಬ್ಬು ಕಟಾವಿಗೆ ಕರೆತರಲಾಗುತ್ತಿದೆ. ಪ್ರತಿ ಬ್ಯಾಚ್‌ನಲ್ಲಿ ೧೫ ರಿಂದ ೨೦ ಜನ ಕೂಲಿ ಕಾರ್ಮಿಕರಿದ್ದು, ಟನ್ ಕಬ್ಬಿಗೆ ೪೫೦ ರು.ನಿಂದ ೬೫೦ ರು. ನೀಡುವುದಕ್ಕೆ ಒಪ್ಪಂದ ಮಾಡಿಕೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.ನಿತ್ಯ ಕಬ್ಬು ಕಡಿಯುವುದಕ್ಕೆ ೧೮೩೮ ಕೂಲಿ ಕಾರ್ಮಿಕರನ್ನು ಸಿದ್ಧಪಡಿಸಿಕೊಳ್ಳಲಾಗುತ್ತಿದೆ. ಈಗಾಗಲೇ ಒಪ್ಪಿಗೆ ಮಾಡಿಕೊಂಡಿರುವ ರೈತರ ಕಬ್ಬನ್ನು ಹಂತ ಹಂತವಾಗಿ ಆದ್ಯತೆಯ ಮೇರೆಗೆ ಕಟಾವು ಮಾಡಲಾಗುವುದು. ಆ.೨೦ರ ವೇಳೆಗೆ ಕಾರ್ಖಾನೆಯ ಕಬ್ಬು ಅರೆಯುವಿಕೆ ಸುಧಾರಣೆಗೆ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಖಾಸಗಿ ಕಾರ್ಖಾನೆಯವರಿಂದ ಕಿರುಕುಳ?:ಮೈಷುಗರ್ ವ್ಯಾಪ್ತಿಯ ಕಬ್ಬು ಕಟಾವಿಗೆ ಬರುವ ಕೂಲಿ ಕಾರ್ಮಿಕರನ್ನು ಹೆಚ್ಚು ಕೂಲಿ ನೀಡುವ ಆಮಿಷವೊಡ್ಡಿ ಖಾಸಗಿ ಕಾರ್ಖಾನೆಯವರು ಕರೆದೊಯ್ಯುತ್ತಿರುವುದರಿಂದ ಕಬ್ಬು ಕಟಾವಿಗೆ ಹಿನ್ನಡೆ ಉಂಟಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಮೈಷುಗರ್ ಅಧಿಕಾರಿಗಳು ಕಬ್ಬು ಕಟಾವು ಮಾಡುವ ಹೊರ ಜಿಲ್ಲೆ ಹಾಗೂ ಸ್ಥಳೀಯ ಗುತ್ತಿಗೆದಾರನಿಗೆ ಮುಂಗಡ ಹಣಕೊಟ್ಟು ಕೂಲಿ ಕಾರ್ಮಿಕರನ್ನು ನಿಗದಿಪಡಿಸಿಕೊಂಡು ಬಂದಿದ್ದರೆ ಅವರನ್ನು ಖಾಸಗಿ ಕಾರ್ಖಾನೆಯವರು ಹೆಚ್ಚು ಹಣ ಕೊಟ್ಟು ಗೊತ್ತುಪಡಿಸಿಕೊಳ್ಳುತ್ತಿದ್ದಾರೆ. ಇದರಿಂದ ನಿಗದಿತ ಸಮಯಕ್ಕೆ ಕೂಲಿ ಕಾರ್ಮಿಕರು ಕಬ್ಬು ಕಟಾವಿಗೆ ಬರುತ್ತಿಲ್ಲ, ಮುಂಗಡ ಹಣವನ್ನು ವಾಪಸ್ ಕೊಡದೆ ಗುತ್ತಿಗೆದಾರ ವಂಚಿಸುತ್ತಿರುವ ಪ್ರಕರಣಗಳೂ ನಡೆಯುತ್ತಿವೆ. ಆಡಳಿತ ಮಂಡಳಿ ಹಣ ಪಡೆದು ಕಟಾವಿಗೆ ಬಾರದಿರುವ ಗುತ್ತಿಗೆದಾರರಿಗೆ ನೋಟಿಸ್ ನೀಡುತ್ತಿದ್ದಾರೆ.ಸರ್ಕಾರಿ ಸ್ವಾಮ್ಯದ ಕಾರ್ಖಾನೆ ವ್ಯಾಪ್ತಿಗೆ ಸೇರಿದ ಕಬ್ಬು ನಿಗದಿತ ಸಮಯಕ್ಕೆ ಕಟಾವಾಗಬಾರದು. ಆ ಕಬ್ಬು ತಮ್ಮ ಕಾರ್ಖಾನೆ ಬರುವಂತೆ ಮಾಡಿಕೊಳ್ಳುವ ಸಂಚಿನೊಂದಿಗೆ ಖಾಸಗಿ ಕಾರ್ಖಾನೆಗಳ ಫೀಲ್ಡ್‌ಮನ್‌ಗಳು ಹೆಚ್ಚು ಕ್ರಿಯಾಶೀಲರಾಗಿದ್ದಾರೆ. ಕೂಲಿ ಕಾರ್ಮಿಕರಿಗೆ ಡೀಸೆಲ್ ಹಣ, ಇನ್ಸೆಂಟೀವ್ ನೀಡುವ ಆಮಿಷ ತೋರಿಸಿ ಮೈಷುಗರ್ ಕಾರ್ಖಾನೆಗೆ ಕಬ್ಬು ಕಟಾವು ಮಾಡುವ ಕೂಲಿ ಕಾರ್ಮಿಕರು ಸಿಗದಂತೆ ಮಾಡುತ್ತಿದಾರೆ ಎಂಬ ಆರೋಪಗಳು ಬಲವಾಗಿ ಕೇಳಿಬರುತ್ತಿವೆ.ಅಧಿಕಾರಿಗಳು, ಫೀಲ್ಡ್‌ಮನ್‌ಗಳ ವೈಫಲ್ಯ:ಮೈಷುಗರ್ ಕಾರ್ಖಾನೆಯ ಅಧಿಕಾರಿಗಳು, ಫೀಲ್ಡ್‌ಮನ್‌ಗಳು ಹೆಚ್ಚು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸದಿರುವುದು ಮತ್ತೊಂದು ಕಾರಣವಾಗಿದೆ. ಕಾರ್ಖಾನೆ ಆರಂಭವಾದ ನಂತರ ಕಬ್ಬು ತರುವುದರಿಂದ ಆರಂಭವಾಗಿ ಕೂಲಿ ಕಾರ್ಮಿಕರನ್ನು ಸಜ್ಜುಗೊಳಿಸಿಟ್ಟುಕೊಳ್ಳುವವರೆಗೆ ಪೂರ್ವತಯಾರಿ ಮಾಡಿಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ. ಆ ಸಮಯದಲ್ಲಿ ಎದುರಾಗುವ ಸಮಸ್ಯೆಗಳನ್ನು ಮುಂಚಿತವಾಗಿಯೇ ಅರಿತು ಕಬ್ಬು ಕಟಾವಿಗೆ ಮುಂಗಡ ಹಣ ನೀಡಿದ ಗುತ್ತಿಗೆದಾರರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಸಮಯಕ್ಕೆ ಸರಿಯಾಗಿ ಅವರನ್ನು ಕಬ್ಬು ಕಟಾವಿಗೆ ಕರೆತರುವಲ್ಲಿ ಯಶಸ್ವಿಯಾಗದಿರುವುದು ಮತ್ತೊಂದು ಕಾರಣವಾಗಿದೆ.೨೦ ರು.ನಿಂದ ೧೦೦ ರು. ಹೆಚ್ಚು ಹಣಕ್ಕೆ ಬೇಡಿಕೆ:

ಉತ್ತರ ಕರ್ನಾಟಕ ಭಾಗದಲ್ಲಿ ಕಬ್ಬು ಕಡಿಯಲು ಬರುವ ಕೂಲಿ ಕಾರ್ಮಿಕರಿಗೆ ಒಂದು ನಿರ್ದಿಷ್ಟ ದರ ನಿಗದಿಪಡಿಸಿದರೆ ಅದಕ್ಕಿಂತ ಹೆಚ್ಚು ರೈತರೂ ಕೊಡುವುದಿಲ್ಲ, ಕಾರ್ಖಾನೆಯೂ ನೀಡುವುದಿಲ್ಲ. ಆದರೆ, ಉತ್ತರ ಕರ್ನಾಟಕದಿಂದ ಇಲ್ಲಿಗೆ ಬರುವವರು ಕಬ್ಬು ಕಟಾವಿಗೆ ನಿಗದಿಪಡಿಸಿದ ದರಕ್ಕಿಂತ ೨೦ ರು.ನಿಂದ ೧೦೦ ರು. ಹೆಚ್ಚಿಗೆ ಕೇಳುತ್ತಾರೆ. ಅದನ್ನು ರೈತರೇ ನೀಡಿದರೂ ಸಮಸ್ಯೆಯಿಲ್ಲ. ಕಾರ್ಖಾನೆ ನೀಡಿದರೂ ರೈತರ ಹಣದಿಂದಲೇ ಪಾವತಿಸುತ್ತದೆ. ಆದರೆ, ರೈತರಿಗೆ ಹಣ ನೀಡುವಾಗ ವ್ಯತ್ಯಾಸ ಬರುತ್ತಿರುವುದು ಮತ್ತೊಂದು ಸಮಸ್ಯೆಯಾಗಿದೆ ಎಂದು ಕಾರ್ಖಾನೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರುಶೇ.೬.೧೦ ಇಳುವರಿ:ಮೈಷುಗರ್ ಕಾರ್ಖಾನೆ ಕಳೆದ ೧೭ ದಿನದಲ್ಲಿ ೨೧ ಸಾವಿರ ಟನ್ ಕಬ್ಬನ್ನು ಮಾತ್ರ ಅರೆಯಲು ಶಕ್ತವಾಗಿದೆ. ಕಬ್ಬು ನಿರಂತರವಾಗಿ ೨೪ ಗಂಟೆಗಳ ಕಾಲ ಅರೆದರೆ ಇಳುವರಿಯನ್ನು ಶೇ.೮ ರಿಂದ ಶೇ.೮.೫ರವರೆಗೆ ಕೊಂಡೊಯ್ಯಬಹುದು. ನಿತ್ಯ ೫ ಸಾವಿರ ಟನ್ ಕಬ್ಬು ಅರೆಯುವ ಜಾಗದಲ್ಲಿ ೨೫೦ ರಿಂದ ೩೫೦ ಟನ್ ಕಬ್ಬು ಅರೆಯುತ್ತಿರುವುದರಿಂದ ಇಳುವರಿ ಕುಂಠಿತಗೊಂಡಿದೆ. ಈ ಸಾಲಿನಲ್ಲಿ ಕಾರ್ಖಾನೆಯ ಪ್ರಸ್ತುತ ಇಳುವರಿ ಶೇ.೬.೧೦ಕ್ಕೆ ಕುಸಿದಿದೆ ಎಂದು ಹೇಳಲಾಗಿದೆ.ಸಹ ವಿದ್ಯುತ್ ಘಟಕದಲ್ಲಿ ೧೬.೯೧ ಲಕ್ಷ ಯೂನಿಟ್ ಉತ್ಪಾದನೆ: ಪ್ರಸಕ್ತ ಸಾಲಿನಲ್ಲಿ ಮೈಷುಗರ್ ಕಾರ್ಖಾನೆ ಸಹ ವಿದ್ಯುತ್ ಘಟಕದಿಂದ ೧೬.೯೧ ಲಕ್ಷ ಯೂನಿಟ್ ವಿದ್ಯುತ್ ಉತ್ಪಾದಿಸಿದ್ದು, ಇದರಲ್ಲಿ ೭,೭೩,೪೦೦ ಯೂನಿಟ್ ವಿದ್ಯುತ್‌ನ್ನು ಪ್ರತಿ ಯೂನಿಟ್‌ಗೆ ೫.೯೫ ರು.ನಂತೆ ಮಾರಾಟ ಮಾಡಲಾಗಿದೆ. ಇದರಿಂದ ೫೬ ಲಕ್ಷ ರು. ಆದಾಯ ಬಂದಿರುವುದಾಗಿ ಕಾರ್ಖಾನೆ ಅಧಿಕಾರಿಗಳು ತಿಳಿಸಿದ್ದಾರೆ. ನಿತ್ಯ ಕಾರ್ಖಾನೆಯಲ್ಲಿ ೩ ಸಾವಿರ ಟನ್ ಕಬ್ಬು ಅರೆಯುವಂತಾದರೆ ನಿತ್ಯ ೮ ರಿಂದ ೯ ಲಕ್ಷ ರು. ಮೌಲ್ಯದ ವಿದ್ಯುತ್ ಉತ್ಪಾದಿಸಬಹುದು. ವಿದ್ಯುತ್ ಉತ್ಪಾದನೆಯಲ್ಲಿ ಮೈಷುಗರ್ ಸಂಪೂರ್ಣ ಸ್ವಾವಲಂಬನೆ ಸಾಧಿಸಬಹುದು ಎಂದಿದ್ದಾರೆ.

ಮೈಷುಗರ್ ವ್ಯಾಪ್ತಿಯ ಕಬ್ಬಿನ ಲಭ್ಯತೆವಿಭಾಗಗಳು, ರೈತರ ಸಂಖ್ಯೆ, ಒಪ್ಪಿಗೆ ಕಬ್ಬು, ಒಪ್ಪಿಗೆ ರಹಿತ ಒಟ್ಟು (ಟನ್‌ಗಳಲ್ಲಿ)---------------------------------------------------------------------------------------- ಮಂಡ್ಯ ೪೪೮ ೪೦೦೦೦ ೧೫೦೦೦ ೫೫೦೦೦ಕೊತ್ತತ್ತಿ ೩೮೮ ೩೩೪೭೩ ೧೬೫೨೭ ೫೦೦೦೦ಗುತ್ತಲು ೪೦೮ ೩೮೨೧೦ ೬೭೯೦ ೪೫೦೦೦ಹನಕೆರೆ ೨೬೯ ೨೧೦೯೦ ೮೯೧೦ ೩೦೦೦೦ಕೀಲಾರ ೧೯೮ ೧೬೮೩೦ ೧೩೧೭೦ ೩೦೦೦೦ಹೊಳಲು ೩೮೮ ೩೦೪೭೦ ೯೫೩೦ ೪೦೦೦೦ಶಿವಳ್ಳಿ ೯೩ ೭೮೮೫ ೧೭೧೧೫ ೨೫೦೦೦ಕೆರಗೋಡು ೧೯೮ ೧೭೨೯೫ ೭೭೦೫ ೨೫೦೦೦----------------------------------------ಒಟ್ಟು ೨೩೯೦ ೨೦೫೨೫೩ ೯೪೭೪೭ ೩೦೦೦೦೦----------------------------------------

‘ಕಬ್ಬು ಕಟಾವು ಮಾಡುವುದಕ್ಕೆ ಕೂಲಿ ಕಾರ್ಮಿಕರನ್ನು ಕರೆತರುವುದಕ್ಕೆ ಎಲ್ಲ ರೀತಿಯ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ರೈತರು ಆತಂಕಕ್ಕೆ ಒಳಗಾಗುವುದು ಬೇಡ. ಈಗಾಗಲೇ ೧೪೬ ಬ್ಯಾಚ್‌ಗಳನ್ನು ಕಬ್ಬು ಕಟಾವು ಮಾಡಲು ಸಿದ್ಧಪಡಿಸಿಕೊಂಡಿದ್ದೇವೆ. ಆ.೨೦ರ ವೇಳೆಗೆ ಕಬ್ಬು ಅರೆಯುವಿಕೆ ಸುಗಮವಾಗಿ ಕಾರ್ಯಾಚರಣೆಗೊಳ್ಳಲಿದೆ.’- ಡಾ.ಎಚ್.ಎನ್.ನಾಗರಾಜು, ವ್ಯವಸ್ಥಾಪಕ ನಿರ್ದೇಶಕರು, ಮೈಷುಗರ್ ಕಾರ್ಖಾನೆ