ಪೌರಾಣಿಕ ನಾಟಕಗಳು ಸಂಸ್ಕೃತಿ, ಪರಂಪರೆ ಪ್ರತೀಕ: ವಿಜಯರಾಮೇಗೌಡ

| Published : May 06 2024, 12:31 AM IST / Updated: May 06 2024, 12:32 AM IST

ಪೌರಾಣಿಕ ನಾಟಕಗಳು ಸಂಸ್ಕೃತಿ, ಪರಂಪರೆ ಪ್ರತೀಕ: ವಿಜಯರಾಮೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ನಮ್ಮ ಜನಪದರು ತಮಗೊದಗಿ ಬರುವ ಸಂಕಷ್ಟಗಳನ್ನು ಮರೆಯಲು, ಕಷ್ಟ, ಮೋಸಗೊಂಡವರಿಗೆ ಖಂಡಿತ ಸುಖ, ನ್ಯಾಯ ಸಿಗುತ್ತೆದೆಂದು ಧೈರ್ಯ ಮೂಡಿಸಲು ರಂಗಭೂಮಿ ನಾಟಕಗಳನ್ನು ಅಭಿನಯಿಸಲಾರಂಭಿಸಿದರು. ಅದರಂತೆ ಗ್ರಾಮೀಣ ಪ್ರದೇಶದ ಜನತೆ ಒಳ್ಳೆ ಮಾರ್ಗದಲ್ಲಿ ನಡೆಯಬೇಕು. ನಮ್ಮ ಪರಂಪರೆ ರಕ್ಷಣೆಗೆ ಮುಂದಾಗಬೇಕು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಪೌರಾಣಿಕ ನಾಟಕಗಳು ನಮ್ಮ ಸಂಸ್ಕೃತಿ, ಪರಂಪರೆ ಪ್ರತೀಕವಾಗಿದ್ದು, ನಾಟಕಗಳಲ್ಲಿ ಬರುವ ಒಳ್ಳೆಯ ವಿಚಾರಗಳು ನೆಮ್ಮದಿ ಬದುಕಿಗೆ ಸಹಕಾರಿಯಾಗಿವೆ ಎಂದು ಕಾಂಗ್ರೆಸ್ ಮುಖಂಡ ವಿಜಯರಾಮೇಗೌಡ ಹೇಳಿದರು.

ತಾಲೂಕಿನ ಬಲ್ಲೇನಹಳ್ಳಿ ಬಸವೇಶ್ವರ ಮತ್ತು ಆರೆಕಲ್ಲಮ್ಮ ನಾಟಕ ಮಂಡಳಿ ಆಯೋಜಿಸಿದ್ದ ಮಹಿಷಾಸುರ ಮರ್ದಿನಿ ಪೌರಾಣಿಕ ನಾಟಕ ಉದ್ಘಾಟಿಸಿ ಮಾತನಾಡಿ, ನಾಟಕಗಳು ನೀತಿಯುಕ್ತ ದುಷ್ಟರ ಶಿಕ್ಷೆ ಮತ್ತು ನಿಷ್ಟರ ರಕ್ಷೆಯನ್ನು ಒಳಗೊಂಡಿವೆ ಎಂದರು.

ಮಹಾ ಭಾರತ, ರಾಮಾಯಣ ಮಹಾ ಕಾವ್ಯದ ಕತೆಗಳು ನಮಗೆ ನ್ಯಾಯ ಮಾರ್ಗದಲ್ಲಿ ಹೋಗಲು ತಿಳಿಸುತ್ತವೆ. ಅನ್ಯಾಯದಲ್ಲಿ ನಡೆದವರಿಗೆ ಪ್ರಾರಂಭದಲ್ಲಿ ಯಶಸ್ಸು ಸಿಗಬಹುದು. ಆದರೆ, ಅಂತಿಮವಾಗಿ ಕಷ್ಟಗಳು ಎದುರಾಗುತ್ತವೆ ಎಂದು ಎಚ್ಚರಿಸಿದರು.

ನಮ್ಮ ಜನಪದರು ತಮಗೊದಗಿ ಬರುವ ಸಂಕಷ್ಟಗಳನ್ನು ಮರೆಯಲು, ಕಷ್ಟ, ಮೋಸಗೊಂಡವರಿಗೆ ಖಂಡಿತ ಸುಖ, ನ್ಯಾಯ ಸಿಗುತ್ತೆದೆಂದು ಧೈರ್ಯ ಮೂಡಿಸಲು ರಂಗಭೂಮಿ ನಾಟಕಗಳನ್ನು ಅಭಿನಯಿಸಲಾರಂಭಿಸಿದರು. ಅದರಂತೆ ಗ್ರಾಮೀಣ ಪ್ರದೇಶದ ಜನತೆ ಒಳ್ಳೆ ಮಾರ್ಗದಲ್ಲಿ ನಡೆಯಬೇಕು. ನಮ್ಮ ಪರಂಪರೆ ರಕ್ಷಣೆಗೆ ಮುಂದಾಗಬೇಕು ಎಂದರು.

ಆಧುನಿಕತೆ ಒತ್ತಡಕ್ಕೆ ಸಿಲುಕಿ ಪ್ರಸ್ತುತ ಗ್ರಾಮೀಣ ಪ್ರದೇಶದ ಬಯಲು ನಾಟಕಗಳು ತಮ್ಮ ಗತ ವೈಭವವನ್ನು ಕಳೆದುಕೊಳ್ಳುತ್ತಿವೆ. ಯುವಕರು ಟಿವಿ ಮತ್ತು ಮೊಬೈಲ್ ಗುಂಗಿನಿಂದ ಹೊರಬಂದು ಗ್ರಾಮೀಣ ಕಲೆಗಳ ಪುನರುತ್ಥಾನದ ಕಡೆಗೆ ಮುಖ ಮಾಡಬೇಕು ಎಂದು ಆಗ್ರಹಿಸಿದರು.

ಸಮಾಜಸೇವಕ ಆರ್‌ಟಿಒ ಅಧಿಕಾರಿ ಮಲ್ಲಿಕಾರ್ಜುನ್ ಮಾತನಾಡಿ, ನೀತಿ ಮತ್ತು ಮೌಲ್ಯಯುತ ಸಂದೇಶ ಸಾರುವ ಪೌರಾಣಿಕ ನಾಟಕದ ಸಂದೇಶ ಬದುಕಿನಲ್ಲಿ ಅಳವಡಿಸಿಕೊಂಡರೆ ಬದುಕು ಉತ್ತಮವಾಗುತ್ತದೆ ಎಂದರು.

ಸಾಹಿತಿ ಬಲ್ಲೇನಹಳ್ಳಿ ಮಂಜುನಾಥ್ ಪೌರಾಣಿಕ ನಾಟಕಗಳ ಮಹತ್ವ ಮತ್ತು ಅದನ್ನು ಮಂಡ್ಯ ಜಿಲ್ಲೆಯ ಜನ ಬದುಕಿನ ಉಸಿರಾಗಿಸಿಕೊಂಡ ವಿಚಾರಗಳ ಬಗ್ಗೆ ಮಾತನಾಡಿದರು. ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ವಿ.ಡಿ.ಹರೀಶ್, ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಎಂ.ರಾಮಚಂದ್ರ, ಶಾಸಕರ ಸಹೋದರ ಎಚ್.ಟಿ.ಲೋಕೇಶ್, ಮಡುವಿನಕೋಡಿ ಮಾದವ ಪ್ರಸಾದ್, ಪುಟ್ಟಸ್ವಾಮೀಗೌಡ ಗ್ರಾಮದ ಮುಖಂಡರಾದ ದೊಡ್ಡಪಾಪೇಗೌಡ, ಬಿ.ಟಿ.ಪ್ರಕಾಶ್, ಬಿ.ವಿ.ಪುಟ್ಟರಾಜು, ಬಿ.ಎಸ್.ನಂದೀಶ್, ಬಿ.ಸಿರಮೇಶ್, ಯೋಗೇಶ್, ಬಿ.ವಿ ಮಾದು, ಉಮೇಶ್, ಮೆಡಿಕಲ್ ಅಶೋಕ್, ನಾಟಕದ ಕಂಪನಿ ಮ್ಯಾನೇಜರ್ ಗಳಾದ ಪಟೇಲ್ ಸ್ವಾಮೀಗೌಡ, ರಾಮಕೃಷ್ಣಗೌಡ, ನಾಟಕದ ಸ್ಟೇಜ್ ಮ್ಯಾನೇಜರ್ ಗಳಾದ ಸೋಮಶೇಖರ್, ಪ್ರಶಾಂತ್ ಕುಮಾರ್, ನಾಟಕದ ಹಾರ್‍ಮೋನಿಯಂ ಮಾಸ್ತರ್ ಶಾಂತರಾಜು ಸೇರಿದಂತೆ ಸುತ್ತ ಮುತ್ತಲ ಗ್ರಾಮಗಳ ಯಜಮಾನರುಗಳು ಭಾಗವಹಿಸಿದ್ದರು.