ಮುರುಡೇಶ್ವರ ಬಸ್ತಿಮಕ್ಕಿಯ ಶ್ರೀ ರಾಘವೇಶ್ವರ ಭಾರತಿ ಹವ್ಯಕ ಸಭಾಭವನದಲ್ಲಿ ಶ್ರೀ ಮಹಿಷಾಸುರ ಮರ್ಧಿನಿ ಯಕ್ಷಕಲಾ ಪ್ರತಿಷ್ಠಾನ ಗೋಳಿಕುಂಬ್ರಿ, ಉತ್ತರಕೊಪ್ಪ ಹಾಗೂ ಸಪ್ತಕ ಬೆಂಗಳೂರು ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗಯೊಂದಿಗೆ ೧೨ನೇ ವರ್ಷದ ಪೌರಾಣಿಕ ಯಕ್ಷಗಾನ ಸಪ್ತಾಹ ಫೆ.೬ರಿಂದ ಫೆ.೧೨ರ ತನಕ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಭಟ್ಕಳ

ಮುರುಡೇಶ್ವರ ಬಸ್ತಿಮಕ್ಕಿಯ ಶ್ರೀ ರಾಘವೇಶ್ವರ ಭಾರತಿ ಹವ್ಯಕ ಸಭಾಭವನದಲ್ಲಿ ಶ್ರೀ ಮಹಿಷಾಸುರ ಮರ್ಧಿನಿ ಯಕ್ಷಕಲಾ ಪ್ರತಿಷ್ಠಾನ ಗೋಳಿಕುಂಬ್ರಿ, ಉತ್ತರಕೊಪ್ಪ ಹಾಗೂ ಸಪ್ತಕ ಬೆಂಗಳೂರು ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗಯೊಂದಿಗೆ ೧೨ನೇ ವರ್ಷದ ಪೌರಾಣಿಕ ಯಕ್ಷಗಾನ ಸಪ್ತಾಹ ಫೆ.೬ರಿಂದ ಫೆ.೧೨ರ ತನಕ ನಡೆಯಲಿದೆ ಎಂದು ಯಕ್ಷಗಾನ ಸಪ್ತಾಹ ನಡೆಯಲಿದೆ.

ಪೌರಾಣಿಕ ಯಕ್ಷೋತ್ಸವದಲ್ಲಿ ಫೆ.೬ರಂದು ಮೀನಾಕ್ಷಿ ಕಲ್ಯಾಣ, ೭ರಂದು ಬ್ರಹ್ಮ ಕಪಾಲ, ೮ರಂದು ರಾಮಾಂಜನೇಯ, ೯ರಂದು ರೇಣುಕಾ ಮಹಾತ್ಮೆ, ೧೦ರಂದು ರಾಜಾಯಯಾತಿ, ೧೧ರಂದು ಗದಾಯುದ್ಧ ರಕ್ತರಾತ್ರಿ ಹಾಗೂ ೧೨ರಂದು ಕೃಷ್ಣ ಸಂಧಾನ ಯಕ್ಷಗಾನ ಪ್ರದರ್ಶನವಾಗಲಿದೆ. ಫೆ.೬ರಂದು ಸಂಜೆ. ೬.೩೦ಕ್ಕೆ ಸಭಾ ಸಂವಿಧಾನ ಕಾರ್ಯಕ್ರಮದ ಉದ್ಘಾಟನೆಯನ್ನು ಉದ್ಯಮಿ ಕೃಷ್ಣಮೂರ್ತಿ ಮಂಜ ಮಾರಣಕಟ್ಟೆ ನೆರವೇರಿಸಲಿದ್ದು, ಸಭಾಧ್ಯಕ್ಷರಾಗಿ ಕೇಂದ್ರ ಸರ್ಕಾರದ ಸಾಂಬಾರು ಮಂಡಳಿ ಸದಸ್ಯ ಪ್ರಸನ್ನ ಕೆರೆಕೈ ಖರ್ವಾ-ಹೊನ್ನಾವರದ ವೇ.ಮೂ. ಗಜು ಭಟ್ಟ, ಕೆಡಿಸಿಸಿ. ಬ್ಯಾಂಕ್ ನಿರ್ದೇಶಕ ವಿಶ್ವನಾಥ ಭಟ್ ಖರ್ವಾ, ಉ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ರಾಧಾಕೃಷ್ಣ ಭಟ್, ಅನಂತ ಕಲಾ ಪ್ರತಿಷ್ಠಾನದ ಅಧ್ಯಕ್ಷ ವಿ.ಎಂ. ಭಟ್ಟ, ಸಮಾಜ ಸೇವಕ ಎನ್.ಎನ್. ಕಾಮತ್ ಮುರ್ಡೇಶ್ವರ, ಯಕ್ಷಗಾನ ಕಲಾವಿದ ಗಣಪತಿ ಹೆಗಡೆ ತೋಟಿಮನೆ ಮುಂತಾದವರು ಉಪಸ್ಥಿತರಿರಲಿದ್ದಾರೆ.

ಫೆ. ೧೨ರಂದು ಸಮಾರೋಪ ಸಮಾರಂಭ ನಡೆಯಲಿದ್ದು, ಯಕ್ಷಕಲಾ ವಿಶೇಷ ಪೋಷಕ ಹಾಗೂ ಉದ್ಯಮಿ ನಿರಂಜನ್ ಜೈನ್ ಗೋಳಿಕುಂಬ್ರಿ, ಕೆಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಶಿವಾನಂದ ಹೆಗಡೆ, ಕಡತೋಕಾ, ಭಟ್ಕಳ ಡಿವೈಎಸ್ಪಿ ಮಹೇಶ ಎಂ.ಕೆ., ಮುರ್ಡೇಶ್ವರ ಲಯನ್ಸ್ ಕ್ಲಬ್ ಅಧ್ಯಕ್ಷ ಕಿರಣ ಕಾಯ್ಕಿಣಿ, ನಿವೃತ್ತ ಸೈನಿಕ ಹಾಗೂ ಭಟ್ಕಳ ವಲಯ ಅಧ್ಯಕ್ಷ ಎಂ.ವಿ. ಹೆಗಡೆ, ಹವ್ಯಾಸಿ ಕಲಾವಿದ ಎಂ.ಪಿ. ಭಂಡಾರಿ ಉಪಸ್ಥಿತರಿರುವರು. ಖ್ಯಾತ ಯಕ್ಷಗಾನ ಕಲಾವಿದ ದಿ. ಶ್ರೀಪಾದ ಹೆಗಡೆ ಹಡಿನಬಾಳ ಇವರ ಸ್ಮರಣಾರ್ಥ ತಿಮ್ಮಪ್ಪ ಹೆಗಡೆ ಶಿರಳಗಿ ಇವರಿಗೆ ಪ್ರಶಸ್ತಿ ಪ್ರಧಾನ ನಡೆಯಲಿದೆ ಎಂದು ಶ್ರೀ ಮಹಿಷಾಸುರ ಮರ್ಧಿನಿ ಯಕ್ಷಕಲಾ ಪ್ರತಿಷ್ಠಾನದ ಅಧ್ಯಕ್ಷ ನಾಗರಾಜ ಕೆ. ಮದ್ಯಸ್ಥ, ಯಕ್ಷಗಾನ ಸಪ್ತಾಹದ ಗೌರವಾಧ್ಯಕ್ಷ ನಾಗರಾಜ ಎಂ. ಭಟ್ಟ, ಬೇಂಗ್ರೆ, ಪದಾಧಿಕಾರಿಗಳು ಹಾಗೂ ಸದಸ್ಯರು ಪ್ರಕಟಣೆಯಲ್ಲಿ ಕೋರಿದ್ದಾರೆ.