ಬನ್ನೂರಿನಲ್ಲಿ ಗ್ರಾಮ ಚಲೋ ಅಭಿಯಾನ

| Published : Feb 11 2024, 01:47 AM IST

ಸಾರಾಂಶ

ರಾಜ್ಯಾಧ್ಯಕ್ಷರ ಅನುಮತಿಯಂತೆ ಕರ್ನಾಟಕದ ಪ್ರತಿ ಗ್ರಾಮ, ತಾಲೂಕು, ಜಿಲ್ಲಾ ನಗರ ಪ್ರದೇಶದಲ್ಲಿ ಗ್ರಾಮ ಚಲೋ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಪ್ರತಿ ವಾರ್ಡ್ನ ಸದಸ್ಯರು ತಮ್ಮ ವಾರ್ಡ ಹೊರತು ಪಡಿಸಿ ಮತ್ತೊಂದು ವಾರ್ಡ್ಗೆ ಹೋಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಯೋಜನೆಯನ್ನು ಜನರಿಗೆ ತಿಳಿಸಿ, ದೇಶದ ಸುಭದ್ರ ನಿರ್ಮಾಣಕ್ಕೆ ಮತ್ತೋಮ್ಮೆ ಮೋದಿಜೀ ಅವರನ್ನು ಪ್ರಧಾನ ಮಂತ್ರಿಯನ್ನಾಗಿ ಮಾಡುವಂತ ಕಾರ್ಯಕ್ರಮವನ್ನು ಮೂರು ದಿನ ಹಮ್ಮಿಕೊಂಡು ನಡೆಸಲಾಗುತ್ತಿದೆ

ಕನ್ನಡಪ್ರಭ ವಾರ್ತೆ ಬನ್ನೂರು

ಪಟ್ಟಣದಲ್ಲಿ ಬಿಜೆಪಿ ಜಿಲ್ಲಾ ಕಾರ್ಯಕಾರಣಿ ಸದಸ್ಯ ಎನ್.ಎಂ. ರಾಮಚಂದ್ರ ನೇತೃತ್ವದಲ್ಲಿ ಗ್ರಾಮ ಚಲೋ ಅಭಿಯಾನ ಕಾರ್ಯಕ್ರಮ ಶನಿವಾರ ನಡೆಯಿತು.

ಎಂ.ಎಂ. ರಸ್ತೆಯ ಗೋಡೆಯ ಮೇಲೆ ಮತ್ತೊಮ್ಮೆ ಮೋದಿ 2024, ಬಿಜೆಪಿಯೇ ಭರವಸೆ. ನಿಮ್ಮ ಮತ ಬಿಜೆಪಿಗೆ ಎನ್ನುವಂತ ಬರಹವನ್ನು ಜಿಲ್ಲಾ ಕಾರ್ಯಕಾರಣಿ ಸದಸ್ಯ ಎನ್.ಎಂ. ರಾಮಚಂದ್ರ ನೇತೃತ್ವದಲ್ಲಿ ಬರೆಯುವ ಮೂಲಕ ಕಾರ್ಯಕ್ರಮಕ್ಕೆ ಬಿಜೆಪಿ ವಾರ್ಡ್ ಸದಸ್ಯರ ಸಮ್ಮುಖದಲ್ಲಿ ಚಾಲನೆ ನೀಡಿದರು.

ನಂತರ ಎನ್.ಎಂ. ರಾಮಚಂದ್ರ ಮಾತನಾಡಿ, ರಾಜ್ಯಾಧ್ಯಕ್ಷರ ಅನುಮತಿಯಂತೆ ಕರ್ನಾಟಕದ ಪ್ರತಿ ಗ್ರಾಮ, ತಾಲೂಕು, ಜಿಲ್ಲಾ ನಗರ ಪ್ರದೇಶದಲ್ಲಿ ಗ್ರಾಮ ಚಲೋ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಪ್ರತಿ ವಾರ್ಡ್ನ ಸದಸ್ಯರು ತಮ್ಮ ವಾರ್ಡ ಹೊರತು ಪಡಿಸಿ ಮತ್ತೊಂದು ವಾರ್ಡ್ಗೆ ಹೋಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಯೋಜನೆಯನ್ನು ಜನರಿಗೆ ತಿಳಿಸಿ, ದೇಶದ ಸುಭದ್ರ ನಿರ್ಮಾಣಕ್ಕೆ ಮತ್ತೋಮ್ಮೆ ಮೋದಿಜೀ ಅವರನ್ನು ಪ್ರಧಾನ ಮಂತ್ರಿಯನ್ನಾಗಿ ಮಾಡುವಂತ ಕಾರ್ಯಕ್ರಮವನ್ನು ಮೂರು ದಿನ ಹಮ್ಮಿಕೊಂಡು ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಪ್ರಧಾನ ಮಂತ್ರಿ ಮಾಡಿರುವಂತ ಆಯುಷ್ಮಾನ್ ಭಾರತ್, ಕಿಸಾನ್ ಸಮ್ಮಾನ್, ಉಜ್ವಲ ಯೋಜನೆ, ಜಲಜೀವನ್ ಮಿಷನ್, ನಾರಿಶಕ್ತಿ ಅಧಿನಿಯಮ, ಜನಔಷಧಿ ಕೇಂದ್ರಗಳು, ಕೋವಿಡ್ ಉಚಿತ ಲಸಿಕೆ, ಪಂಚತೀರ್ಥ ಅಭಿವೃದ್ದಿ, ಕಾಶಿ ಮತ್ತು ಕೇದಾರನಾಥ ಅಭಿವೃದ್ದಿ, ನೇರ ನಗದು ವರ್ಗಾವಣೆ, ರೈತರಿಗೆ ಆರ್ಥಿಕ ನೆರವು, ರಾಷ್ಟ್ರೀಯ ಶಿಕ್ಷಣ ನೀತಿ, ಆಪರೇಷನ್ ಗಂಗಾ, ಆಪರೇಷನ್ ಅಜಯ್, ಸುರಕ್ಷಿತ್ ಮಾತೃತ್ವ ಅಭಿಯಾನ, ವಿಶ್ವಕರ್ಮ ಯೋಜನೆ, ವಂದೇ ಭಾರತ್ ಎಕ್ಸ್ಪ್ರೆಸ್ ರೈಲು, ಗರೀಬ್ ಕಲ್ಯಾಣ್ ಯೋಜನೆ, ಸರ್ಜಿಕಲ್ ದಾಳಿ, ತ್ರಿವಳಿ ತಲಾಕ್ ನಿಷೇಧ, ಮುದ್ರಾ ಯೋಜನೆ, ಆವಾಸ್ ಯೋಜನೆ, ಬೆಳೆ ವಿಮೆ ಯೋಜನೆ, ಮೇಕ್ ಇನ್ ಇಂಡಿಯಾ, ಪಿಂಚಣಿ ಯೋಜನೆ, ರಸ್ತೆ ಸಂಪರ್ಕ ಅಭಿವೃದ್ದಿ, ಸಾಗರ ಮಾಲಾ ಯೋಜನೆ, ಏಷ್ಯಾದ ಅತಿ ಉದ್ದದ ರೈಲ್ವೆ ನಿಲ್ದಾಣ ಹೀಗೆ ಹಲವಾರು ಯೋಜನೆಯನ್ನು ಜನರ ಗಮನಕ್ಕೆ ತರುವುದು ಈ ಗ್ರಾಮ ಚಲೋ ಅಭಿಯಾನದ ಉದ್ದೇಶ ಎಂದು ಅವರು ತಿಳಿಸಿದರು.

ಬಿಜೆಪಿ ಟೌನ್ ಅಧ್ಯಕ್ಷ ಪಿ. ಪ್ರಭಾಕರ್, ಕಾಳೇಗೌಡ, ರವಿ, ಚಲುವರಾಜು, ಸ್ವಾಮಿ, ವರದರಾಜು, ಸುರೇಶ್, ಗಣೇಶ್, ಸತೀಶ್, ಜಯರಾಮು ಇದ್ದರು.