ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದಲ್ಲಿ ಗುರುವಾರ ವಿವಿಯ ಒಡಂಬಡಿಕೆ ಸಂಸ್ಥೆಯಾದ ಬೆಂಗಳೂರಿನ ಮಹಾಲಕ್ಷ್ಮೀ ಬಡಾವಣೆಯ ನಾದಬ್ರಹ್ಮ ಹಂಸಲೇಖ ಅವರ ಹಂಸಲೇಖ ದೇಸೀ ವಿದ್ಯಾಸಂಸ್ಥೆಯುವರು ಐದನಿ ಸರ್ಟಿಫಿಕೇಟ್ ಕೋರ್ಸ್‌ಗಳ ವಿದ್ಯಾರ್ಥಿಗಳಿಗೆ ಚಿನ್ನ ಮತ್ತು ಬೆಳ್ಳಿ ಪದಕ ವಿತರಿಸಲಾಯಿತು.ಈ ವೇಳೆ ಮಾತನಾಡಿದ ನಾದಬ್ರಹ್ಮ ಡಾ. ಹಂಸಲೇಖ ಅವರು, ಸಂಗೀತ ವಿಶ್ವವಿದ್ಯಾಲಯವು ರಾಜ್ಯದಾದ್ಯಂತ ತನ್ನ ಕಲೆಯ ಹಿರಿಮೆಯನ್ನು ಸ್ಥಾಪಿಸುತ್ತಿದೆ. ಜೊತೆಗೆ ಒಡಂಬಡಿಕೆ ಸಂಸ್ಥೆಗಳ ಮೂಲಕ ಪ್ರದರ್ಶನ ಕಲೆಯನ್ನು ಪೋಷಿಸಿ ಬೆಳೆಸುತ್ತಿದೆ ಎಂದರು.ಕಾರ್ಯಕ್ರಮ ಉದ್ಘಾಟಿಸಿದ ಕುಲಪತಿ ಪ್ರೊಯ ನಾಗೇಶ್ ವಿ. ಬೆಟ್ಟಕೋಟೆ ಮಾತನಾಡಿ, ಪದಕ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿ, ವಿದ್ಯಾರ್ಥಿಗಳಿಗೆ ಕಲಿಕೆಯ ಜೊತೆಗೆ ಕಲೆಯನ್ನು ಬೆಳೆಸಲು ಸಲಹೆ ನೀಡಿದರು.ಹಂಸಲೇಖ ದೇಸೀ ಸಂಸ್ಥೆಯ ವಿದ್ಯಾರ್ಥಿಗಳು, ಐದನಿ ಸಂಗೀತ, ಸಿನಿಮಾ ಸುಗಮ ಸಂಗೀತ ಹಾಗೂ ಕರ್ನಾಟಕ ಸಂಗೀತದ ಗೀತೆಗಳನ್ನು ಹಾಡುವುದರ ಮೂಲಕ ಪ್ರೇಕ್ಷಕರಿಗೆ ರಸದೌತಣ ನೀಡಿದರು. ವಿದ್ಯಾರ್ಥಿಗಳಿಂದ ದೇಶಪ್ರೇಮವನ್ನು ಒಳಗೊಂಡಂತೆ ಗೀತೆಗಳನ್ನು ಹಾಡಿದರು.ಹಂಸಲೇಖ ಸಂಸ್ಥೆಯ ಪ್ರಾಂಶುಪಾಲೆ ಲತಾ ಹಂಸಲೇಖ, ಪರೀಕ್ಷಾಂಗ ಕುಲಸಚಿವ ಪ್ರೊ.ಎಂ.ಜಿ. ಮಂಜುನಾಥ್, ಪ್ರಭಾರ ಕುಲಸಚಿವೆ ಕೆ.ಎಸ್. ರೇಖಾ ಮೊದಲಾದವರು ಇದ್ದರು.