ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುನಾಡಹಬ್ಬ ದಸರಾ ಮಹೋತ್ಸವ ಅಂಗವಾಗಿ ಕೃಷ್ಣರಾಜ ಬುಲೇವಾರ್ಡ್ ರಸ್ತೆಯ ಶ್ರೀ ಚಾಮರಾಜ ಅರಸು ಬೋರ್ಡಿಂಗ್ ಶಾಲೆ ಆವರಣದಲ್ಲಿ ಆಯೋಜಿಸಿರುವ ಕೇಕ್ ಶೋ ಗೆ ಡಿಪಂಲ್ ಕ್ವೀನ್ ರಚಿತಾ ರಾಮ್ ಚಾಲನೆ ನೀಡಿದರು.ಆನೆ, 1500 ಕೆ.ಜಿ. ತೂಕದಲ್ಲಿ ನಿರ್ಮಿಸಿರುವ ಅಂಬಾರಿಯನ್ನು ಹೊತ್ತ ಆನೆ, ಹುಲಿ, ಜಿಂಕೆ, ಕರಡಿ, ಜಿರಾಫೆ, ದೊಡ್ಡಗಡಿಯಾರ, ಬೆಂಗಳೂರಿನ ಪ್ರತಿಷ್ಠಿತ ಎಚ್.ಎ.ಎಲ್. ವಿಮಾನ ನಿಲ್ದಾಣ, ಕೆ.ಆರ್.ಎಸ್ ಜಲಾಶಯ, ಅಂಬಾವಿಲಾಸ ಅರಮನೆ, ನಾಲ್ವಡಿ ಕೃಷ್ಣರಾಜ ಒಡೆಯರ್‌ಅವರ ಕಂಚಿನ ಪ್ರತಿಮೆ, ತಬಲ, ಆರ್ಮೋನಿಯಂ ಪೆಟ್ಟಿಗೆ, ಜಗತ್ಪ್ರಸಿದ್ಧ ಜಂಬೂಸವಾರಿ, ಐಪಿಎಲ್ ಟ್ರೋಫಿ ಆಕೃತಿಗಳನ್ನು ಸೇರಿದಂತೆ ವಿವಿಧ ಮಾದರಿಯಲ್ಲಿ ರಚಿಸಿದ್ದ ಕೇಕ್ ಗಳ ಪ್ರದರ್ಶನ ಇಲ್ಲಿ ನಡೆಯುತ್ತಿದೆ.ಈ ಎಲ್ಲಾ ಕೇಕ್ ಗಳನ್ನು ನೋಡಿ ಸಂಭ್ರಮಿಸಿದ ರಚಿತಾ ರಾಮ್‌ಅವರು, ಯಾವ ಯಾವ ಮಾದರಿಯ ಕೇಕ್‌ಗಳಿವೆ ಎಂಬ ಮಾಹಿತಿ ಪಡೆದರು. ಒಂದೇ ಸೂರಿನಡಿ ಆಯೋಜಿಸಿರುವ ಈ ಬೃಹತ್ ಕೇಕ್‌ಶೋ ನೋಡಿ ಆಶ್ಚರ್ಯಪಟ್ಟರು.ಕಲಾವಿದ ಲೆನಿನ್ ಕುಮಾರ್ ನೇತೃತ್ವದ ತಂಡದಲ್ಲಿ ಸುಮಾರು ಎರಡು ತಿಂಗಳಿಂದ ಕೇಕ್ ನಿರ್ಮಾಣ ಕಾರ್ಯ ನಡೆಯುತ್ತಿದೆ.