ಎಲ್ಲಾ ಜನಾಂಗದವರಿಗೂ ಆದ್ಯತೆ ನೀಡಿದ್ದ ನಾಡಪ್ರಭು ಕೆಂಪೇಗೌಡರು

| Published : Jun 28 2024, 12:47 AM IST

ಎಲ್ಲಾ ಜನಾಂಗದವರಿಗೂ ಆದ್ಯತೆ ನೀಡಿದ್ದ ನಾಡಪ್ರಭು ಕೆಂಪೇಗೌಡರು
Share this Article
  • FB
  • TW
  • Linkdin
  • Email

ಸಾರಾಂಶ

ತರೀಕೆರೆ, ನಾಡಪ್ರಭು ಕೆಂಪೇಗೌಡರು ಎಲ್ಲಾ ಜನಾಂಗದವರಿಗೂ ಆದ್ಯತೆ ನೀಡಿ ಬೆಂಗಳೂರನ್ನು ಕಟ್ಟಿಬೆಳೆಸಿ, ಸರ್ವರ ಅಗತ್ಯಕ್ಕೆ ತಕ್ಕಂತೆ ಕೆರೆ ಕಟ್ಟೆಗಳನ್ನು ನಿರ್ಮಾಣ ಮಾಡಿದ್ದರು. ವಿಜಯನಗರದ ಸಾಮಂತರಾಗಿಯೂ ಕಾರ್ಯ ನಿರ್ವಹಿಸಿದ್ದರು ಎಂದು ಉಪವಿಭಾಗಾಧಿಕಾರಿ ಡಾ, ಕಾಂತರಾಜ್ ಹೇಳಿದರು.

- ತಾಲೂಕು ಕಚೇರಿ ಸಭಾಂಗಣದಲ್ಲಿ ನಾಡಪ್ರಭು ಕೆಂಪೇಗೌಡರ ೫೧೫ ನೇ ಜಯಂತಿ

ಕನ್ನಡಪ್ರಭ ವಾರ್ತೆ, ತರೀಕೆರೆ

ನಾಡಪ್ರಭು ಕೆಂಪೇಗೌಡರು ಎಲ್ಲಾ ಜನಾಂಗದವರಿಗೂ ಆದ್ಯತೆ ನೀಡಿ ಬೆಂಗಳೂರನ್ನು ಕಟ್ಟಿಬೆಳೆಸಿ, ಸರ್ವರ ಅಗತ್ಯಕ್ಕೆ ತಕ್ಕಂತೆ ಕೆರೆ ಕಟ್ಟೆಗಳನ್ನು ನಿರ್ಮಾಣ ಮಾಡಿದ್ದರು. ವಿಜಯನಗರದ ಸಾಮಂತರಾಗಿಯೂ ಕಾರ್ಯ ನಿರ್ವಹಿಸಿದ್ದರು ಎಂದು ಉಪವಿಭಾಗಾಧಿಕಾರಿ ಡಾ, ಕಾಂತರಾಜ್ ಹೇಳಿದರು. ತರೀಕೆರೆ ತಾಲೂಕು ಆಡಳಿತ , ಒಕ್ಕಲಿಗ ಸಂಘದ ಸಂಯುಕ್ತಾಶ್ರಯದಲ್ಲಿ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ನಾಡಪ್ರಭು ಕೆಂಪೇಗೌಡರ ೫೧೫ ನೇ ಜಯಂತಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಹಾನ್ ವ್ಯಕ್ತಿಗಳ ಜಯಂತಿ ಯನ್ನು ಆಯಾ ಜನಾಂಗದರವರಷ್ಟೇ ಅಲ್ಲದೇ ಸರ್ವ ಜನಾಂಗದವರು ಒಗ್ಗೂಡಿ ಮಾಡಬೇಕು ಎಂದರು. ದಕ್ಷ ಆಡಳಿತಗಾರರಾಗಿದ್ದ ಕೆಂಪೇಗೌಡರು ನಿರ್ಮಾಣ ಮಾಡಿದ ಬೆಂಗಳೂರು ನಗರ ವಿಶ್ವವನ್ನೇ ತನ್ನತ್ತ ತಿರುಗಿ ನೋಡುವಂತೆ ಸುಸಜ್ಜಿತವಾಗಿ ಬೆಳೆದಿರುವುದಕ್ಕೆ ಅವರ ದೂರದೃಷ್ಠಿಯೇ ಮುಖ್ಯ ಕಾರಣ ಎಂದು ಹೇಳಿದರು. ತಾಲೂಕು ಚುಂಚಶ್ರೀ ಮಹಿಳಾ ಘಟಕ ಅಧ್ಯಕ್ಷೆ ರಾಜೇಶ್ವರಿ ನಂದಕುಮಾರ್ ಮಾತನಾಡಿ ವಿಜಯ ನಗರ, ಅರಸರ ಸಾಮಂತರಾಗಿದ್ದ ಶ್ರೀ ಕೆಂಪೇಗೌಡರು ಕಾರ್ಯನಿಮಿತ್ತ ಆಗಾಗ ವಿಜಯ ನಗರಕ್ಕೆ ಭೇಟಿ ನೀಡುತ್ತಿದ್ದ ಸಂದರ್ಭದಲ್ಲಿ ವಿಜಯನಗರದಂತೆಯೇ ಸಮೃದ್ಧ ಹಾಗೂ ಸುಸಜ್ಜಿತ ನಗರ ಕಟ್ಟುವ ಸಲುವಾಗಿ ಅನೇಕ ವಿದ್ವಾಂಸರ ಹಾಗೂ ಹಿತೈಷಿಗಳ ಸಲಹೆ ಮಾರ್ಗದರ್ಶನ ಪಡೆದು ಬೆಂಗಳೂರನ್ನು ಅಚ್ಚುಕಟ್ಟಾಗಿ ಅಭಿವೃದ್ಧಿ ಪಡಿಸಿದರು. ಅವರು ನಿರ್ಮಿಸಿದ ನಗರ ಇಂದು ಪ್ರಪಂಚದಲ್ಲಿ ಅತೀ ಸುಂದರ ನಗರವಾಗಿರುವುದಕ್ಕೆ ಅವರು ಪ್ರತಿಯೊಂದು ಜನಾಂಗದವರಿಗೂ ನೀಡುತ್ತಿದ್ದ ಪ್ರಾಮುಖ್ಯತೆಯೇ ಪ್ರಮುಖ ಕಾರಣ ಎಂದರು.ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ಎಮ್.ಉಮಾಶಂಕರ್ ಮಾತನಾಡಿ ನಾಡಪ್ರಭು ಶ್ರೀ ಕೆಂಪೇಗೌಡರು ಯಲಹಂಕವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಆಳ್ವಿಕೆ ನಡೆಸುತ್ತಿದ್ದ ಸಂದರ್ಭದಲ್ಲಿ ರಾಜ್ಯದ ಜನತೆಗೆ ಅಗತ್ಯ ವಾದ ಮೂಲಭೂತ ಸೌಲಭ್ಯ ಒಳಗೊಂಡ ಸುಂದರ ನಗರವನ್ನಾಗಿ ಮಾಡಬೇಕೆಂಬ ಸದುದ್ದೇಶದಿಂದ ಬೆಂಗಳೂರನ್ನು ಅಭಿವೃದ್ಧಿ ಪಡಿಸಿದರು. ಕಳೆದ ೪ ವರ್ಷಗಳಿಂದ ತರೀಕೆರೆ ತಾಲೂಕು, ಕಚೇರಿಯಲ್ಲಿ ಕೆಂಪೇಗೌಡರ ಭಾವಚಿತ್ರ ಇರಿಸುವಂತೆ ಮನವಿ ಮಾಡುತ್ತಾ ಬಂದಿದ್ದರು ಸಹ ಇದುವರೆಗೂ ತಾಲೂಕು ಕಚೇರಿ ಸಭಾಂಗಣದಲ್ಲಿ ನಾಡ ಪ್ರಭುಗಳ ಭಾವ ಚಿತ್ರ ಅಳವಡಿಸದೇ ಇರುವುದು ಅಕ್ಷಮ್ಯ. ತಾಲೂಕು ಆಡಳಿತ ಕೂಡಲೇ ಕಾರ್ಯ ಪ್ರವೃತ್ತವಾಗಿ ಕೆಂಪೇಗೌಡರ ಭಾವಚಿತ್ರವನ್ನು ಅನಾವರಣ ಮಾಡಬೇಕು ಎಂದು ಹೇಳಿದರು.ಈ ಸಂದರ್ಭದಲ್ಲಿ ತರೀಕೆರೆ ತಾಲೂಕು, ವಿವಿಧ ಇಲಾಖೆಗಳ ಅಧಿಕಾರಿ ವರ್ಗದವರು. ಒಕ್ಕಲಿಗರ ಸಂಘದ ಪದಾದಿಕಾರಿಗಳಾದ ಶಂಕರೇಗೌಡ, ಕೆ.ವಿ.ನಾಗೇಶ್ ಗೌಡ, ಕುಮಾರ್ ಗೌಡ, ಲಿಂಗದಹಳ್ಳಿ ಹೋಬಳಿ, ಘಟಕದ ಅಧ್ಯಕ್ಷರಾದ ತಮ್ಮಯ್ಯ, ಉಪಾಧ್ಯಕ್ಷ ಎನ್.ಎಸ್.ಹನುಮಂತಪ್ಪ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.-

28ಕೆಟಿಆರ್.ಕೆ.4ಃ

ತರೀಕೆರೆಯಲ್ಲಿ ತಾಲೂಕು ಆಡಳಿತ, ಒಕ್ಕಲಿಗರ ಸಂಘದಿಂದ ನಡೆದ ನಾಡಪ್ರಭು ಕೆಂಪೇಗೌಡರ ೫೧೫ ನೇ ಜಯಂತಿ ಕಾರ್ಯಕ್ರಮವನ್ನು ಉಪವಿಭಾಗಾಧಿಕಾರಿ ಡಾ .ಕಾಂತರಾಜು ತಾಲೂಕು, ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ಎಮ್. ಉಮಾಶಂಕರ್, ಉಪಾಧ್ಯಕ್ಷ ಕೆ.ವಿ. ನಾಗೇಶ್ ಗೌಡ ಲಿಂಗದಹಳ್ಳಿ ಹೋಬಳಿ ಘಟಕದ ಅಧ್ಯಕ್ಷ ತಮ್ಮಯ್ಯ, ಚುಂಚಶ್ರೀ ಮಹಿಳಾ ಸಂಘದ ಅಧ್ಯಕ್ಷೆ ರಾಜೇಶ್ವರಿ ನಂದಕುಮಾರ್ ಉದ್ಘಾಟನೆ ನೆರವೇರಿಸಿದರು.