ಸಾರಾಂಶ
ನೆಲಮಂಗಲ: ಸಮಾಜದ ಎಲ್ಲ ಸ್ಥರದ ಜನರ ಬದುಕಿಗೆ ಪೂರಕವಾದ ಸವಲತ್ತುಗಳನ್ನು ಕಲ್ಪಿಸಿಕೊಟ್ಟ ನಾಡಪ್ರಭು ಕೆಂಪೇಗೌಡರು ಜನತೆಯ ಬದುಕಿನ ಆಶಾಕಿರಣ ಎಂದು ಸಾಹಿತಿ ಡಾ.ಚೌಡಯ್ಯ ಹೇಳಿದರು.
ನೆಲಮಂಗಲ: ಸಮಾಜದ ಎಲ್ಲ ಸ್ಥರದ ಜನರ ಬದುಕಿಗೆ ಪೂರಕವಾದ ಸವಲತ್ತುಗಳನ್ನು ಕಲ್ಪಿಸಿಕೊಟ್ಟ ನಾಡಪ್ರಭು ಕೆಂಪೇಗೌಡರು ಜನತೆಯ ಬದುಕಿನ ಆಶಾಕಿರಣ ಎಂದು ಸಾಹಿತಿ ಡಾ.ಚೌಡಯ್ಯ ಹೇಳಿದರು.
ನಗರದ ದಿವ್ಯ ಜ್ಯೋತಿ ಕಾಲೇಜಿನ ಸಭಾಂಗಣದಲ್ಲಿ ನೆಲಮಂಗಲ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ 515ನೆಯ ನಾಡಪ್ರಭು ಕೆಂಪೇಗೌಡರ ಜಯಂತಿ ಹಾಗೂ ನೂತನ ಪದಾಧಿಕಾರಿಗಳಿಗೆ ಆದೇಶ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.ತಾಲೂಕು ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎನ್.ಜಿ.ಗೋಪಾಲ್ ಮಾತನಾಡಿ, ಕೆಂಪೇಗೌಡರ ಆಡಳಿತದ ಅವಧಿಯಲ್ಲಿ ಪಟ್ಟಣ ಮತ್ತು ಪೇಟೆಗಳನ್ನು ನಿರ್ಮಿಸುವುದರ ಜೊತೆಗೆ ಎಲ್ಲಾ ವ್ಯಾಪಾರಿಗಳಿಗೂ ಒಂದೊಂದು ಪೇಟೆಗಳನ್ನು ನಿರ್ಮಿಸಿಕೊಟ್ಟಂತಹ ಕೆಂಪೇಗೌಡರ ಪರಿಕಲ್ಪನೆಯಿಂದಾಗಿ ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿನುಗುತ್ತಿರುವ ಬೆಂಗಳೂರು ಬೃಹತ್ ಬೆಂಗಳೂರು ನಗರವಾಗಿದೆ ಎಂದು ಹೇಳಿದರು.
ಮಾಹಿತಿ ಹಕ್ಕು ಆಯೋಗದ ಮಾಜಿ ಅಧ್ಯಕ್ಷ ಎಲ್.ಕೃಷ್ಣ ಮೂರ್ತಿ ಮಾತನಾಡಿ, ವರ್ಷಕ್ಕೊಮ್ಮೆ ಜಯಂತಿ ಕಾರ್ಯಕ್ರಮವನ್ನು ರೂಪಿಸಿ ಹಾಡಿ ಹೊಗಳುವುದಕ್ಕಷ್ಟೇ ಸೀಮಿತವಾಗದೆ ಕೆಂಪೇಗೌಡ ಅವರ ಜೀವನ ಚರಿತ್ರೆ ಮತ್ತು ಆಡಳಿತದ ಬಗ್ಗೆ ಆಗಿಂದ್ದಾಗ್ಗೆ ಕಾರ್ಯಕ್ರಮ ರೂಪಿಸಲು ತಾಲೂಕು ಕಸಾಪ ಮುಂದಾಗಬೇಕೆಂದರು.ಕಸಾಪ ಅಧ್ಯಕ್ಷ ಬೈರನಹಳ್ಳಿ ಪ್ರಕಾಶ್ ಮಾತನಾಡಿ, ಕೆಂಪೇಗೌಡರ ಕಾರ್ಯಕ್ಷೇತ್ರ ಮತ್ತು ಅವರ ಭವಿಷ್ಯದ ಪರಿಕಲ್ಪನೆಯು ಇಂದಿನ ಮತ್ತು ಮುಂದಿನ ಜನರ ಅಭ್ಯುದಯಕ್ಕೆ ಪೂರಕವಾದದ್ದು ಎಂದರು.
ಇದೇ ಸಂದರ್ಭದಲ್ಲಿ ನೂತನವಾಗಿ ಆಯ್ಕೆಯಾದ ವಿವಿಧ ಪದಾಧಿಕಾರಿಗಳಿಗೆ ನೇಮಕಾತಿ ಪತ್ರವನ್ನು ವಿತರಿಸಲಾಯಿತು. ಕೇಂದ್ರ ಕಸಾಪ ಮಹಿಳಾ ಪ್ರತಿನಿಧಿ ಮಂಜುಳಾ ಸಿದ್ದರಾಜು, ಜಿಲ್ಲಾ ಪ್ರತಿನಿಧಿ ರಾಮಕೃಷ್ಣಯ್ಯ, ಕಸಾಪ ನಿಕಟಪೂರ್ವ ಅಧ್ಯಕ್ಷ ಬಿ.ಆರ್.ಪ್ರದೀಪ್ ಕುಮಾರ್, ಪ್ರಚಾರ ಸಮಿತಿ ಅಧ್ಯಕ್ಷ ರವಿಶಂಕರ್ ಗೌಡ, ಮಾಜಿಅಧ್ಯಕ್ಷ ಎನ್.ರಾಜ ಶೇಖರ್, ಡಿ.ಸಿದ್ದರಾಜು, ನಗರಾಧ್ಯಕ್ಷ ಮಲ್ಲೇಶ್, ಗಂಗರಾಜು, ಕಸಾಪ ಮಾಜಿಗೌರವ ಕಾರ್ಯದರ್ಶಿ ಡಾ.ಗಂಗರಾಜು, ಸಾಹಿತಿ ಶಿವಲಿಂಗಯ್ಯ, ಪ್ರಜಾಕವಿ ನಾಗರಾಜು, ಕಲಾವಿದರಾದ ಬೂದಿಹಾಳ್ ಕಿಟ್ಟಿ, ದಿನೇಶ್ ಚಿಕ್ಕಮಾರನಹಳ್ಳಿ, ಸಿ.ಹೆಚ್.ಸಿದ್ದಯ್ಯ ಹಲವರಿದ್ದರು.ಪೊಟೊ-30 ಕೆ ಎನ್ ಎಲ್ ಎಮ್ 1-
ನೆಲಮಂಗಲ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ 515ನೇ ನಾಡಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮದಲ್ಲಿ ಪರಿಷತ್‌ನ ನೂತನ ಪದಾಧಿಕಾರಿಗಳಿಗೆ ಆದೇಶ ಪತ್ರವನ್ನು ಸಾಹಿತಿ ಡಾ. ಚೌಡಯ್ಯ ವಿತರಿಸಿದರರು.