ನಾಡಪ್ರಭು ಕೆಂಪೇಗೌಡ ಪ್ರತಿಷ್ಠಾನದ ನಾಡಪ್ರಭು ಕೆಂಪೇಗೌಡ ರಾಜ್ಯ ಪ್ರಶಸ್ತಿ ಪುರಸ್ಕೃತ ಎಸ್.ಆರ್.ಕೆ. ಲ್ಯಾಡರ್ಸ್‌ನ ಮಾಲಕ ಕೇಶವ ಅಮೈ ಅವರಿಗೆ ಪುತ್ತೂರಿನಲ್ಲಿ ಅದ್ದೂರಿ ಮೆರವಣಿಗೆ ಮೂಲಕ ಸ್ವಾಗತ ನೀಡಿ, ಮುಕ್ರಂಪಾಡಿಯ ಎಸ್.ಆರ್.ಕೆ. ಲ್ಯಾಡರ್ಸ್ ಸಂಸ್ಥೆಯಲ್ಲಿ ಸನ್ಮಾನಿಸಲಾಯಿತು. ದರ್ಬೆ ವೃತ್ತದಿಂದ ತೆರೆದ ವಾಹನದಲ್ಲಿ ಕಲಶ, ಚೆಂಡೆ ವಾದ್ಯಗಳೊಂದಿಗೆ ಮೆರವಣಿಗೆ ನಡೆಸಲಾಯಿತು. ಸಂಸ್ಥೆಯ ಮಹಿಳಾ ಸಿಬ್ಬಂದಿ ಆರತಿ ಬೆಳಗಿ, ತಿಲಕ ಹಚ್ಚಿ ಬರಮಾಡಿಕೊಂಡರು. ಕೇಶವ ಅಮೈ ಅವರು ಪ್ರಶಸ್ತಿಯ ಶಾಲು, ಫಲಕ ಹಾಗೂ 100 ಗ್ರಾಂ ಬೆಳ್ಳಿಯ ಪದಕದೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು, ಪತ್ನಿ ಮಾಲತಿ, ಪುತ್ರ ಗಗನ್ ಹಾಗೂ ಹಿರಿಯ ಗುರು ಶಿವರಾಮ್ ಏನೆಕಲ್ ಜೊತೆಗಿದ್ದರು.
ಪುತ್ತೂರು: ನಾಡಪ್ರಭು ಕೆಂಪೇಗೌಡ ಪ್ರತಿಷ್ಠಾನದ ''''''''ನಾಡಪ್ರಭು ಕೆಂಪೇಗೌಡ ರಾಜ್ಯ ಪ್ರಶಸ್ತಿ'''''''' ಪುರಸ್ಕೃತ ಎಸ್.ಆರ್.ಕೆ. ಲ್ಯಾಡರ್ಸ್‌ನ ಮಾಲಕ ಕೇಶವ ಅಮೈ ಅವರಿಗೆ ಪುತ್ತೂರಿನಲ್ಲಿ ಅದ್ದೂರಿ ಮೆರವಣಿಗೆ ಮೂಲಕ ಸ್ವಾಗತ ನೀಡಿ, ಮುಕ್ರಂಪಾಡಿಯ ಎಸ್.ಆರ್.ಕೆ. ಲ್ಯಾಡರ್ಸ್ ಸಂಸ್ಥೆಯಲ್ಲಿ ಸನ್ಮಾನಿಸಲಾಯಿತು. ದರ್ಬೆ ವೃತ್ತದಿಂದ ತೆರೆದ ವಾಹನದಲ್ಲಿ ಕಲಶ, ಚೆಂಡೆ ವಾದ್ಯಗಳೊಂದಿಗೆ ಮೆರವಣಿಗೆ ನಡೆಸಲಾಯಿತು. ಸಂಸ್ಥೆಯ ಮಹಿಳಾ ಸಿಬ್ಬಂದಿ ಆರತಿ ಬೆಳಗಿ, ತಿಲಕ ಹಚ್ಚಿ ಬರಮಾಡಿಕೊಂಡರು. ಕೇಶವ ಅಮೈ ಅವರು ಪ್ರಶಸ್ತಿಯ ಶಾಲು, ಫಲಕ ಹಾಗೂ 100 ಗ್ರಾಂ ಬೆಳ್ಳಿಯ ಪದಕದೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು, ಪತ್ನಿ ಮಾಲತಿ, ಪುತ್ರ ಗಗನ್ ಹಾಗೂ ಹಿರಿಯ ಗುರು ಶಿವರಾಮ್ ಏನೆಕಲ್ ಜೊತೆಗಿದ್ದರು.ಸತೀಶ್ ಭಟ್ ಮಾತನಾಡಿ, ಈ ಪ್ರಶಸ್ತಿ ಕೇಶವ ಅಮೈ ಅವರ ನೌಕರರ ಪ್ರೀತಿ, ವಿಶ್ವಾಸ ಹಾಗೂ ತಂಡದ ಪರಿಶ್ರಮಕ್ಕೆ ಸಂದ ಗೌರವವಾಗಿದ್ದು, ಮುಂದಿನ ಸಾಧನೆಗೆ ಪ್ರೇರಣೆಯಾಗಲಿದೆ ಎಂದರು.
ಶಿವರಾಮ್ ಏನೆಕಲ್ ಮಾತನಾಡಿ, ಕೆಂಪೇಗೌಡ ಪ್ರಶಸ್ತಿ ಪ್ರದಾನ ವೇಳೆ ಉಪರಾಷ್ಟ್ರಪತಿ ಪ್ರೊಟೋಕಾಲ್ ಮೀರಿ ಮುಂದೆ ಬಂದು ಕೇಶವ ಅಮೈ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿರುವುದು ಅವರ ಸಾಧನೆಗೆ ದೊರೆತ ವಿಶೇಷ ಗೌರವ ಎಂದರು.ಶೇಷಪ್ಪ ರೈ ಮಾತನಾಡಿ, ಕೇಶವ ಅಮೈ ಅವರು ಮನೆಗಿಂತ ಸಿಬ್ಬಂದಿಗೆ ಹೆಚ್ಚಿನ ಆದ್ಯತೆ ನೀಡುವ ವ್ಯಕ್ತಿತ್ವ ಹೊಂದಿದ್ದು, ಪುತ್ತೂರಿನ ಹೆಸರನ್ನು ರಾಷ್ಟ್ರಮಟ್ಟಕ್ಕೆ ಕೊಂಡೊಯ್ಯುವ ಸಾಧಕರಾಗಿದ್ದಾರೆ ಎಂದು ಹೇಳಿದರು.
ಕೆಂಪೇಗೌಡ ಪ್ರತಿಷ್ಠಾನದ ಸಮಿತಿ ಸದಸ್ಯ ಯತೀಶ್ ಆರುವಾರ ಮಾತನಾಡಿ, ಸಮಾಜಕ್ಕೆ ಪ್ರೇರಣೆಯಾಗುವ ಸಾಧಕರನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗುತ್ತಿದ್ದು, ಕೇಶವ ಅಮೈ ಅವರ ಆಯ್ಕೆ ಯುವಜನತೆಗೆ ಸ್ಪೂರ್ತಿದಾಯಕ ಎಂದರು.ಉದ್ಯಮಿ ಆರ್.ಕೆ. ಭಟ್ ಮಾತನಾಡಿ, ಕೇಶವ ಅಮೈ ಸ್ವಾರ್ಥರಹಿತ ವ್ಯಕ್ತಿತ್ವ ಹೊಂದಿದ್ದು, ಅವರಿಗೆ ಈ ಪ್ರಶಸ್ತಿ ನ್ಯಾಯಯುತವಾಗಿ ಲಭಿಸಿದೆ ಎಂದು ಹೇಳಿದರು.
ಚೇತನ್ ಆನೆಗುಂಡಿ ಮಾತನಾಡಿ, ಈ ಪ್ರಶಸ್ತಿ ಅರ್ಜಿ ಅಥವಾ ಶಿಫಾರಸ್ಸಿನ ಮೂಲಕ ಸಿಗುವುದಲ್ಲ; ಸಮಾಜಕ್ಕೆ ಕೊಡುಗೆ ನೀಡಿದವರನ್ನು ಗುರುತಿಸಿ ನೀಡುವ ಗೌರವವಾಗಿದ್ದು, ಕೇಶವ ಅಮೈ ಅವರಿಗೆ ಲಭಿಸಿರುವುದು ಪುತ್ತೂರಿಗೆ ಹೆಮ್ಮೆ ಎಂದರು.ಸನ್ಮಾನ ಸ್ವೀಕರಿಸಿದ ಕೇಶವ ಅಮೈ, ಈ ಪ್ರಶಸ್ತಿಯನ್ನು ತಮ್ಮ ಎಸ್.ಆರ್.ಕೆ. ತಂಡಕ್ಕೆ ಅರ್ಪಿಸುವುದಾಗಿ ತಿಳಿಸಿದರು. ದೃಷ್ಟಿಹೀನರಾಗಿದ್ದರೂ ತಂಡದ ಸಹಕಾರದಿಂದ ಸಾಧನೆ ಸಾಧ್ಯವಾಗಿದ್ದು, ಮುಂದೆಯೂ ಕೃಷಿಕರಿಗಾಗಿ ಹೊಸ ಆವಿಷ್ಕಾರಗಳನ್ನು ಮಾಡುತ್ತಾ ಸಮಾಜಕ್ಕೆ ಸೇವೆ ಸಲ್ಲಿಸುವ ಸಂಕಲ್ಪ ವ್ಯಕ್ತಪಡಿಸಿದರು.ಸಂಸ್ಥೆಯ ಸಿಬ್ಬಂದಿ ದಿನೇಶ್ ವಂದಿಸಿದರು.
ಈ ಸಂದರ್ಭದಲ್ಲಿ ಸತೀಶ್ ಭಟ್, ಶೇಷಪ್ಪ ರೈ, ಶಿವರಾಮ್ ಏನೆಕಲ್, ಅಬ್ರಹಾಂ ಎಸ್.ಎ., ನಾಗೇಶ್ ಕೆಡೆಂಜಿ, ಕೆ.ಪಿ. ಮುಹಮ್ಮದ್ ಸಾದಿಕ್, ಪ್ರಮೋದ್ ಕೆ.ಕೆ., ಸುಂದರ ಗೌಡ ನಡುಬೈಲು, ಡಾ. ಶ್ರೀಧರ್ ಗೌಡ ಪಾಣತ್ತಿಲ, ಕುಸುಮ, ವಾರಿಜ ಬೆಳ್ಯಪ್ಪ ಗೌಡ, ಪುತ್ತೂರು ಉಮೇಶ್ ನಾಯಕ್, ಸೀತಾರಾಮ ಕೇವಳ, ಡಾ. ಶ್ರೀಪ್ರಕಾಶ್, ಲೋಕನಾಥ ಗೌಡ, ಶೇಖರ್, ರಮೇಶ್, ಜ್ಞಾನೇಶ್ ವಿಶ್ವಕರ್ಮ, ಗಿರೀಶ್, ಮೌನೇಶ್ ವಿಶ್ವಕರ್ಮ, ಲೋಕೇಶ್ ಬನ್ನೂರು, ಸತ್ಯವತಿ, ಹೇಮಾವತಿ, ಶ್ರೀಲತಾ ಹಾಗೂ ಸುಮಾ ಹರೀಶ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.