ಸಾಹಸ ಸಿಂಹ ವಿಷ್ಣುವರ್ಧನ್ ೧೬ನೇ ಪುಣ್ಯ ದಿನದ ಅಂಗವಾಗಿ ರಾಜ್ಯ ಮಟ್ಟದ ವಿಷ್ಣು ಪದಬಂಧ ಸ್ವರ್ಧೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ನೆಲ ಜಲ ಸಂಸ್ಕೃತಿಕ ವೇದಿಕೆಯ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್ ತಿಳಿಸಿದರು

ಕನ್ನಡಪ್ರಭ ವಾರ್ತೆ, ಚಾಮರಾಜನಗರ

ಸಾಹಸ ಸಿಂಹ ವಿಷ್ಣುವರ್ಧನ್ ೧೬ನೇ ಪುಣ್ಯ ದಿನದ ಅಂಗವಾಗಿ ರಾಜ್ಯ ಮಟ್ಟದ ವಿಷ್ಣು ಪದಬಂಧ ಸ್ವರ್ಧೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ನೆಲ ಜಲ ಸಂಸ್ಕೃತಿಕ ವೇದಿಕೆಯ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್ ತಿಳಿಸಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭ‍‍‍ವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಷ್ಣುವರ್ಧನ್ ಪುಣ್ಯಸ್ಮರಣೆ ಅಂಗವಾಗಿ ಡಿ. ೩೦ರಂದು ಮಂಗಳವಾರ ಬೆಳಗ್ಗೆ ೧೧ ಗಂಟೆಗೆ ನಗರದ ಜೆಎಚ್ ಪಟೇಲ್ ಸಭಾಂಗಣದಲ್ಲಿ ವಿಷ್ಣು ನೆನಪಿನೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದರು.

ರಾಜ್ಯದಲ್ಲೇ ಮೊದಲ ಬಾರಿಗೆ ೧೨ ಗಂಟೆಯಿಂದ ೧ ಗಂಟೆವರೆಗೆ ರಾಜ್ಯ ಮಟ್ಟದ ವಿಷ್ಣುವರ್ಧನ್ ರವರ ಕುರಿತು ವಿಷ್ಣು ಪದಬಂಧ ಸ್ವರ್ಧೆ ಏರ್ಪಡಿಸಿದ್ದು, ವಿಷ್ಣು ಪದಬಂಧ ವಿಜೇತರಿಗೆ ಮೊದಲ ಬಹುಮಾನವಾಗಿ ₹೧೫,೦೦೦, ಎರಡನೇ ಬಹುಮಾನವಾಗಿ ₹೧೦,೦೦೦, ಮೂರನೇ ಬಹುಮಾನವಾಗಿ ₹೫೦೦೦ ಹಾಗೂ ೫ ಸಮಾಧಾನಕರ ಬಹುಮಾನಗಳಿಗೆ ₹೨೦೦೦ ಸಾವಿರ ನೀಡಿ ಗೌರವಿಸಲಾಗುವುದು ಎಂದರು.

ಕಾರ್ಯಕ್ರಮವನ್ನುಡಿವೈಎಸ್ಪಿ ಸ್ನೇಹಾರಾಜ್ ಉದ್ಘಾಟಿಸಲಿದ್ದು, ವಿಷ್ಣುವರ್ಧನ್ ಭಾವಚಿತ್ರಕ್ಕೆ ಚುಡಾ ಅಧ್ಯಕ್ಷ ಮಹಮದ್ ಅಸ್ಗರ್ ಮುನ್ನಾ ಪುಷ್ಪಾರ್ಚನೆ ಮಾಡಲಿದ್ದಾರೆ, ನುರಿತ ಗಾಯಕರಿಂದ ವಿಷ್ಣು ಗಾಯನ ಹಮ್ಮಿಕೊಳ್ಳಲಾಗಿದೆ ಎಂದರು.

ಜಿಲ್ಲಾ ಬಿಜೆಪಿ ಪ್ರದಾನಕಾರ್ಯದರ್ಶಿ ವೃಷಬೇಂದ್ರಪ್ಪ ಸೇರಿದಂತೆ ಹಲವು ಚಲನಚಿತ್ರ ನಟರು ಭಾಗವಹಿಸಲಿದ್ದಾರೆ, ಸುರೇಶ್ ಎನ್. ಋಗ್ವೇದಿ ವಿಷ್ಣುವರ್ಧನ್ ಅವರಿಗೆ ನುಡಿನಮನ ಸಲ್ಲಿಸಲಿದ್ದಾರೆ ಎಂದರು.

ಪದಬಂಧ ಸ್ಪರ್ಧೆಯಲ್ಲಿ ಭಾಗವಹಿಸುವರು ಆಸಕ್ತರು ತಮ್ಮ ಹೆಸರನ್ನು ದೂರವಾಣಿಯ ಮೂಲಕ ಸೋಮವಾರ ಸಂಜೆ ೫:೦೦ ವರೆಗೆ ನೋಂದಾಯಿಸಿಕೊಳ್ಳಬೇಕಾಗಿ ದೂರವಾಣಿ ೯೮೮೦೮೨೦೪೬೨ ,೬೩೬೪೨೧೩೯೭೦, ೯೯೦೨೩೧೭೬೭೦, ೯೭೩೯೭೫೭೭೦೨, ೯೯೦೦೭೧೯೨೯೯. ಪ್ರವೇಶ ಶುಲ್ಕ ೧೦೦ ರೂಪಾಯಿ ಇರುತ್ತದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ರೈತಪರ ಹೋರಾಟಗಾರ ಆಲೂರು ಮಲ್ಲು, ಗಾಯಕ ಸುರೇಶ್‌ನಾಗ್, ವೇಣುಗೋಪಾಲ್, ಆನಂದ್ ಭಗೀರಥ್, ಕೂಸಣ್ಣ, ಮಹೇಶ್ ಇದ್ದರು,