ನಾಡು ನುಡಿಗಾಗಿ ಯಾರೊಂದಿಗೆ ರಾಜೀ ಮಾಡಿಕೊಳ್ಳುವುದಿಲ್ಲ-ಹನುಮಂತ

| Published : Nov 02 2024, 01:18 AM IST / Updated: Nov 02 2024, 01:19 AM IST

ಸಾರಾಂಶ

ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣಶೆಟ್ಟಿ ಶೆಟ್ಟಿ) ಬಣ ತಾಲೂಕು ಘಟಕದ ವತಿಯಿಂದ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಪಟ್ಟಣದಲ್ಲಿ ಜರುಗಿತು.

ಬ್ಯಾಡಗಿ: ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣಶೆಟ್ಟಿ ಶೆಟ್ಟಿ) ಬಣ ತಾಲೂಕು ಘಟಕದ ವತಿಯಿಂದ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಪಟ್ಟಣದಲ್ಲಿ ಜರುಗಿತು.

ಕಾರ್ಯಕ್ರಮ ಉದ್ಘಾಟಿಸಿ ಜಿಲ್ಲಾಧ್ಯಕ್ಷ ಹನುಮಂತ ಬೋವಿ ಮಾತನಾಡಿ, ಕನ್ನಡಿಗರಾದ ನಾವು ನಾಡು-ನುಡಿ, ಭಾಷೆಗಾಗಿ ಯಾರೊಂದಿಗೂ ರಾಜೀ ಮಾಡಿಕೊಳ್ಳುವ ಪ್ರಶ್ನೆಯಿಲ್ಲ. ನಮ್ಮೆಲ್ಲರ ಉಸಿರು ಕನ್ನಡವಾಗಿದ್ದು, ಅದಕ್ಕಾಗಿ ಯಾವುದೇ ತ್ಯಾಗಕ್ಕೂ ಸಿದ್ಧವಾಗಿದ್ದೇವೆ ಎಂದರು.

ರಾಜ್ಯದಲ್ಲಿ ನಾಮ ಫಲಕಗಳಲ್ಲಿ ಶೇ.50ಕ್ಕಿಂತ ಹೆಚ್ಚು ಕನ್ನಡ ಬಳಸಬೇಕು ಎಂಬ ಕೂಗು ಕೇಳಿ ಬರುತ್ತಿರುವುದು ನಾಚಿಕೆಗೇಡಿನ ಸಂಗತಿ, ಕೂಗದೇ, ಚೀರದೇ ಕನ್ನಡವನ್ನು ಉಳಿಸಿಕೊಳ್ಳಲು ಸಾಧ್ಯವೇ ಇಲ್ಲವೇ..? ರಾಜ್ಯ ಸರ್ಕಾರಕ್ಕೆ ನಮ್ಮ ಪ್ರಶ್ನೆಯಾಗಿದೆ. ಹೊರಗಿನಿಂದ ಬಂದವರು ನಮ್ಮೊಂದಿಗೆ ಎಲ್ಲರೂ ಕನ್ನಡವನ್ನು ಕಲಿಯಿರಿ. ಆಟೋ ಚಾಲಕರು ಬಳಸುವ ಕನ್ನಡ ಹಾಗೂ ಹೊಸ ಪ್ರಯತ್ನಗಳು ನಮ್ಮೆಲ್ಲರನ್ನು ಎಚ್ಚರಿಸುತ್ತಿವೆ ಎಂದರು.

ಇದೇ ಸಂದರ್ಭದಲ್ಲಿ ಪಟ್ಟಣದ ಪುರಸಭೆ ಪೌರ ಕಾರ್ಮಿಕರಿಗೆ ಕಾರ್ಯಕ್ರಮದ ಅಂಗವಾಗಿ ಸನ್ಮಾನಿಸಿ ಗೌರವಿಸಲಾಯಿತು. ಈ ವೇಳೆ ಜಿಲ್ಲಾ ರೈತ ಘಟಕದ ಅಧ್ಯಕ್ಷ ರಮೇಶ ಸುಂಕದ, ಜಿಲ್ಲಾ ಕಾರ್ಮಿಕ ಘಟಕದ ಅಧ್ಯಕ್ಷ ಮಂಜುನಾಥ ಲೋಕಂಡೆ, ಹಾವೇರಿ ಜಿಲ್ಲಾ ಯುವ ಘಟಕದ ಅಧ್ಯಕ್ಷ ಮೌಲಾಲಿ ಎರಿಮನೆ, ಹಾವೇರಿ ತಾಲೂಕಾಧ್ಯಕ್ಷ ಯುವರಾಜ್ ನವಲಗುಂದ, ಮಹಿಳಾ ಮುಖಂಡರಾದ ರತ್ನಮ್ಮ ಸಂಗಪ್ಪನವರ, ಕಾರ್ಮಿಕ ಘಟಕದ ತಾಲೂಕು ಅಧ್ಯಕ್ಷ ಫಕ್ಕೀರಪ್ಪ ಮ್ಯಾಗೇರಿ, ಪ್ರಕಾಶ್ ಕೆಮ್ಮಣಕೆರೆ, ವೀರೇಶ ಚಿನ್ನಿಕಟ್ಟೆ, ಚಂದ್ರು ವಡ್ಡರ, ಸುರೇಶ್ ಬಡಿಗೇರ, ಚಂದ್ರಶೇಖರ ಗದಗಕರ, ಮಾಲತೇಶ ಪಾತ್ರೋಟಿ, ಪರಶುರಾಮ ಕೋರಿಯವರ, ಶೋಭಾ ಹೂಗಾರ, ದ್ಯಾಮವ್ವ ಮಾದಣ್ಣವರ, ರಾಣೆಬೆನ್ನೂರು ತಾಲೂಕಾಧ್ಯಕ್ಷ ರಮೇಶ್ ದಾಸಪ್ಪನವರ, ಗಾಳಪ್ಪ ಕೊರವರ, ಸಂತೋಷ್ ಒರವಜ್ಜಿ ಇನ್ನು ಅನೇಕ ಕರವೇ ಕಾರ್ಯಕರ್ತರ ಉಪಸ್ಥಿತರಿದ್ದರು..