ನಾಗಮಂಗಲ ಪ್ರಕರಣ ಕಾಂಗ್ರೆಸ್‌ನ ಓಲೈಕೆ ರಾಜಕಾರಣಕ್ಕೆ ಕೈಗನ್ನಡಿ: ಸಂಸದ ಕೋಟ ಶ್ರೀನಿವಾಸ್ ಪೂಜಾರಿ

| Published : Sep 14 2024, 01:55 AM IST / Updated: Sep 14 2024, 12:03 PM IST

ನಾಗಮಂಗಲ ಪ್ರಕರಣ ಕಾಂಗ್ರೆಸ್‌ನ ಓಲೈಕೆ ರಾಜಕಾರಣಕ್ಕೆ ಕೈಗನ್ನಡಿ: ಸಂಸದ ಕೋಟ ಶ್ರೀನಿವಾಸ್ ಪೂಜಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಹಿಂದುಗಳ ಹಬ್ಬವನ್ನು ಕಾಂಗ್ರೆಸ್ ನಿಯಂತ್ರಣ ಮಾಡಲು ಹೊರಟಿದ್ದು, ಅಗೋಚರವಾದ ಕಾರ್ಯತಂತ್ರ ರೂಪಿಸಲಾಗಿದೆ. ಗಣೇಶೋತ್ಸವಕ್ಕೆ ಹಲವು ನಿರ್ಬಂಧಗಳನ್ನು ಹಾಕಿ, ಮೆರವಣಿಗೆ ಮತ್ತು ಧ್ವನಿವರ್ಧಕಗಳಿಗೆ ಸರ್ಕಾರ ನಿಯಂತ್ರಣ ಹಾಕಿದ್ದೆ ಇದಕ್ಕೆ ಸಾಕ್ಷಿ ಎಂದು ಕೋಟ ಆರೋಪಿಸಿದ್ದಾರೆ.

 ಉಡುಪಿ : ರಾಜ್ಯದ ಗೃಹಸಚಿವ ಜಿ.ಪರಮೇಶ್ವರ್ ಅವರು ರಾಜ್ಯದಲ್ಲಿ ಗಲಾಟೆ ದೊಂಬಿ ನಡೆದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತಾರೆ ಎಂದು ನಂಬಿದ್ದೆವು. ಆದರೆ ನಾಗಮಂಗಲದಲ್ಲಿ ಗಣೇಶ ಮೆರವಣಿಗೆ ಮತಾಂಧರು ಕಲ್ಲು ತೂರಿ ಹಿಂದೂ ಭಕ್ತರ ಅಂಗಡಿಗಳಿಗೆ ಬೆಂಕಿ ಇಟ್ಟಿದ್ದರೂ, ಆಕಸ್ಮಿಕವಾಗಿ ಕಲ್ಲು ಹೊಡೆದಿದ್ದಾರೆ, ಗಾಳಿಯಲ್ಲಿ ಕಲ್ಲು ಬಂತು ಎಂದು ಗೃಹಮಂತ್ರಿ ಹೇಳುತ್ತಿದ್ದಾರೆ. 

ಗಣೇಶ ಭಕ್ತರನ್ನೇ ಆರೋಪಿಗಳನ್ನಾಗಿ ಮಾಡಿದ್ದಾರೆ. ಇದು ಕಾಂಗ್ರೆಸಿನ ಓಲೈಕೆ ರಾಜಕಾರಣಕ್ಕೆ ಹಿಡಿದ ಕೈಗನ್ನಡಿ ಎಂದು ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಕಿಡಿಕಾರಿದರು.

ಶುಕ್ರವಾರ ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಗಮಂಗಲದಲ್ಲಿ ಗಣೇಶನನ್ನು ಕೂರಿಸಿದವರನ್ನು ಎ1 ಆರೋಪಿಯನ್ನಾಗಿ ಮಾಡಲಾಗಿದೆ. ಕಲ್ಲು ಹೊಡೆದವರು ಅಮಾಯಕರು ಮತ್ತು ಅಸಹಾಯಕರು ಎಂದರೆ ಇದು ಯಾವ ನ್ಯಾಯ? ಕತ್ತಿ, ಗುರಾಣಿ ಹಿಡಿದು ಕೊಂಡವರನ್ನು ರಕ್ಷಣೆ ಮಾಡಲು ಸರ್ಕಾರದ ಹೊರಟಿದೆ ಎಂದವರು ಆತಂಕ ವ್ಯಕ್ತಪಡಿಸಿದರು.ಹಿಂದುಗಳ ಹಬ್ಬವನ್ನು ಕಾಂಗ್ರೆಸ್ ನಿಯಂತ್ರಣ ಮಾಡಲು ಹೊರಟಿದ್ದು, ಅಗೋಚರವಾದ ಕಾರ್ಯತಂತ್ರ ರೂಪಿಸಲಾಗಿದೆ. ಗಣೇಶೋತ್ಸವಕ್ಕೆ ಹಲವು ನಿರ್ಬಂಧಗಳನ್ನು ಹಾಕಿ, ಮೆರವಣಿಗೆ ಮತ್ತು ಧ್ವನಿವರ್ಧಕಗಳಿಗೆ ಸರ್ಕಾರ ನಿಯಂತ್ರಣ ಹಾಕಿದ್ದೆ ಇದಕ್ಕೆ ಸಾಕ್ಷಿ ಎಂದರು.

ಸರ್ಕಾರದ ಒಂದೊಂದು ನಿಲುವು ಸಂಶಯ ಹುಟ್ಟಿಸುತ್ತಿದೆ. ಬಹುಸಂಖ್ಯಾತರಿಂದ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯವನ್ನು ನಾವು ಲೋಕದಲ್ಲಿ ಕೇಳಿದ್ದೇವೆ. ಆದರೆ ಕರ್ನಾಟಕದಲ್ಲಿ ಅಲ್ಪಸಂಖ್ಯಾತರು, ಬಹುಸಂಖ್ಯಾತರನ್ನು ಬದುಕಲು ಆಗದ ಪರಿಸ್ಥಿತಿ ನಿರ್ಮಿಸಿದ್ದಾರೆ. ರಾಜ್ಯದ ಕಾಂಗ್ರೆಸ್ ಸರ್ಕಾರವೇ ಅವರಿಗೆ ರಕ್ಷಣೆ ಕೊಡುತ್ತಿದೆ ಎಂದವರು ಆರೋಪಿಸಿದರು.