ಸಾರಾಂಶ
- ವಿಧಾನಸಭೆ ಮುಂಗಾರು ಅಧಿವೇಶನದಲ್ಲಿ ಅಗಲಿದ ಜನನಾಯಕರಿಗೆ ಶ್ರದ್ಧಾಂಜಲಿ - - - ಕನ್ನಡಪ್ರಭ ವಾರ್ತೆ, ದಾವಣಗೆರೆ
ದಿ. ನಾಗಮ್ಮ ಕೇಶವಮೂರ್ತಿ ಅವರು, ತಮ್ಮ ಅಧಿಕಾರ ಅವಧಿಯಲ್ಲಿ ಮಾಡಿರುವ ಸಮಾಜ ಸೇವೆ, ಕೈಗೊಂಡ ಯೋಜನೆಗಳು ನಮಗೆ ಮಾದರಿಯಾಗಿವೆ ಎಂದು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಸ್ಮರಿಸಿದರು.ಸೋಮವಾರದಿಂದ ಆರಂಭವಾಗಿರುವ ಮುಂಗಾರು ಅಧಿವೇಶನದಲ್ಲಿ ಅಗಲಿದ ನಾಯಕರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಬಳಿಕ ಮಾತನಾಡಿದ ಶಾಸಕರು, ಸರಳ, ಸಜ್ಜನಿಕೆಯ ಮಾತೃಹೃದಯಿ ನಾಗಮ್ಮ ಕೇಶವಮೂರ್ತಿ. ಅವರ ಅಧಿಕಾರದ ಅವಧಿಯಲ್ಲಿ ಅನೇಕ ವೃದ್ಧಾಶ್ರಮಗಳು, ಅಂಧಮಕ್ಕಳ ಶಾಲೆಗಳನ್ನು ತೆರೆದಿದ್ದಾರೆ. ವಿಶೇಷವಾಗಿ ನನ್ನ ಮತ ಕ್ಷೇತ್ರದಲ್ಲಿ ಇವತ್ತು ಸರ್ಕಾರಿ ಶಾಲೆಗಳು ಇವೆ ಎಂದಾದರೆ, ಅದು ನಾಗಮ್ಮ ಕೇಶವಮೂರ್ತಿ ಕೊಡುಗೆಯಾಗಿವೆ. ಪ್ರತಿ ಗ್ರಾಮಗಳಲ್ಲಿ ಸರ್ಕಾರಿ ಶಾಲೆ ಮತ್ತು ಖಾಸಗಿ ಶಾಲೆಗಳನ್ನು ತೆರೆದು ನನ್ನ ಕ್ಷೇತ್ರವನ್ನು ಶಿಕ್ಷಣ ಕ್ಷೇತ್ರವನ್ನಾಗಿ ಮಾಡಿದ್ದಾರೆ. ಅವರ ಅಗಲಿಕೆ ನಮಗೆ ದುಃಖ ಭರಿಸಿದೆ. ಅಂತಹ ಮಹಾತಾಯಿಯ ಆದರ್ಶ ಮೈಗೂಡಿಸಿಕೊಳ್ಳಬೇಕು ಎಂದರು.
ಮಾಯಕೊಂಡ ಕ್ಷೇತ್ರದಲ್ಲಿ 2 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ವಿಧಾನಸಭೆ ಉಪ ಸಭಾಪತಿ, ಬೃಹತ್ ಮತ್ತು ಕೈಗಾರಿಕೆ ಸಚಿವೆ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವೆಯಾಗಿ ಮಾಡಿದ ಕಾರ್ಯಗಳು ಇತಿಹಾಸದಲ್ಲಿ ಅಚ್ಚಳಿಯದೇ ಉಳಿದಿವೆ. ಅಲ್ಲದೇ, ಕರ್ನಾಟಕದ ಶಿಕ್ಷಣ ಕ್ಷೇತ್ರಕ್ಕೆ ಅಪಾರ ಸೇವೆ ಸಲ್ಲಿಸಿದ್ದಾರೆ. ಶಿಕ್ಷಣ ಸಚಿವರಾಗಿದ್ದಾಗ ಅವರು 1ರಿಂದ 4ನೇ ತರಗತಿವರೆಗೆ ಕನ್ನಡ ಮಾಧ್ಯಮ ಕಡ್ಡಾಯಗೊಳಿಸಿದವರು. ಪ್ರಾಥಮಿಕ ಶಾಲಾ ಹಂತದಲ್ಲಿ ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ಸೇರಿದಂತೆ ಕೈಗೊಂಡ ಹಲವಾರು ಯೋಜನೆಗಳು ಇಂದಿಗೂ ಮಾದರಿಯಾಗಿವೆ ಎಂದರು.ಮಾಜಿ ಸಚಿವರು, ದಲಿತರ ಕಣ್ಮಣಿ ಮಹಾನ್ ನಾಯಕರಾದ ಶ್ರೀನಿವಾಸ್ ಪ್ರಸಾದ್ ಅವರು, ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾಮ್ ಅವರ ತತ್ವ- ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ಎರಡನೇ ಅಂಬೇಡ್ಕರ್ ಆಗಿದ್ದ ಶ್ರೀನಿವಾಸ್ ಪ್ರಸಾದ್ ಅವರ ಅಗಲಿಕೆಯಿಂದ ದಲಿತ ಸಮುದಾಯ ಬರಡಾಗಿದೆ ಎಂದು ಇದೇ ಸಂದರ್ಭದಲ್ಲಿ ಸ್ಮರಿಸಿದರು.
- - -ಕೋಟ್ ಅತ್ಯಂತ ಪ್ರೀತಿ, ಗೌರವಕ್ಕೆ ಪಾತ್ರರಾದ ಧೀಮಂತ ಮಹಿಳೆ, ಸಂಘಟನಾ ಚತುರೆ, ಉತ್ಸಾಹದ ಚಿಲುಮೆಯಾಗಿದ್ದ ನಾಗಮ್ಮ ಕೇಶವಮೂರ್ತಿ ಅವರು ಮಾಯಕೊಂಡ ಕ್ಷೇತ್ರವಲ್ಲದೇ, ದಾವಣಗೆರೆ ಜಿಲ್ಲೆಯ ನೂರಾರು ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಣಕ್ಕೆ ಒತ್ತು ನೀಡಿ ಶಾಲೆಗಳನ್ನು ಆರಂಭಿಸಿದವರು
- ಕೆ.ಎಸ್.ಬಸವಂತಪ್ಪ, ಶಾಸಕ, ಮಾಯಕೊಂಡ ಕ್ಷೇತ್ರ- - - -15ಕೆಡಿವಿಜಿ35ಃ:
ವಿಧಾನಸಭೆಯಲ್ಲಿ ಸೋಮವಾರದಿಂದ ಆರಂಭವಾಗಿರುವ ಮುಂಗಾರು ಅಧಿವೇಶನದಲ್ಲಿ ಅಗಲಿದ ನಾಯಕರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಸಂದರ್ಭ ಶಾಸಕ ಕೆ.ಎಸ್. ಬಸವಂತಪ್ಪ ಅವರು ನಾಗಮ್ಮ ಕೇಶವಮೂರ್ತಿ ಸೇವೆಯನ್ನು ಸ್ಮರಿಸಿದರು.