ದೌರ್ಜನ್ಯಗಳ ಮೆಟ್ಟಿ, ಜಿದ್ದಿನಿಂದ ಗೆದ್ದು ಬಂದಿದ್ದ ನಾಗನಗೌಡರು

| Published : Jan 28 2025, 12:45 AM IST

ಸಾರಾಂಶ

Nagana Gowda, who emerged victorious through perseverance, despite the atrocities

-ಮಾಜಿ ಶಾಸಕ ಲಿಂ. ನಾಗನಗೌಡ ಕಂದಕೂರ ಪ್ರಥಮ ಪುಣ್ಯಸ್ಮರಣೆ ನಿಮಿತ್ಯ ಲೇಖನ

-----

ಗುರುಮಠಕಲ್‌ ಕ್ಷೇತ್ರದ ಮಾಜಿ ಶಾಸಕ ಲಿಂ. ನಾಗನಗೌಡ ಕಂದಕೂರ ಅವರು ಅಗಲಿ ಇಂದಿಗೆ (ಜ.28) ಒಂದು ವರ್ಷ. ನೇರ ನಡೆ-ನುಡಿಯ ರಾಜಕೀಯ ಮುತ್ಸದ್ದಿ ನಾಗನಗೌಡರು ರಾಜಕೀಯದಲ್ಲಿ ಬಲಾಢ್ಯರು ಎಂದನ್ನಿಸಿಕೊಂಡವರ ದರ್ಪ- ದೌರ್ಜನ್ಯಗಳನ್ನು ಮೆಟ್ಟಿ ನಿಂತು, ಜಿದ್ದಿನಿಂದ ಗೆದ್ದು ಬಂದವರು.

ಅಣ್ಣ ಲಿಂ.‌ಸದಾಶಿವರಡ್ಡಿ ಕಂದಕೂರ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಬಂದಿದ್ದ ಗೌಡರು 1970 ದಶಕದಲ್ಲಿ ಕಾಲೇಜು ಶಿಕ್ಷಣ ಮುಗಿಸಿ ಸಾರ್ವಜನಿಕ ಜೀವನಕ್ಕೆ ಕಾಲಿಟ್ಟವರು. 28ರ ಹರೆಯದಲ್ಲಿಯೇ ವಿಎಸ್ಎಸ್ಎನ್ ಅಧ್ಯಕ್ಷ, 1986 ರಲ್ಲಿ ಕಂದಕೂರ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ, 1998 ರಲ್ಲಿ ಎಪಿಎಂಸಿ ಅಧ್ಯಕ್ಷ ಸ್ಥಾನ ಮತ್ತು 2007 ರಲ್ಲಿ ಹೈ.ಕ. ಮಂಡಳಿ ಅಧ್ಯಕ್ಷರಾಗಿದ್ದವರು.

* ದೇವೇಗೌಡರ ಕುಟುಂಬಕ್ಕೆ ಪರಮಾಪ್ತರು

ಮಾಜಿ ಪ್ರಧಾನಿ ದೇವೇಗೌಡರ ಕುಟುಂಬಕ್ಕೆ ಆರು ದಶಕಗಳಿಂದ ಪರಮಾಪ್ತರು. ಯಾವುದೇ ಆಮಿಷ, ಅಧಿಕಾರಕ್ಕೆ ಒಳಗಾಗದೇ ವ್ಯಕ್ತಿ ಮತ್ತು ಪಕ್ಷ ನಿಷ್ಠೆಯೊಂದಿಗೆ ಕಂದಕೂರ ಕುಟುಂಬ ಇಂದಿಗೂ ಅವರೊಂದಿಗೆ ಇರುವುದು ಅಪರೂಪದ ಸಂಗತಿ. ಅನ್ಯಾಯ, ಅತ್ಯಾಚಾರ, ದರ್ಪ, ದೌರ್ಜನ್ಯಗಳ ವಿರುದ್ಧ ಸಿಡಿದೆದ್ದು ಅವಿರತ ಹೋರಾಟ ಮಾಡಿ, 20ಕ್ಕೂ ಹೆಚ್ಚು ಸುಳ್ಳು ಕೇಸ್ ಗಳನ್ನು ಎದುರಿಸಿ, ಗುರುಮಠಕಲ್ ಮತ್ತು ಯಾದಗಿರಿ ತಾಲೂಕಿನಲ್ಲಿ ತನ್ನನ್ನು ನಂಬಿದ ಜನರ ಬೆಂಬಲಕ್ಕೆ ಸದಾ ನಿಂತಿದ್ದವರು ನಾಗನಗೌಡರು.

2008 ಮತ್ತು 2013 ರಲ್ಲಿ ಗುರುಮಠಕಲ್ ಕ್ಷೇತ್ರದಿಂದ ಸ್ವರ್ಧಿಸಿ ಸೋಲುಂಡ ಗೌಡರು, ಮತ್ತೆ 2018ರಲ್ಲಿ ಮತ್ತೆ ಚುನಾವಣಾ ಕಣಕ್ಕೆ ಇಳಿದಾಗ ಇವರ ಪುತ್ರ, ಹಾಲಿ ಶಾಸಕ ಶರಣಗೌಡ ಕಂದಕೂರ ಮುಂದಾಳತ್ವದಲ್ಲಿ ಜನ-ಮನ ತಲುಪಿದ ರೀತಿ ಭಾರಿ ಮತಗಳ ಅಂತರದಿಂದ ನಾಗನಗೌಡರ ಗೆಲ್ಲಲ್ಲು ಸಹಕಾರಿಯಾಯ್ತು.

ಗುರುಮಠಕಲ್ ಕ್ಷೇತ್ರವನ್ನು ರಾಜ್ಯದ ಜನ ತಿರುಗಿ ನೋಡುವಂತೆಯೇ ಅಧಿವೃದ್ಧಿ ಕೆಲಸಗಳ ಮಾಡಿದರು, ಎಚ್‌. ಡಿ. ಕುಮಾರಸ್ವಾಮಿ‌ ಸಿಎಂ ಇದ್ದಷ್ಟು ದಿನ ಅನೇಕ ಹೊಸ, ಹೊಸ ಕೆಲಸಗಳಿಗೆ ಅನುದಾನ ತಂದರು, ಕರ್ನಾಟಕ‌ ಕೊಳಚೆ ಮಂಡಳಿ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು. ಸ್ವಚ್ಛ ರಾಜಕಾರಣ ಮಾಡುವ ಮೂಲಕ ಛಾಪು ಉಳಿಸಿಕೊಂಡಿದ್ದರು ನಾಗನಗೌಡ ಕಂದಕೂರ.

-----

ಲೇಖನ : ಗೌಡಪ್ಪಗೌಡ ಮಾಲಿಪಾಟೀಲ್ ಮದರಕಲ್

ಲೇಖಕರು : ಕಂದಕೂರ ಕುಟುಂಬದ ಆಪ್ತರು.

----

27ವೈಡಿಆರ್4 : ಲಿಂ. ನಾಗನಗೌಡ ಕಂದಕೂರ, ಮಾಜಿ ಶಾಸಕರು.