ಕೊಡಗಿನಲ್ಲಿ ಶ್ರದ್ಧಾಭಕ್ತಿಯ ನಾಗರ ಪಂಚಮಿ

| Published : Aug 10 2024, 01:30 AM IST

ಕೊಡಗಿನಲ್ಲಿ ಶ್ರದ್ಧಾಭಕ್ತಿಯ ನಾಗರ ಪಂಚಮಿ
Share this Article
  • FB
  • TW
  • Linkdin
  • Email

ಸಾರಾಂಶ

ನಾಗನಕಲ್ಲಿಗೆ ಹಾಲಿನ ಅಭಿಷೇಕ, ಅಲಂಕಾರ ಪೂಜೆ ಸೇರಿದಂತೆ ವಿಶೇಷ ಧಾರ್ಮಿಕ ವಿಧಿ ವಿಧಾನಗಳು ಜರುಗಿದವು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ನಾಗನ ಕಲ್ಲಿಗೆ ಪುಷ್ಪಾರ್ಚನೆ ಮತ್ತು ಹಾಲಿನ ಅಭಿಷೇಕ ಮಾಡಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಶ್ರಾವಣ ಮಾಸದ ಮೊದಲ ಹಬ್ಬ ನಾಗರ ಪಂಚಮಿಯನ್ನು ಶುಕ್ರವಾರ ಕೊಡಗಿನ ವಿವಿಧೆಡೆ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ನಗರದ ಬ್ರಾಹ್ಮಣರ ಬೀದಿಯ ಅಶ್ವತ್ಥ ಕಟ್ಟೆಯಲ್ಲಿ ನಾಗನಕಲ್ಲಿಗೆ ಹಾಲಿನ ಅಭಿಷೇಕ, ಅಲಂಕಾರ ಪೂಜೆ ಸೇರಿದಂತೆ ವಿಶೇಷ ಧಾರ್ಮಿಕ ವಿಧಿ ವಿಧಾನಗಳು ಜರುಗಿದವು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ನಾಗನ ಕಲ್ಲಿಗೆ ಪುಷ್ಪಾರ್ಚನೆ ಮತ್ತು ಹಾಲಿನ ಅಭಿಷೇಕ ಮಾಡಿದರು.

ಶ್ರೀ ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ ದೇವಾಲಯ, ಶ್ರೀ ದಂಡಿನ ಮಾರಿಯಮ್ಮ ದೇವಾಲಯ, ಶ್ರೀ ಕೋಟೆ ಮಾರಿಯಮ್ಮ ದೇವಾಲಯ ಸೇರಿದಂತೆ ನಗರದ ವಿವಿಧ ದೇವಾಲಯಗಳಲ್ಲಿ ನಾಗಾರಾಧನೆ ನಡೆಯಿತು. ಕುಶಾಲನಗರ, ಕೂಡಿಗೆ, ಸೋವಾರಪೇಟೆ, ಶನಿವಾರಸಂತೆ, ಗೋಣಿಕೊಪ್ಪ ಸೇರಿದಂತೆ ಜಿಲ್ಲೆಯ ಬಹುತೇಕ ದೇವಾಲಯಗಳಲ್ಲಿ ನಾಗರಪಂಚಮಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ಮಹಿಳೆಯರು ನಸುಕಿನ ವೇಳೆಯಲ್ಲಿ ಮನೆಯನ್ನು ಸ್ವಚ್ಛಗೊಳಿಸಿ, ರಂಗೋಲಿ ಹಾಕಿ, ದೇವಸ್ಥಾನದಲ್ಲಿರುವ ನಾಗಪ್ರತಿಮೆಗಳಿಗೆ ಹಾಲು ಎರೆದು, ಹೂ ಹಣ್ಣು ಇಟ್ಟು ಭಕ್ತಿಯಿಂದ ಪೂಜಿಸಿದರು. ನಾಗರ ಪಂಚಮಿ ಹಬ್ಬಕ್ಕೆಂದೇ ವಿಶೇಷವಾಗಿ ತಯಾರಿಸಿದ ತಿಂಡಿಗಳನ್ನು ನೈವೇದ್ಯ ಮಾಡಿ ಹಬ್ಬ ಆಚರಿಸಿದರು.