ಸಾರಾಂಶ
ಕನ್ನಡಪ್ರಭ ವಾರ್ತೆ ಪುತ್ತೂರು
ತಾಲೂಕಿನಾದ್ಯಂತ ಶುಕ್ರವಾರ ವಿವಿಧ ದೇವಾಲಯ ಹಾಗೂ ನಾಗ ಸನ್ನಿಧಿಗಳಲ್ಲಿ ನಾಗರಪಂಚಮಿಯನ್ನು ಶ್ರದ್ಧಾ ಭಕ್ತಿಯೊಂದಿಗೆ ಆಚರಿಸಲಾಯಿತು.ತಾಲೂಕಿನ ನಗರ ಹಾಗೂ ಗ್ರಾಮಾಂತರದ ದೇವಾಲಯ, ನಾಗನಕಟ್ಟೆ, ತರವಾಡು ಮನೆಗಳ ನಾಗನಕಟ್ಟೆ, ಗ್ರಾಮಗಳ ನಾಗ ಸನ್ನಿಧಿಗಳಲ್ಲಿ ವಿಶೇಷ ಪೂಜೆ, ತಂಬಿಲ ಸೇವೆಗಳು ನಡೆಯಿತು. ಇತಿಹಾಸ ಪ್ರಸಿದ್ಧ ಶ್ರೀ ಮಹಾಲಿಂಗೇಶ್ವರ ದೇವಾಲಯದ ಮೂಲನಾಗನ ಸನ್ನಿಧಿಯಲ್ಲಿ ಪ್ರಾತ:ಕಾಲ ನಾಗನಿಗೆ ಹಾಲು, ಎಳನೀರು ಅಭಿಷೇಕ ನಡೆಸಲಾಯಿತು ಹಾಗೂ ದೇವಾಲಯದ ವಾಸುಕೀ ನಾಗರಾಜ ಸನ್ನಿಧಿಯಲ್ಲಿ ಅಭಿಷೇಕ, ಹಣ್ಣುಕಾಯಿ, ಅರಶಿನ ಸಮರ್ಪಣೆ ನಡೆಯಿತು. ಸಾವಿರಾರು ಭಕ್ತರು ಶ್ರೀ ಮಹಾಲಿಂಗೇಶ್ವರ ದೇವರಿಗೆ ರುದ್ರಾಭಿಷೇಕ ಹಾಗೂ ವಾಸುಕೀ ನಾಗರಾಜ ಸನ್ನಿಧಿಯಲ್ಲಿ ನಾಗದೇವರಿಗೆ ಸೇವೆ ಸಲ್ಲಿಸಿದರು. ತಾಲೂಕಿನ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಕೆಮ್ಮಿಂಜೆ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ, ಉರ್ಲಾಂಡಿ ರಕ್ತೇಶ್ವರಿ ನಾಗನಕಟ್ಟೆ, ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಪದಾಳ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಬೆಳ್ಳಿಪ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಬಾಯಂಬಾಡಿ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ, ಪಾಣಾಜೆ ರಣಮಂಗಲ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನ, ನಳೀಲು ಸುಬ್ರಹ್ಮಣ್ಯ ದೇವಸ್ಥಾನ, ಕೆಮ್ಮಾಯಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ನಾಗನಕಟ್ಟೆ, ಕುಂಬ್ಲಾಡಿ ಶ್ರೀ ಕುಕ್ಕೇನಾಥ ಬಾಲಸುಬ್ರಹ್ಮಣ್ಯ ದೇವಸ್ಥಾನ, ಪರ್ಪುಂಜ ರಾಮಜಾಲು ಗರಡಿ, ಕಲ್ಲಾರೆ ನಾಗಬನ, ಕೂರೇಲು ನಾಗಸನ್ನಿಧಿ, ಮುಗೇರು ಶ್ರೀ ಮಹಾವಿಷ್ಣು ದೇವಸ್ಥಾನ ಸೇರಿದಂತೆ ವಿವಿಧ ನಾಗದೇವರ ಸ್ಥಾನಗಳಲ್ಲಿ ಸಮ್ಮುಖದಲ್ಲಿ ವಿಶೇಷ ಪೂಜಾ ಕಾರ್ಯಗಳು ನಡೆಯಿತು. ಭಕ್ತರು ನಾಗಸನ್ನಿಧಿಯಲ್ಲಿ ಹಾಲು, ಸಿಯಾಳ ಅಭಿಷೇಕ, ಕೇದಗೆ, ಹಿಂಗಾರ ಸಮರ್ಪಣೆ ಮಾಡಿದರು.