ವಿಜಯಪುರ: ಕ್ರೀಡೆಯಲ್ಲಿ ಮೇಲು-ಕೀಳು, ವಯಸ್ಸಿನ ಭೇದವಿಲ್ಲದೆ ಎಲ್ಲರೂ ಒಗ್ಗೂಡಿ ಭಾಗವಹಿಸಿರುವುದು ಸಂತಸದ ಸಂಗತಿ. ಸೋಲು-ಗೆಲುವು ಸಹಜ. ಹುಮ್ಮಸ್ಸು ಹಾಗೂ ಸಂತೋಷ ತುಂಬುವುದೇ ಕ್ರೀಡೆಯ ಉದ್ದೇಶ. ಇಂತಹ ಕ್ರೀಡಾಕೂಟಗಳು ಪರಸ್ಪರ ಸ್ನೇಹ, ಸೌಹಾರ್ದತೆ ಮತ್ತು ಒಗ್ಗಟ್ಟನ್ನು ಬೆಳೆಸುತ್ತವೆ ಎಂದು ಪುರಸಭೆ ಮಾಜಿ ಅಧ್ಯಕ್ಷ ಎಂ.ಸತೀಶ್ ಕುಮಾರ್ ತಿಳಿಸಿದರು
ವಿಜಯಪುರ: ಕ್ರೀಡೆಯಲ್ಲಿ ಮೇಲು-ಕೀಳು, ವಯಸ್ಸಿನ ಭೇದವಿಲ್ಲದೆ ಎಲ್ಲರೂ ಒಗ್ಗೂಡಿ ಭಾಗವಹಿಸಿರುವುದು ಸಂತಸದ ಸಂಗತಿ. ಸೋಲು-ಗೆಲುವು ಸಹಜ. ಹುಮ್ಮಸ್ಸು ಹಾಗೂ ಸಂತೋಷ ತುಂಬುವುದೇ ಕ್ರೀಡೆಯ ಉದ್ದೇಶ. ಇಂತಹ ಕ್ರೀಡಾಕೂಟಗಳು ಪರಸ್ಪರ ಸ್ನೇಹ, ಸೌಹಾರ್ದತೆ ಮತ್ತು ಒಗ್ಗಟ್ಟನ್ನು ಬೆಳೆಸುತ್ತವೆ ಎಂದು ಪುರಸಭೆ ಮಾಜಿ ಅಧ್ಯಕ್ಷ ಎಂ.ಸತೀಶ್ ಕುಮಾರ್ ತಿಳಿಸಿದರು.
ಪಟ್ಟಣದ ಸರ್ಕಾರಿ ಪಿಯು ಕಾಲೇಜಿನ ಆಟದ ಮೈದಾನದಲ್ಲಿ ಎಲೆಪುಟ್ಟಣ್ಣ ಹಾಗೂ ವನಜಾ ಸ್ಮರಣಾರ್ಥ ಚಂದನ್ ಹಾಗೂ ಜಿ.ಪ್ರಭು ನೇತೃತ್ವದಲ್ಲಿ ಆಯೋಜಿಸಿದ್ದ ನಗರ್ತ ಪ್ರೀಮಿಯರ್ ಲೀಗ್(ಎನ್‌ಪಿಎಲ್) ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿವಿಜೇತ ಹಾಗೂ ರನ್ನರ್‌ಅಪ್ ತಂಡಗಳಿಗೆ ಟ್ರೋಫಿ ವಿತರಿಸಿ ಅವರು ಮಾತನಾಡಿದರು.
ಭಾಸ್ಕರ್ ನಾಯಕತ್ವದ ಸುಜಯ್ ಮಾಲೀಕತ್ವದ ನಗರ್ತ ಬ್ಲಾಸ್ಟರ್ಸ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದರೆ ನಗರ್ತ ಫೈಟರ್ಸ್‌ಗೆ ರನ್ನರ್ ಅಪ್ ಪ್ರಶಸ್ತಿ ಟ್ರೋಫಿಗೆ ತೃಪ್ತಿ ಪಡಬೇಕಾಯಿತು.ಪಂದ್ಯಾವಳಿಯಲ್ಲಿ ಒಟ್ಟು ಆರು ತಂಡಗಳು ಭಾಗವಹಿಸಿದ್ದು, ಆರಂಭದಿಂದಲೂ ತಂಡಗಳ ನಡುವೆ ತೀವ್ರ ಪೈಪೋಟಿ ಕಂಡು ಬಂದಿತು. ಅಂತಿಮ ಹಣಾಹಣಿಯಲ್ಲಿ ಅತ್ಯಂತ ರೋಚಕ ಪ್ರದರ್ಶನ ನೀಡಿದ ನಗರ್ತ ಬ್ಲಾಸ್ಟರ್ಸ್ ತಂಡ ಕೇವಲ ಮೂರು ರನ್‌ಗಳ ಅಂತರದಿಂದ ಎನ್‌ಪಿಎಲ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಎನ್.ಬಿ.ಶಂಕರ್ ನಾಯಕತ್ವದ ನಗರ್ತ ಫೈಟರ್ಸ್ ತಂಡ ರನ್ನರ್‌ಅಪ್ ಪ್ರಶಸ್ತಿಗೆ ಭಾಜನವಾಯಿತು.
ಪಂದ್ಯಾವಳಿಯಲ್ಲಿ ಎಸ್.ವೀರೇಶ್ ನಾಯಕತ್ವದ ನಗರ್ತ ಫೀನಿಕ್ಸ್, ಎಂ.ವಿನಯ್ ನಾಯಕತ್ವದ ನಗರ್ತ ರಾಯಲ್ಸ್, ಎ. ಮಧು ನಾಯಕತ್ವದ ನಗರ್ತ ಲಯನ್ಸ್ ಹಾಗೂ ಜೆ.ಪ್ರವೀಣ್ ನಾಯಕತ್ವದ ನಗರ್ತ ಥಂಡರ್ಸ್, ನಗರ್ತ ಬ್ಲಾಸ್ಟರ್ಸ್ ತಂಡದ ಮಾಲೀಕರಾದ ಸುಜಯ್, ನಗರ್ತ ಫೈಟರ್ಸ್ ತಂಡದ ಎನ್.ಬಿ.ಶಂಕರ್ ತಂಡಗಳು ಭಾಗವಹಿಸಿ ಕ್ರೀಡಾಸ್ಫೂರ್ತಿ ಮೆರೆದವು. ಕ್ರೀಡೆಗೆ ಪೂರ್ತಿ ಸಹಕಾರ ನೀಡಿದ ಸಹಕಾರ ಎಆರ್‌ಸಿ ನಿಖಿಲ್ ತಂಡದವರು ನಗರ್ತ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯನ್ನು ಎನ್.ಬಿ.ಶಂಕರ್, ಕ್ಯಾಂಟೀನ್ ಮಂಜು, ಜೆ.ಪ್ರವೀಣ್, ವಿ.ಎಂ. ಶಿವಕುಮಾರ್, ಎ.ಸುಪ್ರೀತ್, ಎಸ್.ವೀರೇಶ್, ನಿರಂಜನ್, ಎಂ.ಹರ್ಷಿತ್ ಹಾಗೂ ಎಂ.ಮೋಹನ್ ಚಂದ್ರ ಪಂದ್ಯಾವಳಿಯನ್ನು ಅಚ್ಚುಕಟ್ಟಾಗಿ ಆಯೋಜಿಸಿದ್ದರು.ಕಾರ್ಯಕ್ರಮದಲ್ಲಿ ಪ್ರಗತಿ ಶಿಕ್ಷಣ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಕೃಪಾಶಂಕರ್, ಮಹಾಂತಿನ ಮಠದ ಅಧ್ಯಕ್ಷ ಪುನೀತ್ ಕುಮಾರ್, ಕಾರ್ಯದರ್ಶಿ ವಿ.ವಿಶ್ವನಾಥ್, ಖಜಾಂಚಿ ಎ.ಮಧು ನಗರ್ತಯುವಕ ಸಂಘದ ಅಧ್ಯಕ್ಷ ಬಸವರಾಜು, ಜಯಶಂಕರ್, ಜಿ.ಪ್ರಭು, ಎನ್.ರುದ್ರಮೂರ್ತಿ, ಜೆಆರ್‌ಪಿ ಮುರಳೀಧರ್, ಕೋರಮಂಗಲ ರುದ್ರಪ್ಪ ಟ್ರಸ್ಟ್ ಅಧ್ಯಕ್ಷ ಸಿ. ಭಾಸ್ಕರ್, ವಿನಾಯಕ ಭಕ್ತ ಮಂಡಳಿ ಅಧ್ಯಕ್ಷರಾದ ಎಂ.ಶಂಕರ್, ಮಹಿಳಾ ಸಂಘದ ಸದಸ್ಯರು ಉಪಸ್ಥಿತರಿದ್ದರು.
(ಫೋಟೋ ಕ್ಯಾಪ್ಞನ್)ವಿಜಯಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆಟದ ಮೈದಾನದಲ್ಲಿ ಎಲೆ ಪುಟ್ಟಣ್ಣ ಹಾಗೂ ವನಜಾ ಸ್ಮರಣಾರ್ಥ ಆಯೋಜಿಸಿದ್ದ ನಗರ್ತಪ್ರೀಮಿಯರ್ ಲೀಗ್ ಪಂದ್ಯಾವಳಿಯಲ್ಲಿ ಭಾಸ್ಕರ್ ನಾಯಕತ್ವದ ಸುಜಯ್ ಮಾಲೀಕತ್ವದ ನಗರ್ತ ಬ್ಲಾಸ್ಟರ್ಸ್ ತಂಡಕ್ಕೆ ಚಾಂಪಿಯನ್ ಪಟ್ಟ ಹಾಗೂ ಟ್ರೋಪಿಯನ್ನು ಪುರಸಭೆ ಮಾಜಿ ಅಧ್ಯಕ್ಷ ಎಂ.ಸತೀಶ್ ಕುಮಾರ್ ವಿತರಿಸಿದರು.
(ಎರಡನೇ ಫೋಟೋ )ವಿಜಯಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆಟದ ಮೈದಾನದಲ್ಲಿ ಎಲೆ ಪುಟ್ಟಣ್ಣ ಹಾಗೂ ವನಜಾ ಸ್ಮರಣಾರ್ಥ ಆಯೋಜಿಸಿದ್ದ ನಗರ್ತಪ್ರೀಮಿಯರ್ ಲೀಗ್ ಪಂದ್ಯಾವಳಿಯಲ್ಲಿ ಎನ್.ಬಿ.ಶಂಕರ್ ನಾಯಕತ್ವದ ನಗರ್ತ ಫೈಟರ್ಸ್ ತಂಡ ರನ್ನರ್ ಅಪ್ ಪ್ರಶಸ್ತಿ ಹಾಗೂ ಟ್ರೋಫಿಯನ್ನು ಪುರಸಭೆ ಮಾಜಿ ಅಧ್ಯಕ್ಷ ಎಂ.ಸತೀಶ್ ಕುಮಾರ್
ವಿತರಿಸಿದರು.