ಸಾರಾಂಶ
ಗ್ರಾಮಗಳು ಶಾಂತಿಯಿಂದ ಸಹೋದರತ್ವದಿಂದ ಕೂಡಿದರೆ ನಗರ, ರಾಜ್ಯ, ದೇಶವೇ ಶಾಂತಿಯಿಂದ ಇರುತ್ತದೆ.
ಕನ್ನಡಪ್ರಭ ವಾರ್ತೆ ಮೈಸೂರು
ಸರ್ವರು ಬದುಕುವಂತೆ ತಿಳಿಸುವ ಭಾರತದ ಮಹಾ ಕಾವ್ಯ ವಾಲ್ಮೀಕಿ ಅವರ ರಾಮಾಯಣ ಎಂದು ಸಾಹಿತಿ ಡಾ. ನಂಜುಂಡಸ್ವಾಮಿ ಹರದನಹಳ್ಳಿ ತಿಳಿಸಿದರು.ಮೈಸೂರು ತಾಲೂಕು ಇಲವಾಲ ಹೋಬಳಿಯ ನಾಗವಾಲ ಗ್ರಾಮದ ವಾಲ್ಮೀಕಿ ಸಮಾಜದವರು ಏರ್ಪಡಿಸಿದ್ದ ವಾಲ್ಮೀಕಿ ಜಯಂತಿಯಲ್ಲಿ ಮಾತನಾಡಿದ ಅವರು, ಗ್ರಾಮಗಳು ಶಾಂತಿಯಿಂದ ಸಹೋದರತ್ವದಿಂದ ಕೂಡಿದರೆ ನಗರ, ರಾಜ್ಯ, ದೇಶವೇ ಶಾಂತಿಯಿಂದ ಇರುತ್ತದೆ. ಈ ರೀತಿ ಬದುಕಬೇಕೆಂದು ಪ್ರಜೆಗಳಿಗಾಗಿ ಪ್ರಭು ಎಂಬುದನ್ನು ವಾಲ್ಮೀಕಿ ಅವರು ರಾಮಾಯಣದ ರಾಮನ ಪಾತ್ರದ ಮೂಲಕ ತಿಳಿಸಿಕೊಟ್ಟಿದ್ದಾರೆ ಎಂದು ಹೇಳಿದರು.
ಜಾತಿಗಿಂತ ಮನುಷ್ಯತ್ವ ದೊಡ್ಡದು. ನಮ್ಮ ನೆರೆಯ ರಾಷ್ಟ್ರಗಳು ಯುದ್ಧ, ಗಲಭೆಯಲ್ಲಿ ಮಾನವೀಯತೆಯನ್ನು ಮರೆತರೆ, ಭಾರತ ಜಗತ್ತಿಗೆ ಶಾಂತಿ, ಸಂಯಮ, ಸಹಬಾಳ್ವೆಯ ಆದರ್ಶವನ್ನು ತೋರಿಸುತ್ತಿದೆ. ಇದಕ್ಕೆ ಭಾರತ ದೇಶದ ರಾಮಾಯಣ ಮತ್ತು ಮಹಾಭಾರತದಂತಹ ಕಾವ್ಯಗಳು ಕಾರಣ. ವಾಲ್ಮೀಕಿ ತಮ್ಮ ರಾಮಾಯಣದ ಮೂಲಕ ಭಾರತ ಹಾಗೂ ಜಗತ್ತಿಗೆ ಮಾನವೀಯತೆಯ ಸಂದೇಶವನ್ನು ತೋರಿದ್ದಾರೆ ಎಂದರು.ಗ್ರಾಮದ ದೊಡ್ಡ ಯಜಮಾನ ಮೀಸೆ ಸ್ವಾಮಿನಾಯಕ, ಗ್ರಾಪಂ ಸದಸ್ಯ ಸೋಮನಾಯಕ, ಮಹೇಶ್, ತಿಮ್ಮನಾಯಕ, ಸೋಮಶೇಖರ, ಶಂಕರನಾಯಕ, ವಿನೋದ್ ನಾಗವಾಲ, ಲೋಕೇಶ್ ಮೊದಲಾದವರು ಇದ್ದರು.