ಸಾರಾಂಶ
ಕನ್ನಡಪ್ರಭ ವಾರ್ತೆ ಮಧುಗಿರಿ
ತುಮುಲ್ ಹಾಲು ಒಕ್ಕೂಟದ ಮಧುಗಿರಿ ಮತ್ತು ಪಾವಗಡ ತಾಲೂಕುಗಳ ನಿರ್ದೇಶಕರ ಆಯ್ಕೆ ವಿಚಾರದಲ್ಲಿ ಹೈ ಕೋರ್ಟನ ಏಕ ಸದಸ್ಯ ಪೀಠದ ತೀರ್ಪನ್ನು ರದ್ದು ಪಡಿಸಿ ಚುನಾವಣೆ ಫಲಿತಾಂಶವೇ ಅಂತಿಮವೆಂದು ಚುನಾಯಿತ ನಿರ್ದೇಶಕರಾದ ಮಧುಗಿರಿ ಬಿ ನಾಗೇಶಬಾಬು ಮತ್ತು ಪಾವಗಡ ಚಂದ್ರಶೇಖರ್ ಗೆಲುವನ್ನು ದ್ವಿಸದಸ್ಯ ಪೀಠ ಎತ್ತಿ ಹಿಡಿದಿದ್ದು, ಕೊಂಡವಾಡಿ ಚಂದ್ರಶೇಖರ್‌ಗೆ ಮತ್ತೆ ಸೋಲುಂಟಾಗಿದೆ .2021ರಲ್ಲಿ ತುಮುಲ್ ಬೈಲಾದಲ್ಲಿ ತಿದ್ದುಪಡಿ ಮಾಡಿದ್ದು, ನಿರ್ದೇಶಕರ ಸ್ಥಾನಕ್ಕೆ ಸ್ಪರ್ಧಿಸುವ ಅಭ್ಯರ್ಥಿಗಳು ಪ್ರತಿ ದಿನಕ್ಕೆ 300 ಲೀ,ಹಾಲನ್ನು 270 ದಿನಗಳ ಕಾಲ ಡೈರಿಗೆ ಹಾಕಬೇಕು. ಅಂತವರು ಮಾತ್ರ ನಿರ್ದೇಶಕರ ಸ್ಥಾನಕ್ಕೆ ಸ್ಪರ್ಧಿಸಲು ಅರ್ಹರು. ಆದರೆ ಬಿ.ನಾಗೇಶ್ ಬಾಬು ಯಾವ ವರ್ಷವೂ ಹಾಲು ಸರಬರಾಜು ಮಾಡಿಲ್ಲದ ಕಾರಣ ಇವರ ನಿರ್ದೇಶಕರ ಸ್ಥಾನವನ್ನು ರದ್ದುಪಡಿಸಬೇಕೆಂದು ಕೊಂಡವಾಡಿ ಚಂದ್ರಶೇಖರ್ ಹೈಕೋರ್ಟನ್ ಏಕ ಸದಸ್ಯ ಪೀಠದ ಮೊರೆ ಹೋಗಿದ್ದರು ಈ ಹಿನ್ನೆಲೆಯಲ್ಲಿ ಕಳೆದ ತಿಂಗಳು ಹೈಕೋರ್ಟನ ಏಕಸದಸ್ಯ ಪೀಠವು ನಾಗೇಶ್ ಬಾಬು ಅವರ ನಿರ್ದೇಶಕರ ಸ್ಥಾನವನ್ನು ಅಸಿಂಧುವೆಂದು ಆದೇಶ ಮಾಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಮಧುಗಿರಿಯ ನಾಗೇಶ್ ಬಾಬು ಮತ್ತು ಪಾವಗಡದ ಚಂದ್ರಶೇಖರರೆಡ್ಡಿ ಈ ಇಬ್ಬರು ದ್ವಿಸದಸ್ಯ ಪೀಠದ ಮುಂದೆ ಮೇಲ್ಮನವಿ ಸಲ್ಲಿಸಿದ್ದರು. ಪ್ರಸ್ತುತ ಏಕಸದಸ್ಯ ಪೀಠ ನೀಡಿದ್ದ ತೀಪ್ರನ್ನು ರದ್ದುಗೊಳಿಸಿ ಚುನಾವಣೆ ಫಲಿತಾಂಶವೇ ಅಂತಿಮವೆಂದು ಹೈಕೋರ್ಟ್ ದ್ವಿಸದಸ್ಯ ಪೀಠ ಆದೇಶಿಸಿದೆ.
ತುಮುಲ್ ನಿರ್ದೇಶಕ ಬಿ.ನಾಗೇಶ್ ಬಾಬು ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕೊಂಡವಾಡಿ ಚಂದ್ರಶೇಖರ್ ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿದ್ದು, ಅವರಷ್ಟು ಮೇದಾವಿ ನಾವಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಸ್ತುತ ಸತ್ಯಕ್ಕೆ ಜಯವಾಗಿದ್ದು ನಾನೇ ತುಮುಲ್ ನಿರ್ದೇಶಕ ಎಂದರು.ಗೋಷ್ಠಿಯಲ್ಲಿ ಕೆಎಂಎಫ್ ನಿರ್ದೇಶಕ ಮೈದನಹಳ್ಳಿ ಕಾಂತರಾಜು, ಟಿಎಪಿಸಿಎಂಎಸ್ ಅಧ್ಯಕ್ಷ ಎಂ.ಎಸ್.ಮಲ್ಲಿಕಾರ್ಜುನಯ್ಯ, ಪುರಸಭೆ ಮಾಜಿ ಅಧ್ಯಕ್ಷ ಲಾಲಪೇಟೆ ಮಂಜುನಾಥ್, ಲಕ್ಷ್ಮೀನಾರಾಯಣ್,ಪಿ.ಟಿ ಗೋವಿಂದಪ್ಪ,ಡಿ.ಎಚ್.ನಾಗರಾಜು,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಾಲಯ್ಯ, ಶ್ರೀನಿವಾಸರೆಡ್ಡಿ, ರಂಜಿತ್,ರಾಮಕೃಷ್ಣ ,ದೀಪಕ್,ಟಿವಿಎಸ್ ಮಂಜು ಇತರರಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))