ಸೇಡಂ ತಾಲೂಕಿನ ದೇವನೂರು ಗ್ರಾಮದ ಅರ್ಜುನಪ್ಪ ಹನುಮಂತ ಮಡಿವಾಳ ಎಂಬ ಯುವಕನನ್ನು ಹಣಕ್ಕೆ ಬೇಡಿಕೆ ಇಟ್ಟು ಬೆತ್ತಲೆಗೊಳಿಸಿ, ಕರೆಂಟ್ ಶಾಕ್ ನೀಡಿ ಹಲ್ಲೆ ಮಾಡಿದ ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿ ಜಿಲ್ಲಾ ಮಡಿವಾಳರ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಹಾಗೂ ಮಾನವ ಹಕ್ಕುಗಳ ಆಯೋಗಕ್ಕೆ ಮನವಿ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಸೇಡಂ ತಾಲೂಕಿನ ದೇವನೂರು ಗ್ರಾಮದ ಅರ್ಜುನಪ್ಪ ಹನುಮಂತ ಮಡಿವಾಳ ಎಂಬ ಯುವಕನನ್ನು ಹಣಕ್ಕೆ ಬೇಡಿಕೆ ಇಟ್ಟು ಬೆತ್ತಲೆಗೊಳಿಸಿ, ಕರೆಂಟ್ ಶಾಕ್ ನೀಡಿ ಹಲ್ಲೆ ಮಾಡಿದ ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿ ಜಿಲ್ಲಾ ಮಡಿವಾಳರ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಹಾಗೂ ಮಾನವ ಹಕ್ಕುಗಳ ಆಯೋಗಕ್ಕೆ ಮನವಿ ಸಲ್ಲಿಸಿದರು.ಈ ವೇಳೆ ಜಿಲ್ಲಾಧ್ಯಕ್ಷ ಸಾಯಬಣ್ಣಾ ಮಡಿವಾಳರ ಮಾತನಾಡಿ, ಬೈಕ್ ಮಾರಾಟ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಮೇ 4 ಮತ್ತು 5 ರಂದು ಅರ್ಜುನಪ್ಪನನ್ನು ಹಾಗರಗಾ ಕ್ರಾಸ್‌ನಲ್ಲಿನ ಮನೆಯೊಂದಕ್ಕೆ ಕರೆದುಕೊಂಡು ಹೋಗಿ ಕೂಡಿಹಾಕಿ ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆತ್ತಲೆಗೊಳಿಸಿ, ಮರ್ಮಾಂಗಕ್ಕೆ ಕರೆಂಟ್ ಶಾಕ್ ನೀಡಿ ಚಿತ್ರ ಹಿಂಸೆ ನೀಡಿ ಮನಸೋ ಇಚ್ಛೆ ಥಳಿಸಿದ್ದಾರೆ. ನಂತರ ದನದ ಮಾಂಸ ತಿನ್ನಲು ಒತ್ತಾಯಿಸಿದ್ದಾರೆ ಎಂದು ಆರೋಪಿಸಿದರು.
ಈ ಹಲ್ಲೆ ಮಾಡುವ ಸಂಪೂರ್ಣ ವಿಡಿಯೋವನ್ನು ಮಾಡಿದ್ದು, ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದೆ. ಈ ಘಟನೆ ಕುರಿತು ಸರ್ಕಾರ ಮತ್ತು ಅಧಿಕಾರಿಗಳ ಬಗ್ಗೆ ರೌಡಿ, ಗೂಂಡಾಗಳಿಗೆ ಯಾವುದೇ ಭಯವಿಲ್ಲದಂತಾಗಿದೆ ಎಂದು ದೂರಿದರು. ಆರೋಪಿಗಳನ್ನು ಕೂಡಲೇ ಬಂಧಿಸಿ ಕಾನೂನಿನಡಿ ಕಠಿಣ ಕ್ರಮ ಕೈಗೊಳ್ಳಬೇಕು. ಇದರ ಬಗ್ಗೆ ಗಂಭೀರ ಚಿಂತನೆ ನಡೆಸಿ ರಾಜ್ಯದಲ್ಲಿ ಇತಹ ಘಟನೆಗಳು ಪುನರಾವರ್ತನೆಯಾಗದಂತೆ ಪೊಲೀಸರು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.ಶಿವಪ್ಪ ಹುಬ್ಬಳ್ಳಿ, ಪರಶುರಾಮ ಮಲಕಣ್ಣನವರ, ಷಣ್ಮುಖ ಮಡಿವಾಳರ, ಪ್ರಭು ಮಡಿವಾಳರ, ಮಡಿವಾಳಿ ಮಡಿವಾಳರ, ರಾಜು ಗುಂಡಪ್ಪ ಮಡಿವಾಳರ, ಶಿವಕುಮಾರ ಪರೀಟ, ವಿರುಪಾಕ್ಷ ಮಡಿವಳಾರ, ವೀರಘಂಟಿ ಮಡಿವಾಳರ, ಮಲ್ಲು ಮಡಿವಾಳರ, ರಮೇಶ ಅಗಸರ, ರಮೇಶ ತೊನಶ್ಯಾಳ, ಮಲಕಪ್ಪ ಹುಬ್ಬಳ್ಳಿ, ಶ್ರೀಶೈಲ ಅಗಸರ, ಪರಶುರಾಮ ಬೋರಗಿ, ನಾಗೇಶ ಮಡಿವಾಳರ, ಬಾಬು ಮುಳವಾಡ, ಭೀಮಣ್ಣ ಹುಬ್ಬಳ್ಳಿ, ಪರಸಪ್ಪ ಕೋಲಾರ, ಗಿರೀಶ ಅಗಸರ, ನಾರಾಯಣ ಸಿಂದಗಿ, ನಾರಾಯಣ ಜಾಧವ, ಜೀವನ ಹಿಪ್ಪರಗಿ, ವೆಂಕಣ್ಣ ಕಟ್ಟಿಮನಿ, ಆಕಾಶ ಅಗಸರ, ಸಚಿನ ಅಗಸರ, ಶಂಕರ ಅಗಸರ, ಬಾಬು ಪರೀಟ, ಸುರೇಶ ಪರೀಟ, ಲಕ್ಷ್ಮಣ ಅಗಸರ ಮುಂತಾದವರು ಇದ್ದರು.