ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವರ್ಷಾವಧಿ ಜಾತ್ರೆಯ ಅಂಗವಾಗಿ ಮಂಗಳವಾರ ರಾತ್ರಿ ನಡೆದ ಧಾರ್ಮಿಕ ಸಭೆ

ಬೆಳ್ತಂಗಡಿ: ಬೇರೆ ಬೇರೆ ಜಾತಿ, ಧರ್ಮ, ಆಚಾರ, ವಿಚಾರ, ಸಂಸ್ಕೃತಿ, ಸಂಸ್ಕಾರ ಹೊಂದಿರುವ ನಮ್ಮ ದೇಶದಲ್ಲಿ ಎಲ್ಲರೂ ಸಮಾನತೆಯಿಂದ ಬದುಕು ಕಟ್ಟಿ ಕೊಂಡು ಜೀವನ ನಡೆಸುತ್ತಿದ್ದಾರೆ. ಆ ಆಚರಣೆಯಂತೆ ಕಷ್ಟದಲ್ಲಿರುವವರಿಗೆ ಸಹಕಾರ ನೀಡುವುದರೊಂದಿಗೆ ದೇವರನ್ನು ಒಲಿಸಲು ಸಾಧ್ಯ ಎಂದು ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್ ಹೇಳಿದ್ದಾರೆ.

ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವರ್ಷಾವಧಿ ಜಾತ್ರೆಯ ಅಂಗವಾಗಿ ಮಂಗಳವಾರ ರಾತ್ರಿ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು.

ಬೆಳ್ತಂಗಡಿ ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಮ್ ಮಾತನಾಡಿ, ದೇವಸ್ಥಾನದಲ್ಲಿ ಎಲ್ಲಾ ವರ್ಗದವರು ಬಂದು ತಮ್ಮ ಸೇವೆಯನ್ನು ಮಾಡುತ್ತಿದ್ದು ಇಲ್ಲಿ ಯಾವುದೇ ರಾಜಕೀಯ ತಾರದೆ ದೇವಸ್ಥಾನದ ಅಭಿವೃದ್ಧಿಗೆ ಒಮ್ಮತದಿಂದ ಶ್ರಮಿಸುತ್ತಿರುವ ವ್ಯವಸ್ಥಾಪನಾ ಸಮಿತಿಯ ಯುವ ತಂಡ ಕೆಲಸ ಮಾಡುತ್ತಿದೆ ಎಂದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯ ನಿರ್ವಾಹಣಾ ಧಿಕಾರಿ ಅನಿಲ್ ಕುಮಾರ್ ಮಾತನಾಡಿ, ದ.ಕ. ಜಿಲ್ಲೆ ಯಲ್ಲಿ ಸಂಸ್ಕೃತಿ ಆಚಾರ, ಧಾರ್ಮಿಕ ಆಚರಣೆ ಉಳಿಸಲು ಹಿಂದಿನ ಹಿರಿಯರು ಮಾಡಿದ ಭಕ್ತಿ ಶ್ರಮದಿಂದ ಸಾಧ್ಯವಾಗಿದೆ. ಅಂದು ಕಷ್ಟ ಜೀವನದಲ್ಲಿ ಅದೇ ಸುಖವಾಗಿತ್ತು ಈಗ ಬಲಿಷ್ಠ ವ್ಯವಸ್ಥೆ ಇದ್ದರೂ ಸುಖ ಇಲ್ಲ ಎಂದರು. ಶಿಕ್ಷಣೋದ್ಯಮಿ ಸುಮಂತ್ ಕುಮಾರ್ ಜೈನ್ ಮಾತನಾಡಿ ಊರಿನ ಜಾತ್ರಾ ಮಹೋತ್ಸವ ಎಲ್ಲರಿಗೂ ಖುಷಿ ನೀಡುವ ಹಬ್ಬ ಪ್ರತಿಯೊಬ್ಬರು ತೊಡಗಿಸಿ ಕೊಳ್ಳುವ ವಿಶೇಷ ಹಬ್ಬ. ಇಂತಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಒಟ್ಟು ಸೇರಿಸುವ ಕಾರ್ಯ ಆಗುತ್ತದೆ ಎಂದರು.ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ. ಹರೀಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಅಭಿವೃದ್ಧಿ ಸಮಿತಿ ಅಧ್ಯಕ್ಷ ಯಾದವ ಗೌಡ, ಶ್ರೀ ದುರ್ಗಾ ಮಾತೃ ಮಂಡಳಿ ಅಧ್ಯಕ್ಷೆ ಮಮತಾ ಆಳ್ವ, ಭಜನಾ ಮಂಡಳಿ ಅಧ್ಯಕ್ಷ ಗಣೇಶ್ ನಾಳ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಹೇಮಂತ್ ಕುಮಾರ್, ಶರತ್ ಕುಮಾರ್ ಶೆಟ್ಟಿ, ಹರೀಶ್ ಗೌಡ ಕೆ., ನೀನಾ ಕುಮಾರ್, ಅರುಣ್ ಕುಮಾರ್ ಶೆಟ್ಟಿ, ರೀತಾ ಪಿ, ಮೋಹಿನಿ ಹಾಜರಿದ್ದರು.ಕೇಶವ ಬಂಗೇರ ಸ್ವಾಗತಿಸಿದರು. ದೀಕ್ಷಿತ್ ನಿರೂಪಿಸಿದರು. ಗಣೇಶ್ ನಾಳ ವಂದಿಸಿದರು.800 ವರ್ಷಗಳ ಇತಿಹಾಸ ವಿರುವ ಈ ಕ್ಷೇತ್ರದ ದೇವಿಯ ಕೃಪೆಯಿಂದ ಜವಾಬ್ದಾರಿ ಬಂದಿದೆ. ಮುಂದಿನ ವರ್ಷ ನಡೆಯುವ ಬ್ರಹ್ಮ ಕಲಶದ ಮೊದಲು ದೇವಸ್ಥಾನಕ್ಕೆ ಅಗತ್ಯ ವಿರುವ ಕಾಮಗಾರಿಗಳಾದ ಅಂಗಳಕ್ಕೆ ಹಾಸುಕಲ್ಲು ಹಾಕಿಸುವ ಬಗ್ಗೆ ಸುಮಂತ್ ಕುಮಾರ್ ಭರವಸೆ ನೀಡಿದ್ದಾರೆ. ಸಭಾ ಭವನ, ಅನ್ನಛತ್ರ, ನೀರಿನ ಟ್ಯಾಂಕ್, ಊಟದ ಸ್ಟೀಲ್ ಬಟ್ಟಲು ವ್ಯವಸ್ಥೆ, ಮುಖ್ಯ ದ್ವಾರ, ಜನರೇಟರ್, ಸುತ್ತು ಪೌಳಿ, ಮೊದಲಾದ ಕಾಮಗಾರಿ ಬ್ರಹ್ಮ ಕಲಶದ ಮೊದಲು ದಾನಿಗಳ ಮತ್ತು ಸರ್ಕಾರದ ಅನುದಾನದಲ್ಲಿ ಮಾಡಲು ಪ್ರಯತ್ನಿಸ ಲಾಗುವುದು. ದೇವರಿಗೆ ಸ್ವರ್ಣ ಕಿರೀಟ ಕಾಣಿಕೆ ಯೋಜನೆ ಪ್ರಾರಂಭ ಮಾಡಲಾಯಿತು. ಎಲ್ಲರೂ ಸಹಕಾರ ನೀಡಬೇಕು.

-ಬಿ. ಹರೀಶ್ ಕುಮಾರ್, ಅಧ್ಯಕ್ಷರು ವ್ಯವಸ್ಥಾಪನಾ ಸಮಿತಿ.ಮಹಾ ರಥೋತ್ಸವ ದೇವಳದ ಬ್ರಹ್ಮ ಶ್ರೀ ಬಾಲಕೃಷ್ಣ ಪಾಂಗಾಣ್ಣಾಯ ತಂತ್ರಿಗಳ ಮಾರ್ಗದರ್ಶನದಲ್ಲಿ, ಪ್ರಧಾನ ಅರ್ಚಕ ವೇ. ಮೂ. ರಾಘವೇಂದ್ರ ಅಸ್ರಣ್ಣ ಮತ್ತು ಅರ್ಚಕ ವೃಂದದವರಿಂದ ಜ. 24 ರಿಂದ ಧ್ವಜಾರೋಹಣ ಮೂಲಕ ಆರಂಭ ಗೊಂಡು ವಿವಿಧ ವೈದಿಕ ವಿಧಾನಗಳೊಂದಿಗೆ ನಡೆದು ಜ. 26ರಂದು ಬೆಳಗ್ಗೆ ದೇವರ ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ ನಡೆಯಿತು. ರಾತ್ರಿ ದೇವರ ಬಲಿ ಉತ್ಸವ, ಕೊಡಮಣಿ ತ್ತಾಯದೈವದ ಗಗ್ಗರ ಸೇವೆ ಬಳಿಕ ಮಹಾ ರಥೋತ್ಸವ ನಡೆಯಿತು.