ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯಮೈಸೂರಿನ ಅರಸ ನಾಲ್ವಡಿ ಕೃಷ್ಣರಾಜ ಒಡೆಯರ್ ಹಲವು ಜನಪರ ಕಾರ್ಯಗಳನ್ನು ಹಮ್ಮಿಕೊಂಡು ಜನಮಾನಸದ ದೊರೆಯಾಗಿ ಉಳಿದಿದ್ದಾರೆ ಎಂದು ನಾಲ್ವಡಿ ಕೃಷ್ಣರಾಜ ಒಡೆಯರ್ ಟ್ರಸ್ಟ್ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್ ತಿಳಿಸಿದರು.ತಾಲೂಕಿನ ತಗ್ಗಹಳ್ಳಿ ಅಂಬೇಡ್ಕರ್ ಸಮುದಾಯ ಭವನದಲ್ಲಿ ವಿಶ್ವಜ್ಞಾನಿ ಡಾ.ಬಿ.ಆರ್.ಅಂಬೇಡ್ಕರ್ ಗೆಳೆಯರ ಬಳಗ ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್ ಟ್ರಸ್ಟ್ ವತಿಯಿಂದ ನಡೆದ ನಾಲ್ವಡಿಯವರ 140ನೇ ಜನ್ಮದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಲೆ, ಸಾಹಿತ್ಯ, ಶಿಕ್ಷಣ, ಕೈಗಾರಿಕೆ, ಆರೋಗ್ಯ, ನೀರಾವರಿ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ಅಲ್ಲದೇ ಕನ್ನಂಬಾಡಿ ಕಟ್ಟೆ ನಿರ್ಮಿಸಿ ಈ ಭಾಗದ ಜನರ ಅನ್ನದಾತರಾಗಿದ್ದಾರೆ ಎಂದರು.ಉಪನ್ಯಾಸಕ ಚಂದಗಾಲು ಲೋಕೇಶ್ ಮಾತನಾಡಿ, ಜಿಲ್ಲೆಯ ಜನತೆ ಪ್ರತಿದಿನ ನಾಲ್ವಡಿ ಅವರನ್ನು ನೆನೆದು ಕೆಲಸ ಆರಂಭಿಸಬೇಕು. ರಾಜಪ್ರಭುತ್ವ ಜನಸಾಮಾನ್ಯರ ಕೈಯಲ್ಲಿ ಇತ್ತು ಎಂದರೆ ಅದು ನಾಲ್ವಡಿಯವರ ಕಾಲದಲ್ಲಿ ಮಾತ್ರ ಎಂದು ಸ್ಮರಿಸಿದರು.ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಮಂಗಲ ಲಂಕೇಶ್ ಮಾತನಾಡಿ, ನಾಲ್ವಡಿ ಅಸ್ಪೃಶ್ಯತೆ ಹೋಗಲಾಡಿಸಲು ಶೂದ್ರರಿಗೆ ಅರಮನೆ ಪ್ರವೇಶ, ಉದ್ಯೋಗದಲ್ಲಿ ಮೀಸಲಾತಿ ನೀಡಿ ಸಮಸಮಾಜದ ಕನಸು ಕಂಡರು. ಮೌಢ್ಯ ಮತ್ತು ಅನಿಷ್ಠ ಪದ್ಧತಿಗಳ ನಿರ್ಮೂಲನೆಗೆ ಮುಂದಾದರು ಎಂದು ಹೇಳಿದರು.ವೇದಿಕೆಯಲ್ಲಿ ಸಮಾನ ಮನಸ್ಕರ ವೇದಿಕೆ ಟಿ.ಡಿ.ನಾಗರಾಜ್, ವಕೀಲ ಲಕ್ಷ್ಮಣ್ ಚೀರನಹಳ್ಳಿ, ಗ್ರಾಪಂ ಮಾಜಿ ಅಧ್ಯಕ್ಷ ಟಿ.ಎಂ. ಸುರೇಶ್, ಹಾಲಿ ಸದಸ್ಯ ಲಿಂಗಣ್ಣ, ಡೇರಿ ಮಾಜಿ ಅಧ್ಯಕ್ಷ ಸಿದ್ದರಾಜು, ವಿಎಸ್ಎಸ್ಎನ್ ಸಿಇಓ ಟಿ.ಕೆ.ಸಿದ್ದರಾಜು, ಟ್ರಸ್ಟ್ ನ ಮಂಜು, ಟಿ.ಎಸ್.ಚಂದನ್, ವಿಶ್ವಜ್ಞಾನಿ ಅಂಬೇಡ್ಕರ್ ಗೆಳಯರ ಬಳಗದ ಅಧ್ಯಕ್ಷ ರಾಜು, ಖಜಾಂಚಿ ಹೇಮಂತ್, ವಿವೇಕ್, ರವಿ, ಸಿದ್ದರಾಜು, ಲಿಂಗರಾಜು, ದೇವಯ್ಯ, ನಾರಾಯಣ ಹಾಗೂ ಪದ್ಮ ಉಪಸ್ಥಿತರಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))