ಸಾರಾಂಶ
ಬೆಂಗಳೂರು : ಐದು ನಗರ ಪಾಲಿಕೆಗಳ ವಲಯಗಳಿಗೆ ನಾಮಕರಣ ಮಾಡಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಆದೇಶಿಸಿದೆ. ಪ್ರತಿ ನಗರ ಪಾಲಿಕೆಗೆ ತಲಾ 2 ವಲಯಗಳಂತೆ ರಚನೆ ಮಾಡಲಾಗಿತ್ತು. ಇದೀಗ ಪ್ರತಿ ವಲಯಕ್ಕೂ ಹೆಸರು ಸೂಚಿಸಿ ನಾಮಕರಣ ಮಾಡಲಾಗಿದೆ.
ಬೆಂಗಳೂರು ಕೇಂದ್ರ ನಗರ ಪಾಲಿಕೆಯ ವಲಯ-1ಕ್ಕೆ ಸಿ.ವಿ.ರಾಮನ್ ನಗರ ವಲಯ ಎಂದು ನಾಮಕರಣ ಮಾಡಲಾಗಿದೆ. ಅದೇ ರೀತಿ ವಲಯ-2ಕ್ಕೆ ಗಾಂಧಿನಗರ. ಬೆಂಗಳೂರು ಪೂರ್ವ ನಗರ ಪಾಲಿಕೆಯ ವಲಯ-1ಕ್ಕೆ ಮಹದೇವಪುರ, ವಲಯ-2ಕ್ಕೆ ಕೆಆರ್‌ಪುರ. ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ವಲಯ-1ಕ್ಕೆ ಜಯನಗರ, ವಲಯ-2ಕ್ಕೆ ಬೊಮ್ಮನಹಳ್ಳಿ. ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ವಲಯ-1ಕ್ಕೆ ರಾಜರಾಜೇಶ್ವರಿ ನಗರ, ವಲಯ-2ಕ್ಕೆ ಮಲ್ಲೇಶ್ವರ. ಬೆಂಗಳೂರು ಉತ್ತರ ನಗರ ಪಾಲಿಕೆಯ ವಲಯ-1ಕ್ಕೆ ಬ್ಯಾಟರಾಯನಗರಪುರ, ವಲಯ-2ಕ್ಕೆ ಯಲಹಂಕ ಎಂದು ಹೆಸರು ನಾಮಕರಣ ಮಾಡಲಾಗಿದೆ.
ಇನ್ನೂ ಸಿ.ವಿ.ರಾಮನ್ ನಗರ ವಲಯದ ವ್ಯಾಪ್ತಿಗೆ ಸಿ.ವಿ. ರಾಮನ್ ನಗರ, ಶಾಂತಿ ನಗರ ವಿಧಾನಸಭಾ ಕ್ಷೇತ್ರ,ಗಾಂಧಿ ನಗರ ವಲಯಕ್ಕೆ ಗಾಂಧಿನಗರ, ಶಿವಾಜಿನಗರ, ಚಿಕ್ಕಪೇಟೆ ಹಾಗೂ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರ, ಮಹದೇವಪುರ ವಲಯಕ್ಕೆ ಮಹದೇವಪುರ ವಿಧಾನಸಭಾ ಕ್ಷೇತ್ರ, ಕೆ.ಆರ್.ಪುರ ವಲಯಕ್ಕೆ ಕೆಆರ್‌ಪುರ ವಿಧಾನಸಭಾ ಕ್ಷೇತ್ರ, ಜಯನಗರ ವಲಯಕ್ಕೆ ಜಯನಗರ, ಯಶವಂತಪುರ (ಭಾಗಶಃ), ಪದ್ಮನಾಭನಗರ (ಭಾಗಶಃ), ಆರ್‌ಆರ್‌ನಗರ (ಭಾಗಶಃ), ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ, ಬೊಮ್ಮನಹಳ್ಳಿ ವಲಯಕ್ಕೆ ಬೊಮ್ಮನಹಳ್ಳಿ, ಬಿಟಿಎಂ ಲೇಔಟ್, ಮಹದೇವಪುರ (ಭಾಗಶಃ), ಆನೇಕಲ್ (ಭಾಗಶಃ) ವಿಧಾನಸಭಾ ಕ್ಷೇತ್ರ, ಆರ್ ಆರ್‌ನಗರ ವಲಯಕ್ಕೆ ಆರ್ ಆರ್‌ನಗರ (ಭಾಗಶಃ), ಯಶವಂತಪುರ (ಭಾಗಶಃ), ದಾಸರಹಳ್ಳಿ (ಭಾಗಶಃ), ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರ,