ಅಂಕೋಲಾದಲ್ಲಿ ಇಂದು ನಮೋ ಭಾರತ್

| Published : Feb 10 2024, 01:49 AM IST

ಸಾರಾಂಶ

ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಬೇಕು ಎನ್ನುವ ಕಾರಣಕ್ಕಾಗಿ ನಮೋ ಬ್ರಿಗೇಡ್ ತಂಡ ಫೆ.10ರಂದು ನಗರದ ಪಿ.ಎಂ. ಹೈಸ್ಕೂಲ್‌ ಆವರಣದಲ್ಲಿ ಸಂಜೆ 4.30ಕ್ಕೆ ನಮೋ ಭಾರತ್ ಕಾರ್ಯಕ್ರಮ ಹಮ್ಮಿಕೊಂಡಿದೆ.

ಅಂಕೋಲಾ:

ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಬೇಕು ಎನ್ನುವ ಕಾರಣಕ್ಕಾಗಿ ನಮೋ ಬ್ರಿಗೇಡ್ ತಂಡ ಫೆ.10ರಂದು ನಗರದ ಪಿ.ಎಂ. ಹೈಸ್ಕೂಲ್‌ ಆವರಣದಲ್ಲಿ ಸಂಜೆ 4.30ಕ್ಕೆ ನಮೋ ಭಾರತ್ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ತಾಲೂಕು ನಮೋ ಬ್ರಿಗೇಡ್‌ ಸಂಚಾಲಕ ಸಂದೀಪ ಗಾಂವಕರ ತಿಳಿಸಿದರು.ಅವರು ದೈವಜ್ಞ ಸಭಾಭವನದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಈ ಕುರಿತು ಮಾಹಿತಿ ನೀಡಿ, ಚಿಂತಕ ಚಕ್ರವರ್ತಿ ಸೂಲಿಬೆಲೆ ನೇತೃತ್ವದಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಮೋದಿ ಅಭಿಮಾನಿಗಳು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಕೋರಿದರು.ಚಕ್ರವರ್ತಿ ಸೂಲಿಬೆಲೆ ದಿಕ್ಸೂಚಿ ಭಾಷಣ ಮಾಡಲಿದ್ದಾರೆಂದ ನಮೋ ಬ್ರಿಗೇಡ್ ತಂಡದ ಜಿಲ್ಲಾ ಸಂಚಾಲಕ ಅಣ್ಣಪ್ಪ ನಾಯ್ಕ, ಮೋದಿ ಪ್ರಧಾನಿಯಾಗಿ ಹತ್ತು ವರ್ಷಗಳಾದರೂ ಅವರ ಜನಪ್ರಿಯತೆ ಕಡಿಮೆಯಾಗಿಲ್ಲ. ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕು ಎನ್ನುವುದು ಪ್ರತಿಯೊಬ್ಬರ ಆಶಯವಾಗಿದೆ ಎಂದರು. ಅಂಕೋಲಾದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪತ್ರಕರ್ತ ರಾಘು ಕಾಕರಮಠ, ಅವರ್ಸಾದ ದಿನೇಶ ಮೇತ್ರಿ, ಸಂಜಯ ತಳೇಕರ, ಸುರೇಶ ವೆರ್ಣೇಕರ ಅಲಗೇರಿ ಹಾಗೂ ಪುರುಷೋತ್ತಮ ನಾಯಕ ಉಪಸ್ಥಿತರಿರಲಿದ್ದಾರೆ ಎಂದು ತಿಳಿಸಿದರು.

ಗಣೇಶ ಕುಡ್ತಲಕರ, ನಾಗರಾಜ ಐಗಳ, ರಾಘವೇಂದ್ರ ಗಾಂವಕರ, ರಾಘು ನಾಯ್ಕ್, ಪ್ರವೀಣ ನಾಯ್ಕ, ಸುರೇಶ ಗೌಡ, ಸಂತೋಷ ನಾಯ್ಕ, ಪವನ ಗಾಂವಕರ, ನಾಗರಾಜ ನಾಯ್ಕ್, ಸುಬ್ರಮಣ್ಯ ರೇವಣಕರ, ಸುಪ್ರೀತ ಗಾಂವಕರ, ಕರಣ ನಾಯ್ಕ, ಪ್ರವೀಣ ಗೌಡ, ವಿನಾಯಕ ಗುಡಿಗಾರ, ಗಜಾನನ ನಾಯ್ಕ್, ಪುಷ್ಪಾ ಶೆಟ್ಟಿ, ಸುಲಕ್ಷಾ ಭೋವಿ ಉಪಸ್ಥಿತರಿದ್ದರು.