ಸಾರಾಂಶ
ದೇಶದ ದಕ್ಷ ಆಡಳಿತಗಾರ, ಸ್ಪಂದನಶೀಲ ಪ್ರಧಾನಿ ನರೇಂದ್ರ ಮೋದಿ 3ನೇ ಅವಧಿಯಲ್ಲಿ ಯಶಸ್ವಿಯಾಗಿ 100 ದಿನ ಪೂರೈಸಿದ್ದಾರೆ. 74ನೇ ಜನ್ಮದಿನ ಆಚರಿಸಿಕೊಳ್ಳುತ್ತಿರುವ ಮೋದಿ ಅವರು ಅತ್ಯಂತ ಕ್ರಿಯಾಶೀಲ ಪ್ರಧಾನಿಯಾಗಿದ್ದಾರೆ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ ದಾವಣಗೆರೆಯಲ್ಲಿ ಹೇಳಿದ್ದಾರೆ.
- ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ ಅಭಿಮತ । ಮೋದಿ ಜನ್ಮದಿನ: ರೋಗಿಗಳಿಗೆ ಹಣ್ಣು ವಿತರಣೆ
- - - ಕನ್ನಡಪ್ರಭ ವಾರ್ತೆ ದಾವಣಗೆರೆದೇಶದ ದಕ್ಷ ಆಡಳಿತಗಾರ, ಸ್ಪಂದನಶೀಲ ಪ್ರಧಾನಿ ನರೇಂದ್ರ ಮೋದಿ 3ನೇ ಅವಧಿಯಲ್ಲಿ ಯಶಸ್ವಿಯಾಗಿ 100 ದಿನ ಪೂರೈಸಿದ್ದಾರೆ. 74ನೇ ಜನ್ಮದಿನ ಆಚರಿಸಿಕೊಳ್ಳುತ್ತಿರುವ ಮೋದಿ ಅವರು ಅತ್ಯಂತ ಕ್ರಿಯಾಶೀಲ ಪ್ರಧಾನಿಯಾಗಿದ್ದಾರೆ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ ಹೇಳಿದರು.
ನಗರದ ಜಿಲ್ಲಾಸ್ಪತ್ರೆಯಲ್ಲಿ ಮಂಗಳವಾರ ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನ ಹಾಗೂ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ 100 ದಿನ ಪೂರೈಸಿದ ಹಿನ್ನೆಲೆ ಆಸ್ಪತ್ರೆ ಒಳರೋಗಿಗಳಿಗೆ ಹಣ್ಣು ವಿತರಿಸಿ, ಮಾತನಾಡಿದರು. ವಿಶಿಷ್ಟ ವ್ಯಕ್ತಿತ್ವದ ನರೇಂದ್ರ ಮೋದಿ ಸವಾಲುಗಳನ್ನು ಪರಿಹರಿಸುವ ಸರದಾರನಾಗಿದ್ದಾರೆ. ಇಂತಹ ನಾಯಕನನ್ನು ಪ್ರಧಾನಿಯಾಗಿ ಪಡೆದ ಭಾರತೀಯರು ಪುಣ್ಯವಂತರು. ಮೂರು ಅವಧಿಗೆ ಪ್ರಧಾನಿಯಾಗಿ ನರೇಂದ್ರ ಮೋದಿ ಇಡೀ ವಿಶ್ವವೇ ತಲೆದೂಗುವಂತೆ ದೇಶವನ್ನು ಮುನ್ನಡೆಸುತ್ತಿದ್ದಾರೆ. ಜಾಗತಿಕ ಮಟ್ಟದಲ್ಲಿ ಭಾರತದ ಪ್ರಧಾನಿಯೆಂದರೆ ಏನೆಂಬುದನ್ನು ತೋರಿಸಿಕೊಟ್ಟ ಶ್ರೇಯವೂ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.ಬಿಜೆಪಿ ಜಿಲ್ಲಾ ವಕ್ತಾರ ಬಿ.ಎಂ.ಸತೀಶ ಕೊಳೇನಹಳ್ಳಿ ಮಾತನಾಡಿ, ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆ, ಪ್ರಧಾನಮಂತ್ರಿ ಜನಧನ್ ಯೋಜನೆ, ತೆರಿಗೆ ವ್ಯವಸ್ಥೆ ಸುಧಾರಣೆ, ಒಂದು ದೇಶ ಒಂದು ತೆರಿಗೆ ಎಂಬ ವಿನೂತನ ಸಂಕಲ್ಪದೊಂದಿಗೆ ಜಿಎಸ್‌ಟಿ ಜಾರಿ, ನಕಲಿ ನೋಟು ತಡೆಗೆ ನೋಟು ಅಮಾನ್ಯೀಕರಣ ಇತ್ಯಾದಿ ಸಾಕಷ್ಟು ಕ್ರಾಂತಿಕಾರಿ ಸಾಧನೆಯನ್ನು ನರೇಂದ್ರ ಮೋದಿ ಪ್ರಧಾನಿಯಾಗಿ ಮಾಡಿದ್ದಾರೆ ಎಂದರು.
ಜಿಲ್ಲಾಸ್ಪತ್ರೆ ಅಧೀಕ್ಷಕ ಡಾ. ಎಂ.ಬಿ. ನಾಗೇಂದ್ರಪ್ಪ, ಬಿಜೆಪಿ ರೈತ ಮೋರ್ಚಾ ಮುಖಂಡರಾದ ಅಣಜಿ ಗುಡ್ಡೇಶ, ಬಾತಿ ಬಿ.ಕೆ. ಶಿವಕುಮಾರ, ಅಣಬೇರು ಶಿವಪ್ರಕಾಶ, ಎನ್.ಎಚ್. ಹಾಲೇಶ, ಟಿಂಕರ್ ಮಂಜಣ್ಣ, ಮಾಧ್ಯಮ ಸಂಚಾಲಕ ಕೊಟ್ರೇಶ ಗೌಡ, ಎಸ್ಓಜಿ ಕಾಲನಿ ಅಂಜಿನಪ್ಪ ಮಾಳಿಗೇರ, ಸತೀಶ, ಮಂಜುನಾಥ, ಪೋತಳ ಶ್ರೀನಿವಾಸ ಇತರರು ಇದ್ದರು.- - - -17ಕೆಡಿವಿಜಿ1, 2:
ಪ್ರಧಾನಿ ನರೇಂದ್ರ ಮೋದಿ ಜನ್ಮದಿನ ಅಂಗವಾಗಿ ದಾವಣಗೆರೆಯಲ್ಲಿ ಬಿಜೆಪಿ ರೈತ ಮೋರ್ಚಾದಿಂದ ಒಳರೋಗಿಗಳಿಗೆ ಹಣ್ಣು ವಿತರಿಸಲಾಯಿತು.