ಸಾರಾಂಶ
ದೇವಾಲಯದ ಸೇವೆಯಲ್ಲಿದ್ದ ನಂದೀಶ ಇಹಲೋಕ ತ್ಯಜಿಸಿದೆ. ದೇವಾಲಯದ ಗೋ ಶಾಲೆಯ ಆವರಣದಲ್ಲಿ ಅಂತಿಮ ಸಂಸ್ಕಾರ ನಡೆಯಿತು.
ಮಡಿಕೇರಿ: ನಗರದ ಶ್ರೀ ಓಂಕಾರೇಶ್ವರ ದೇವಾಲಯದ ನಿತ್ಯ ಸೇವೆಯಲ್ಲಿದ್ದ ನಂದಿ, ‘ನಂದೀಶ’ ಸೋಮವಾರ ಇಹಲೋಕ ತ್ಯಜಿಸಿದೆ. ಮಡಿಕೇರಿಯ ಶ್ರೀ ಓಂಕಾರೇಶ್ವರನ ಸೇವೆಯಲ್ಲಿ ತೊಡಗಿದ್ದ ಎಲ್ಲರ ಪ್ರೀತಿಯ ನಂದಿ, ನಂದೀಶ ಸೋಮವಾರ ಇಹ ಲೋಕ ತ್ಯಜಿಸಿದ್ದು, ಮಧ್ಯಾಹ್ನ 12.30ಕ್ಕೆ ಓಂಕಾರೇಶ್ವರ ದೇವಸ್ಥಾನದ ಗೋಶಾಲೆಯ ಆವರಣದಲ್ಲಿ ಕೊಡಗು ಹವ್ಯಕ ವಲಯ, ಕೊಡಗು ಗೋ ಪರಿವಾರದ ಮೂಲಕ ವಿಶೇಷ ವಿಧಿವಿಧಾನಗಳೊಂದಿಗೆ ಅಂತಿಮ ಸಂಸ್ಕಾರ ನಡೆಯಿತು.
------------------------------------ರಸ್ತೆ ಅಪಘಾತ: ಇಬ್ಬರು ಸಾವು
ಮಡಿಕೇರಿ: ಮಡಿಕೇರಿ - ಮಂಗಳೂರು ರಾಷ್ಟ್ರೀಯ ಹೆದ್ದಾರಿ 275ರ ಸಂಪಾಜೆ ಸಮೀಪದ ಕೊಯನಾಡು ಅರಣ್ಯ ಇಲಾಖೆಯ ಐಬಿ ಬಳಿ ಬೈಕ್ ಅಪಘಾತದಲ್ಲಿ ಬೈಕ್ ಸವಾರ ಮತ್ತು ಹಿಂಬದಿ ಸವಾರ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಇಬ್ಬರು ಮೈಸೂರು ಮೂಲದವರಾಗಿದ್ದಾರೆ. ದುರ್ಘಟನೆ ಭಾನುವಾರ ತಡರಾತ್ರಿ ನಡೆದಿದೆ. ಸೋಮವಾರ ಬೆಳಗ್ಗೆ ಅಪಘಾತ ನಡೆದಿರುವುದು ಸ್ಥಳೀಯರ ಗಮನಕ್ಕೆ ಬಂದಿದ್ದು, ಬೈಕ್ ಹಾಗೂ ಇಬ್ಬರು ಯುವಕರಾದ ಭವನ್ ಮತ್ತು ಮನೋಜ್ ಅವರ ಮೃತದೇಹ ಚರಂಡಿಯಲ್ಲಿ ಪತ್ತೆಯಾಗಿದೆ.ಬೈಕ್ ಸವಾರರು ಮೈಸೂರಿನಿಂದ ಧರ್ಮಸ್ಥಳ ಕಡೆಗೆ ಪ್ರಯಾಣಿಸುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿ 275ರ ಕೊಯನಾಡು ಬಳಿಯಲ್ಲಿ ಈ ಘಟನೆ ಸಂಭವಿಸಿದೆ. ವೇಗವಾಗಿ ಬೈಕ್ ಚಾಲನೆ ಮಾಡಿ ರಸ್ತೆಯ ಡಿವೈಡರ್‌ಗೆ ಡಿಕ್ಕಿಯಾಗಿರಬಹುದು ಎಂದು ಶಂಕಿಸಲಾಗಿದೆ. ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.