ಸಾರಾಂಶ
ಶಾಸಕ ಕೆ.ವೈ.ನಂಜೇಗೌಡ ಅವರನ್ನು ೨ನೇ ಬಾರಿಗೆ ಕಡಿಮೆ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಡಿಕೆಸಿ ಸಹ ಮೊದಲ ಬಾರಿ ಕೇವಲ ೫೬೫ ಮತಗಳಿಂದ ಗೆದ್ದಿದ್ದರು. ಕಳೆದ ಚುನಾವಣೆಯಲ್ಲಿ ೧.೮೩ ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಸೇವೆ ಮಾಡಿದರೆ ಜನ ರಾಜಕಾರಣಿಗಳನ್ನು ಉಳಿಸಿಕೊಳ್ಳುತ್ತಾರೆ. ದೇವರು ವರವನ್ನು ಕೊಡುವುದಿಲ್ಲ. ಶಾಪವನ್ನು ಕೊಡುವುದಿಲ್ಲ. ಅವಕಾಶ ಮಾತ್ರ ಕೊಡುತ್ತಾನೆ.
ಕನ್ನಡ ಪ್ರಭವಾರ್ತೆ ಮಾಲೂರು
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಆಡಳಿತ ನಡೆಸುತ್ತಿದೆ. ಕೆ.ವೈ.ನಂಜೇಗೌಡರ ಕೈಯನ್ನು ಬಲಪಡಿಸಲು ನಾನು ಇಲ್ಲಿಗೆ ಬಂದಿದ್ದೇನೆ. ನ್ಯಾಯಾಲಯದಲ್ಲಿ ಮರು ಎಣಿಕೆ ಮಾಡಬೇಕು ಎನ್ನುವ ಆದೇಶ ಮಾಡಿದ್ದಾರೆ. ಯಾವುದೇ ಕಾರಣಕ್ಕೂ ಅವರ ಶಾಸಕ ಸ್ಥಾನ ರದ್ದಾಗಲು ಸಾಧ್ಯವೇ ಇಲ್ಲ ಹಾಗೂ ಮತ ಏಣಿಕೆ ಯಲ್ಲೂ ನಂಜೇಗೌಡ ವಿಜಯ ಸಾಧಿಸಲಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.ನಗರದ ಕುಪ್ಪಶೆಟ್ಟಿ ಬಾವಿಯ ಸಮೀಪ ಶ್ರೀವರ ಸಿದ್ಧಿವಿನಾಯಕ ಸ್ವಾಮಿ ದೇವಾಲಯ ಟ್ರಸ್ಟ್ ಹಾಗೂ ಕನ್ನಡ ಅಭಿಮಾನಿ ಬಳಗದ ಪ್ರತಿಷ್ಠಾಪನೆ ಮಾಡಿದ್ದ ಗಣೋಶೋತ್ಸವ ಕಾರ್ಯಕ್ರಮದಲ್ಲಿ ಶ್ರೀ ವಿನಾಯಕನಿಗೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದರು.ಶಾಸಕ ಕೆ.ವೈ.ನಂಜೇಗೌಡ ಅವರನ್ನು ೨ನೇ ಬಾರಿಗೆ ಕಡಿಮೆ ಮತಗಳ ಅಂತರದಿಂದ ಗೆಲ್ಲಿಸಿದ್ದೀರಿ. ತಾವು ಸಹ ಮೊದಲ ಬಾರಿ ಕೇವಲ ೫೬೫ ಮತಗಳಿಂದ ಗೆದ್ದಿದ್ದೆ. ಈಗ ೧.೮೩ ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದೇನೆ ಎಂದ ಡಿಕೆಶಿ ಅವರು ಆನನ್ಯ ಸೇವೆ ಮಾಡಿದರೆ ಜನ ನಮ್ಮನ್ನು ಉಳಿಸಿಕೊಳ್ಳುತ್ತಾರೆ. ದೇವರು ವರವನ್ನು ಕೊಡುವುದಿಲ್ಲ. ಶಾಪವನ್ನು ಕೊಡುವುದಿಲ್ಲ. ಅವಕಾಶ ಮಾತ್ರ ಕೊಡುತ್ತಾನೆ ಎಂದರು. ಈ ಸಂದರ್ಭದಲ್ಲಿ ಶಾಸಕ ಕೆ.ವೈ.ನಂಜೇಗೌಡ, ಮಾಜಿ ಶಾಸಕ ಎ.ನಾಗರಾಜ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಲಕ್ಷಿನಾರಾಯಣ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಲಿಂಗಾಪುರ ಕಿಟ್ಟಣ್ಣ, ರಾಮಮೂರ್ತಿ, ಮಾಜಿ ಅಧ್ಯಕ್ಷರಾದ ವಿಜಯನರಸಿಂಹ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಶ್ರೀನಿವಾಸ್, ಕೋಮುಲ್ ನಿರ್ದೇಶಕ ಶ್ರೀನಿವಾಸ್, ಕ್ಷೇತ್ರನಹಳ್ಳಿ ವೆಂಕಟೇಶ್‌ಗೌಡ, ಪುರಸಭಾಧ್ಯಕ್ಷ ವಿಜಯಲಕ್ಷ್ಮಿ ಮತ್ತಿತರರು ಹಾಜರಿದ್ದರು.