ಸಾರಾಂಶ
ಕನಕಪುರ: ರೈತ ನಾಯಕ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಶ್ರಮಿಕರ ಬದುಕು ಕಟ್ಟಲು ತಮ್ಮ ಜೀವನದುದ್ದಕ್ಕೂ ಹೋರಾಡಿದ ಧೀಮಂತ ನಾಯಕ ಎಂದು ರೈತ ಸಂಘದ ರಾಜ್ಯ ಸಂಚಾಲಕ ಚೀಲೂರು ಮುನಿರಾಜು ತಿಳಿಸಿದರು.
ಕನಕಪುರ: ರೈತ ನಾಯಕ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಶ್ರಮಿಕರ ಬದುಕು ಕಟ್ಟಲು ತಮ್ಮ ಜೀವನದುದ್ದಕ್ಕೂ ಹೋರಾಡಿದ ಧೀಮಂತ ನಾಯಕ ಎಂದು ರೈತ ಸಂಘದ ರಾಜ್ಯ ಸಂಚಾಲಕ ಚೀಲೂರು ಮುನಿರಾಜು ತಿಳಿಸಿದರು.
ತಾಲೂಕಿನ ಅರಳಾಳು ಗ್ರಾಮದ ಕುವೆಂಪು ಬಡಾವಣೆಯಲ್ಲಿ ಹಮ್ಮಿಕೊಂಡಿದ್ದ ಎಂ.ಡಿ.ನಂಜುಂಡಸ್ವಾಮಿ 21ನೇ ನೆನಪಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎರಡು ದಶಕಗಳ ನಂತರವೂ ಪ್ರೊ.ಎಂ.ಡಿ.ನಂಜುಂಡಸ್ವಾಮಿ ವಿಚಾರಗಳು ಪ್ರತಿದಿನ ರಾಜ್ಯದ ಯಾವುದಾದರೂ ಒಂದು ಮೂಲೆಯಲ್ಲಿ ಅನುರಣಿಸುತ್ತಲೇ ಇರುತ್ತದೆ. ಸಾವಿರ ಆನೆಗಳ ಬಲದಂತೆ ಇದ್ದ ನಂಜುಂಡಸ್ವಾಮಿ, ರೈತರು, ಮಹಿಳೆಯರು, ಕಾರ್ಮಿಕರ, ಶೋಷಿತ ಮತ್ತು ದುಡಿಯುವ ವರ್ಗದ ಬದುಕು ಕಟ್ಟಲು ಹೋರಾಡಿದ ಮಹಾ ಚೇತನ ಎಂದು ತಿಳಿಸಿದರು.ರಾಜ್ಯ ಉಪಾಧ್ಯಕ್ಷ ಕೆ.ಮಲ್ಲಯ್ಯ ಮಾತನಾಡಿ, ಪ್ರೊ.ನಂಜುಂಡಸ್ವಾಮಿ ತಮ್ಮ ಜೀವನದುದ್ದಕ್ಕೂ ರೈತರ ಏಳಿಗೆಗಾಗಿ ದುಡಿದ ಮಹಾನಾಯಕ. ಅವರು ಕಂಡ ಕನಸು ನನಸಾಗಬೇಕಾದರೆ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸಂಘಟಿತರಾಗಿ ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಜಯ ಕರ್ನಾಟಕ ಜನಪರ ವೇದಿಕೆ ಕುಮಾರಸ್ವಾಮಿ, ಸಾಹಿತಿ ಕೂ.ಗಿ. ಗಿರಿಯಪ್ಪ, ತಿಮ್ಮೇಗೌಡ, ಕೃಷ್ಣಯ್ಯ, ರೈತ ಸಂಘದ ತಾಲೂಕು ಅಧ್ಯಕ್ಷ ಕುಮಾರ್, ರೇಷ್ಮೆ ಉತ್ಪಾದಕರ ಕಂಪನಿ ರಾಮಕೃಷ್ಣ, ಶಿವಲಿಂಗ, ರವಿ, ಮರಿಯಪ್ಪ, ಕುಮಾರ್, ರಂಗಣ್ಣ, ಸ್ವಾಮಿನಾಥ್, ಪ್ರಭಾಕರ್, ಚೆನ್ನೇಗೌಡ ಸೇರಿದಂತೆ ರೈತ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.ಕೆ ಕೆ ಪಿ ಸುದ್ದಿ 02:
ಕನಕಪುರ ತಾಲೂಕಿನಅರಳಾಳು ಗ್ರಾಮದಲ್ಲಿ ಏರ್ಪಡಿಸಿದ್ದ ಪ್ರೊ.ನಂಜುಂಡಸ್ವಾಮಿ ನೆನಪಿನ ಕಾರ್ಯಕ್ರಮದಲ್ಲಿ ರೈತ ಸಂಘದ ಪದಾಧಿಕಾರಿಗಳು, ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು.