ಸಾರಾಂಶ
ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿ ಗ್ರಾಮದ ನಂಜುಂಡಸ್ವಾಮಿ ಅವರು ಚಾಮುಲ್ ಅಧ್ಯಕ್ಷರಾದ ಬಳಿಕ ಮೈಸೂರು ಉಸ್ತುವಾರಿ ಸಚಿವ ಮಹದೇವಪ್ಪರನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಿ ಹಲವು ಬೇಡಿಕೆಗಳಿಗಾಗಿ ಅನುದಾನ ನೀಡುವಂತೆ ಮನವಿ ಸಲ್ಲಿಸಿದರು. ಶಾಂತರಾಜು, ರಾಜಕುಮಾರ್, ರಾಚಯ್ಯ ಇನ್ನಿತರರಿದ್ದರು.
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಚಾಮುಲ್ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಮಧುವನಹಳ್ಳಿ ನಂಜುಂಡಸ್ವಾಮಿಯವರು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸಮಾಜ ಕಲ್ಯಾಣ ಸಚಿವ ಎಚ್.ಸಿ ಮಹದೇವಪ್ಪರನ್ನು ಸೋಮವಾರ ಭೇಟಿಯಾಗಿ ಅಭಿನಂದನೆ ಸಲ್ಲಿಸಿದರು.ಮೈಸೂರಿನ ಜಲದರ್ಶಿನಿಯಲ್ಲಿ ಸಚಿವರಿಗೆ ಶಾಲು ಹಾರ ತೊಡಿಸಿ ಪುಷ್ಪಗುಚ್ಛ ನೀಡುವ ಮೂಲಕ ಅಭಿನಂದಿಸಿದರು. ಬಳಿಕ ಸರ್ಕಾರಕ್ಕೆ ಮನವಿ ಸಲ್ಲಿಸಿರುವ ₹83 ಕೋಟಿ ಅನುದಾನ ಪೈಕಿ ಈಗಾಗಲೇ ₹31 ಕೋಟಿ ಅನುದಾನ ನೀಡಲಾಗಿದೆ. ಉಳಿಕೆ 52 ಕೋಟಿ ಅನುದಾನವನ್ನು ಸರ್ಕಾರದಿಂದ ಬಿಡುಗಡೆ ಮಾಡಿಸುವಂತೆ ಚಾಮುಲ್ ಅಧ್ಯಕ್ಷರು ಮನವಿ ಮಾಡಿದರು. ಐಸ್ ಕ್ರೀಂ ಪ್ಲಾಂಟ್ ಹಾಗೂ ಮೈಸೂರು ಪಾಕ್ ಘಟಕ ಸ್ಥಾಪನೆಗೆ ಚಾಮುಲ್ ಅಭಿವೃದ್ಧಿಗಾಗಿ ಹಣ ಬಿಡುಗಡೆಗೊಳಿಸುವಂತೆ ಬೇಡಿಕೆ ಸಲ್ಲಿಸಿದರು.
ಈ ವೇಳೆ ಮನವಿ ಸ್ವೀಕರಿಸಿ ಮಾತನಾಡಿದ ಸಚಿವರು, ಚಾಮುಲ್ ಅಭಿವೃದ್ಧಿಗೆ ಆದಷ್ಟು ಬೇಗ ಅನುದಾನ ಬಿಡುಗಡೆಗೆ ಕ್ರಮವಹಿಸುವುದಾಗಿ ಭರವಸೆ ನೀಡಿದರು. ಈ ಸಂಧರ್ಭದಲ್ಲಿ ಚಾಮುಲ್ ಎಂಡಿ ರಾಜಕುಮಾರ್, ಕಾಂಗ್ರೆಸ್ ನಾಯಕ ಕಿನಕಹಳ್ಳಿ ರಾಚಯ್ಯ, ಮಾಂಬಳ್ಳಿ ಮೋಹನ್, ನಗರಸಭೆ ಮಾಜಿ ಸದಸ್ಯ, ಯುವ ನಾಯಕ ಮುಡಿಗುಂಡ ಶಾಂತರಾಜು, ನಾಗರಾಜು ಇನ್ನಿತರರಿದ್ದರು.