ಕೊಡವ ಸಮಾಜದಲ್ಲಿ ಹುತ್ತರಿ ಹಬ್ಬ ಶ್ರದ್ಧಾ ಭಕ್ತಿ ಹಾಗೂ ಸಾಂಪ್ರದಾಯಿಕವಾಗಿ ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಕನ್ನಡಪ್ರಭ ವಾರ್ತೆ ನಾಪೋಕ್ಲು
ಸ್ಥಳೀಯ ಕೊಡವ ಸಮಾಜದಲ್ಲಿ ಹುತ್ತರಿ ಹಬ್ಬವನ್ನು ಶ್ರದ್ಧಾ ಭಕ್ತಿ ಹಾಗೂ ಸಾಂಪ್ರದಾಯಿಕವಾಗಿ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಕೊಡವ ಸಮಾಜದಲ್ಲಿ ಮೊದಲು ನೆರೆಕಟ್ಟಿದ ಬಳಿಕ ಪ್ರಾರ್ಥನೆ ಮಾಡಿ ಸಮಾಜ ಸಮೀಪದ ಗದ್ದೆಗೆ ತೆರಳಲಾಯಿತು. ಬೊಟ್ಟೋಳಂಡ ರಾಜ ಭೋಜಪ್ಪ ಅವರು ಕಂಗಂಡ ಜಾಲಿ ಪೂವಪ್ಪ ಅವರ ಗದ್ದೆಯಲ್ಲಿ ಶಾಸ್ತ್ರೋಕ್ತವಾಗಿ ಭತ್ತದ ಖದಿರನ್ನು ತೆಗೆದು ಹುತ್ತರಿ ಕುತ್ತಿಯಲ್ಲಿ ಇರಿಸಿ ಸುಡುಮದ್ದುಗಳ ಮೊರೆತ ಹಾಗೂ ಪೊಲಿ ಪೊಳಿಯೇ ಬಾ ಉದ್ಘೋಷಗಳೊಂದಿಗೆ ಸಮಾಜಕ್ಕೆ ಹಿಂತುರುಗಲಾಯಿತು. ಅನಂತರ ಸಾಂಪ್ರದಾಯದಂತೆ ಆಚರಣೆ ಮಾಡಿ ಆಗಮಿಸಿದವರಿಗೆ ಕದಿರು ವಿತರಿಸಲಾಯಿತು. ನಂತರ ಎಲ್ಲರೂ ಉಟೋಪಚಾರಗಳನ್ನು ಮುಗಿಸಿದ ಬಳಿಕ ಕದಿರಿ ನೊಂದಿಗೆ ತಮ್ಮ ತಮ್ಮ ಮನೆಗೆ ತೆರಳಿ ಹಬ್ಬವನ್ನು ಆಚರಿಸಿದರು. ಈ ಸಂದರ್ಭ ಎಂ ಎಂ ನರೇಂದ್ರ ಸ್ವಾಮಿ , ಬೊಟ್ಟೋಳಂಡ ಗಣೇಶ , ಚೇತನ್ , ಮನವಟ್ಟಿರ ಡಿಕ್ಕ , ಕುಚ್ಚೆಟಿರ ಸುಧಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.