ನಾಪೋಕ್ಲು ಶ್ರೀ ಪೊನ್ನುಮುತ್ತಪ್ಪ ದೇವರ ವಾರ್ಷಿಕ ಉತ್ಸವ

| Published : Apr 06 2024, 12:50 AM IST

ನಾಪೋಕ್ಲು ಶ್ರೀ ಪೊನ್ನುಮುತ್ತಪ್ಪ ದೇವರ ವಾರ್ಷಿಕ ಉತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ನಾಪೋಕ್ಲಿನ ಶ್ರೀ ಪೊನ್ನುಮುತ್ತಪ್ಪ ದೇವಾಲಯದ ವಾರ್ಷಿಕ ಉತ್ಸವ ವಿವಿಧ ಕಾರ್ಯಕ್ರಮಗಳೊಂದಿಗೆ ಶುಕ್ರವಾರ ಸಂಪನ್ನಗೊಂಡಿತು. ಬುಧವಾರ ಬೆಳಗ್ಗೆ ಗಣಪತಿ ಹೋಮದೊಂದಿಗೆ ಉತ್ಸವ ಆರಂಭಗೊಂಡು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಇಲ್ಲಿನ ಶ್ರೀ ಪೊನ್ನುಮುತ್ತಪ್ಪ ದೇವಾಲಯದ ವಾರ್ಷಿಕ ಉತ್ಸವ ವಿವಿಧ ಕಾರ್ಯಕ್ರಮಗಳೊಂದಿಗೆ ಶುಕ್ರವಾರ ಸಂಪನ್ನಗೊಂಡಿತು. ಭಕ್ತರು ಅಧಿಕ ಸಂಖ್ಯೆಯಲ್ಲಿ ಹಬ್ಬದ ಸಂಭ್ರಮದಲ್ಲಿ ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡರು.

ಬುಧವಾರ ಬೆಳಗ್ಗೆ ಗಣಪತಿ ಹೋಮದೊಂದಿಗೆ ಉತ್ಸವ ಆರಂಭಗೊಂಡಿದ್ದು, ಗುರುವಾರ ಸಂಜೆ ಮುತ್ತಪ್ಪ ದೇವರ ಕಲಶ ನಡೆಯಿತು. ಪವಿತ್ರ ಕಾವೇರಿ ನದಿಯಲ್ಲಿ ಸ್ನಾನದ ನಂತರ ಮಹಿಳೆಯರಿಂದ ತಳಿಯಕ್ಕಿ ಬೊಳಕ್ ಹಾಗೂ ಕೇರಳದ ಪ್ರಖ್ಯಾತ ಚಂಡೆಯೊoದಿಗೆ ಪಟ್ಟಣದ ಮುಖ್ಯಬೀದಿಯಲ್ಲಿ ಕಲಶ ಮೆರವಣಿಗೆ ನಡೆಯಿತು. ಈ ಸಂದರ್ಭ ಭಕ್ತಾದಿಗಳಿಂದ ಹಣ್ಣು ಕಾಯಿ, ಈಡು ಕಾಯಿ ಸೇವೆ ಹಾಗೂ ಅತ್ಯಾಕರ್ಷಕ ಪಟಾಕಿಯ ಚಿತ್ತಾರ ಕಂಡುಬಂತು.

ರಾತ್ರಿ ದೇವಾಲಯದಲ್ಲಿ ಭಕ್ತಾದಿಗಳಿಗೆ ಅನ್ನದಾನ ನೆರವೇರಿದ ಬಳಿಕ ಮುತ್ತಪ್ಪ ದೇವರ ಹಾಗೂ ಕುಟ್ಟಿಚಾತ ಬೊಳ್ಳಾಟಂ ಜರುಗಿತು. ಶುಕ್ರವಾರ ಬೆಳಗ್ಗೆ ಗುಳಿಗ, ತಿರುವಪ್ಪ ಹಾಗೂ ಮುತ್ತಪ್ಪ, ಕುಟ್ಟಿಚಾತ ತೆರೆಗಳು ನಡೆದವು.

ಭಕ್ತರು ತಮ್ಮ ಇಷ್ಟಾರ್ಥ ಸಿದ್ದಿಗೆ ಹರಕೆ ಒಪ್ಪಿಸಿ ಪ್ರಸಾದ ಸ್ವೀಕರಿಸುವುದರೊಂದಿಗೆ ಉತ್ಸವ ಸಂಪನ್ನಗೊಂಡಿತು. ಕಾರ್ಯಕ್ರಮದಲ್ಲಿ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಎ.ಕೆ. ಚಂದ್ರನ್, ಉಪಾಧ್ಯಕ್ಷ ಸುಕುಮಾರ, ಕಾರ್ಯದರ್ಶಿ ರಾಜೀವನ್, ಉಪ ಕಾರ್ಯದರ್ಶಿ ಎಂ.ಕೆ.ತಂಗ, ಖಜಾಂಚಿ ವಿನಿಲ್ ಪಪ್ಪು, ನಿರ್ದೇಶಕರು ಸೇರಿದಂತೆ ನೂರಾರು ಭಕ್ತರು ಪಾಲ್ಗೊಂಡಿದ್ದರು.

13,14ರಂದು ಶ್ರೀ ಕರಿಚಾಮುಂಡಿ ದೈವಸ್ಥಾನ ವಾರ್ಷಿಕೋತ್ಸವ:

ಕಕ್ಕುಂದಕಾಡು ಶ್ರೀ ಕರಿಚಾಮುಂಡಿ ದೈವಸ್ಥಾನದ ವಾರ್ಷಿಕೋತ್ಸವ 13 ಮತ್ತ 14ರಂದು ನಡೆಯಲಿದೆ. 13ರಂದು ರಾತ್ರಿ 8.30ಕ್ಕೆ ಭಂಡಾರ ಮನೆಯಿಂದ ಭಂಡಾರ ಹೊರಡುವುದು, ನಂತರ ತೋತ, ಚನ್ನಾಲೆ ಮೂರ್ತಿ, ತಮ್ಮಚ್ಚ, ಪೊಟ್ಟುಗುಳಿಗ, ಕೊರತಿ, ಅಂಗಾರೆ ದೈವಗಳು, 14ರಂದು ಬೆಳಗ್ಗೆ 10ಕ್ಕೆ ಗುಳಿಗ ಕೋಲಗಳು ಜರುಗಲಿವೆ. ಪ್ರಸಾದ ವಿತರಣೆ ಬಳಿಕ ಅಪರಾಹ್ನ 2ಕ್ಕೆ ಶ್ರೀ ಚಾಮುಂಡಿ ದೈವದ ಕೋಲ ನಡೆಯಲಿದೆ ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.