ಸಾರಾಂಶ
ನಾಪೋಕ್ಲು ನಾಡು ಗ್ರಾಹಕರ ಸಹಕಾರ ಸಂಘ 2024- 25ರ ಸಾಲಿನಲ್ಲಿ 93, 600 ರು. ಲಾಭ ಗಳಿಸಿದೆ ಎಂದು ಹೇಳಿದರು.
ಕನ್ನಡಪ್ರಭ ವಾರ್ತೆ ನಾಪೋಕ್ಲು
ನಾಪೋಕ್ಲು ನಾಡು ಗ್ರಾಹಕರ ಸಹಕಾರ ಸಂಘವು 2024- 25 ರ ಸಾಲಿನಲ್ಲಿ 93, 600 ರು. ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಪಟ್ರಪಂಡ ಮೋಹನ್ ಮುದ್ದಪ್ಪ ಹೇಳಿದರು.ಇಲ್ಲಿನ ಮಹಿಳಾ ಸಮಾಜದ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ ಸಹಕಾರ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿ ಸಂಘದಲ್ಲಿ 639 ಮಂದಿ ಸದಸ್ಯರಿದ್ದು ದುಡಿಯುವ ಬಂಡವಾಳ 65 ಲಕ್ಷ ರು. ಗಳಾಗಿವೆ ಎಂದರು.
ಈ ಸಂದರ್ಭ ಸಭೆಯಲ್ಲಿ ಸಂಘದ ಶ್ರೇಯೋಭಿವೃದ್ಧಿಯ ಬಗ್ಗೆ ಚರ್ಚಿಸಿ ಬಳಿಕ ಎಲ್ಲರ ಒಪ್ಪಿಗೆ ಪಡೆದು ಅಂತಿಮ ನಿರ್ಧಾರವನ್ನು ಕೈಗೊಳ್ಳಲಾಯಿತು. ಕಾರ್ಯಕ್ರಮದಲ್ಲಿ 10ನೇ ತರಗತಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹ ಧನವನ್ನು ವಿತರಿಸಲಾಯಿತು.ಈ ಸಂದರ್ಭ ಉಪಾಧ್ಯಕ್ಷೆ ನಾಟೋಳ೦ಡ ಕಸ್ತೂರಿ, ನಿರ್ದೇಶಕರಾದ ಕುಲ್ಲೇಟಿರ ಅರುಣ್ ಬೇಬ, ನಾಯಕಂಡ ಮುತ್ತಪ್ಪ, ಬೊಟ್ಟೋಳಂಡ ಕುಟ್ಟಪ್ಪ, ಪಾಡಿಯಮ್ಮಂಡ ಮನು ಮಹೇಶ್, ಕೇಟೋಳಿರ ಮುತ್ತಮ್ಮ, ಹೆಚ್.ಎ ಬೊಳ್ಳು, ಭೋಟ್ಟೋಳಂಡ ಎ .ಪೊನ್ನಯ್ಯ, ಕೆಲೇಟಿರ ಟಿ. ಗಣಪತಿ ಉಪಸ್ಥಿತರಿದ್ದರು. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕಲ್ಲೇಂಗಡ ತಮ್ಮಿ ತಿಮ್ಮಯ್ಯ, ಸಿಬ್ಬಂದಿ ಮುಕ್ಕಾಟಿರ ರಾಜಪ್ಪ, ತಟ್ಟ೦ಡ ಮುತ್ತಪ್ಪ ಹಾಜರಿದ್ದರು.
ಬೊಪ್ಪಂಡ ಬೊಳ್ಳಮ್ಮ ನಾಣಯ್ಯ ಪ್ರಾರ್ಥಿಸಿದ ಸಭೆಯಲ್ಲಿ ಪಟ್ರಪಂಡ ಮೋಹನ್ ಮುದ್ದಪ್ಪ ಸ್ವಾಗತಿಸಿದರು. ಕಲ್ಲೇಂಗಡ ತಿಮ್ಮಯ್ಯ ವಾರ್ಷಿಕ ವರದಿ ವಾಚಿಸಿ ಕುಲ್ಲೇಟಿರ ಅರುಣ್ ಬೇಬ ವಂದಿಸಿದರು.