ನಾಪೋಕ್ಲು: ವಾತ್ಸಲ್ಯ ಮನೆ ಹಸ್ತಾಂತರ ಕಾರ್ಯಕ್ರಮ

| Published : Apr 05 2025, 12:49 AM IST

ಸಾರಾಂಶ

ವಾತ್ಸಲ್ಯ ಕಾರ್ಯಕ್ರಮ ರೂಪಿಸಿದ ಮಾತೃಶ್ರೀ ಹೇಮಾವತಿ ಅಮ್ಮನವರ ಜನ್ಮದಿನದಂದು ವಾತ್ಸಲ್ಯ ಮನೆ ಹಸ್ತಾಂತರ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಜಿಲ್ಲೆಯ ನಿರ್ದೇಶಕಿ ಲೀಲಾವತಿ ಮತ್ತು ಒಕ್ಕೂಟ ಅಧ್ಯಕ್ಷೆ ತಾರಾ ಕಾರ್ಯಕ್ರಮದ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಸಂಪಾಜೆ ವಲಯದ ಚೆಂಬು ಗ್ರಾಮದಲ್ಲಿ ವಾತ್ಸಲ್ಯ ಮನೆ ಹಸ್ತಾಂತರ ಕಾರ್ಯಕ್ರಮ ನಡೆಯಿತು.ವಾತ್ಸಲ್ಯ ಕಾರ್ಯಕ್ರಮ ರೂಪಿಸಿದ ಮಾತೃಶ್ರೀ ಹೇಮಾವತಿ ಅಮ್ಮನವರ ಜನ್ಮದಿನದಂದು ವಾತ್ಸಲ್ಯ ಮನೆ ಹಸ್ತಾಂತರ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಜಿಲ್ಲೆಯ ನಿರ್ದೇಶಕಿ ಲೀಲಾವತಿ ಮತ್ತು ಒಕ್ಕೂಟ ಅಧ್ಯಕ್ಷೆ ತಾರಾ ಕಾರ್ಯಕ್ರಮದ ಉದ್ಘಾಟಿಸಿದರು.ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಮಂಜುನಾಥ ಸ್ವಾಮಿಗೆ ದೀಪ ಬೆಳಗಿ ಹಾಲುಕ್ಕಿಸಿದರು. ವಾತ್ಸಲ್ಯ ಫಲಾನುಭವಿಯಾದ ನೀಲಮ್ಮ ಅವರಿಗೆ ನಿರ್ದೇಶಕಿ ಲೀಲಾವತಿ ಮನೆ ಹಸ್ತಾಂತರ ಮಾಡಿ, ಮಾಸಾಶನ, ವಾತ್ಸಲ್ಯ ಕಾರ್ಯಕ್ರಮ, ಮಹಿಳೆಯರ ಸಬಲೀಕರಣದ ಬಗ್ಗೆ ಮಾಹಿತಿ ನೀಡಿದರು.ಕಾರ್ಯಕ್ರಮದಲ್ಲಿ ತಾಲೂಕಿನ ಯೋಜನಾಧಿಕಾರಿಗಳು, ಒಕ್ಕೂಟದ ಪದಾಧಿಕಾರಿಗಳು ಸಂಘದ ಸದಸ್ಯರು ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು. ವಲಯದ ಮೇಲ್ವಿಚಾರಕ ಸಂತೋಷ್ ಸ್ವಾಗತಿಸಿದರು. ಗ್ರಾಮಸ್ಥ ರಮೇಶ್ ವಂದಿಸಿದರು.