ಮಾರ್ಚ್ 27ರಂದು ನರಗುಂದ ಲಯನ್ಸ್ ಕ್ಲಬ್ ಸುವರ್ಣ ಮಹೋತ್ಸವ-ಉಮೇಶಗೌಡ

| Published : Mar 25 2025, 12:47 AM IST

ಮಾರ್ಚ್ 27ರಂದು ನರಗುಂದ ಲಯನ್ಸ್ ಕ್ಲಬ್ ಸುವರ್ಣ ಮಹೋತ್ಸವ-ಉಮೇಶಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ನರಗುಂದದ ಲಯನ್ಸ್ ಕ್ಲಬ್ ಸುವರ್ಣ ಮಹೋತ್ಸವ ಸಂಭ್ರಮಾಚರಣೆ ಕಾರ್ಯಕ್ರಮ ಪಟ್ಟಣದ ಬಸವೇಶ್ವರ ಸಮುದಾಯ ಭವನದಲ್ಲಿ ಮಾರ್ಚ್ 27ರಂದು ಸಂಜೆ 5ಕ್ಕೆ ನಡೆಯಲಿದೆ. "ಸಾರ್ಥಕ " ಎನ್ನುವ ಶೀರ್ಷಿಕೆಯಡಿ ಈ ಕಾರ್ಯಕ್ರಮ ನಡೆಯಲಿದ್ದು, ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ಉಮೇಶಗೌಡ ಪಾಟೀಲ ಹೇಳಿದರು.

ಗದಗ: ನರಗುಂದದ ಲಯನ್ಸ್ ಕ್ಲಬ್ ಸುವರ್ಣ ಮಹೋತ್ಸವ ಸಂಭ್ರಮಾಚರಣೆ ಕಾರ್ಯಕ್ರಮ ಪಟ್ಟಣದ ಬಸವೇಶ್ವರ ಸಮುದಾಯ ಭವನದಲ್ಲಿ ಮಾರ್ಚ್ 27ರಂದು ಸಂಜೆ 5ಕ್ಕೆ ನಡೆಯಲಿದೆ. "ಸಾರ್ಥಕ " ಎನ್ನುವ ಶೀರ್ಷಿಕೆಯಡಿ ಈ ಕಾರ್ಯಕ್ರಮ ನಡೆಯಲಿದ್ದು, ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ಉಮೇಶಗೌಡ ಪಾಟೀಲ ಹೇಳಿದರು. ಅವರು ಸೋಮವಾರ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಯನ್ಸ್ ಕ್ಲಬ್ ಜಗತ್ತಿನಾದ್ಯಂತ 200 ರಾಷ್ಟ್ರಗಳಲ್ಲಿ ತನ್ನ ಸಂಸ್ಥೆ ಹೊಂದಿದ್ದು, 14 ಲಕ್ಷಕ್ಕೂ ಅಧಿಕ ಸದಸ್ಯರನ್ನು ಹೊಂದಿದೆ ಎಂದರು. ಭಾರತದಲ್ಲಿ 1956ರಲ್ಲಿ ಪ್ರಥಮ ಬಾರಿಗೆ ಮುಂಬೈನಲ್ಲಿ ಆರಂಭವಾಗಿ, 70 ವರ್ಷದಿಂದ ನಿರಂತರ ಸೇವೆ ಮಾಡುತ್ತಿದೆ. ದೇಶದಲ್ಲಿ 6500 ಸಂಸ್ಥೆಯನ್ನು ಹೊಂದಿದೆ. ಎಪ್ರಿಲ್ 9, 1976ರಲ್ಲಿ ನರಗುಂದದಲ್ಲಿ 29 ಸದಸ್ಯರನ್ನು ಒಳಗೊಂಡ ಲಯನ್ಸ್‌ ಕ್ಲಬ್‌ ಸಂಸ್ಥೆ ಆರಂಭವಾಯಿತು. ಸ್ಥಾನಿಕವಾಗಿ ಹಾಗೂ ಸ್ಥಳಿಯವಾಗಿ ಬೇಡಿಕೆಗಳಿಗೆ ತಕ್ಕಂತೆ ಸೇವಾ ಕಾರ್ಯ ಮಾಡುತ್ತದೆ ಎಂದರು.

ಪರಿಸರ ಸಂರಕ್ಷಣೆ, ಹಸಿವು ಮುಕ್ತ ಸಮಾಜ, ಅಂಧತ್ವ ನಿವಾರಣೆ, ಕ್ಯಾನ್ಸರ್ ತಪಾಸಣೆ, ಮಹಿಳೆಯರ ಆರೋಗ್ಯ ತಪಾಸಣೆ, ಶೈಕ್ಷಣಿಕ ಕಾರ್ಯಕ್ರಮ ಸೇರಿದಂತೆ ಹಲವಾರು ಸೇವಾ ಕಾರ್ಯಗಳನ್ನು ಮಾಡಿಕೊಂಡು ಬರಲಾಗಿದೆ. ನರಗುಂದದಲ್ಲಿ ಲಯನ್ಸ್ ಆಂಗ್ಲ ಮಾಧ್ಯಮ, ಕನ್ನಡ, ಸ್ವತಂತ್ರ ಪಿಯು ಕಾಲೇಜು ಸ್ಥಾಪನೆ ಮಾಡಿದೆ ಎಂದು ಹೇಳಿದರು.

ಕ್ರೀಡೆಗೆ ಪ್ರೋತ್ಸಾಹ ನೀಡಲು ಗ್ರಾಮೀಣ ಪ್ರತಿಭೆಗಳನ್ನು ಬೆಳೆಸುವ ಉದ್ದೇಶದಿಂದ ರಾಷ್ಟ್ರ ಮಟ್ಟದ ಕಬಡ್ಡಿ ಪಂದ್ಯಾವಳಿ, ತಿರಂಗಾ ಯಾತ್ರೆ, ವಿದ್ಯಾರ್ಥಿಗಳಿಗೆ ಪರೀಕ್ಷಾ ಸಲಹೆಯಂತಹ ಮಹತ್ವದ ಕಾರ್ಯಕ್ರಮಗಳನ್ನು ನರಗುಂದ ಲಯನ್ಸ್ ಕ್ಲಬ್ ವತಿಯಿಂದ ಮಾಡಲಾಗಿದೆ. 50 ವರ್ಷಗಳಲ್ಲಿ ವಿಶೇಷ ಸೇವೆ ಮಾಡುವ ಮೂಲಕ ನರಗುಂದ ಲಯನ್ಸ್ ಕ್ಲಬ್ ವಿಶೇಷ ಮೈಲುಗಲ್ಲು ತಲುಪಿದೆ. ಸಾಮಾಜಿಕ ಕಾರ್ಯಕ್ರಮಗಳನ್ನೇ ಮುಖ್ಯ ಧ್ಯೇಯವಾಗಿಸಿಕೊಂಡಿರುವ ನಮ್ಮ ಸಂಸ್ಥೆಯಿಂದ ಮುಂದಿನ ದಿನಮಾನಗಳಲ್ಲಿ ಬೇಡಿಕೆಗೆ ತಕ್ಕಂತೆ ಇನ್ನೂ ಹೆಚ್ಚಿನ ಕಾರ್ಯಕ್ರಮಗಳನ್ನು ಮಾಡುತ್ತೇವೆ ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಸಿ.ಸಿ. ಪಾಟೀಲ, ದಿಕ್ಸೂಚಿ ಭಾಷಣಕಾರರಾಗಿ, ಮಾಜಿ ಸಂಸದ ಬಸವರಾಜ ಪಾಟೀಲ ಸೇಡಂ, ಮನೋಜ ಮಾನೇಕರ, ಆನಂದ ಪೋತ್ನಿಸ್, ಎನ್.ಎಂ. ಬಿರಾದಾರ, ಡಾ. ಶ್ರೀಧರ್ ಕುರಡಗಿ, ಎಂ. ವಿ. ಮೇಟಿ ಸೇರಿದಂತೆ ಅನೇಕ ಗಣ್ಯರು ಆಗಮಿಸಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಎನ್.ಟಿ. ಮೇಟಿ, ಕಮಲೇಶ್ ಸೂಲಿ, ಅಜ್ಜನಗೌಡ ಪಾಟೀಲ, ಸುನಿಲ ಶೆಲ್ಲಿಕೇರಿ, ಪ್ರಕಾಶ ಅಂಗಡಿ ಉಪಸ್ಥಿತರಿದ್ದರು.