ಸಾರಾಂಶ
ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂದು ಘೋಷಣೆಯ ಮೂಲಕ ಸಮಾಜದಲ್ಲಿ ಕ್ರಾಂತಿಗೆ ನಾಂದಿ ಹಾಡಿದವರು ಸಮಾಜ ಸುಧಾರಕ ನಾರಾಯಣ ಗುರುಗಳು.
ಕನ್ನಡಪ್ರಭ ವಾರ್ತೆ ಹರಪನಹಳ್ಳಿ
ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂದು ಘೋಷಣೆಯ ಮೂಲಕ ಸಮಾಜದಲ್ಲಿ ಕ್ರಾಂತಿಗೆ ನಾಂದಿ ಹಾಡಿದವರು ಸಮಾಜ ಸುಧಾರಕ ನಾರಾಯಣ ಗುರುಗಳು ಎಂದು ತಹಶೀಲ್ದಾರ್ ಬಿ.ವಿ. ಗಿರೀಶ್ ಬಾಬು ಹೇಳಿದರು.ಪಟ್ಟಣದ ತಾಲೂಕು ಮಿನಿ ವಿಧಾನಸೌಧದ ಸಭಾಂಗಣದಲ್ಲಿ ಭಾನುವಾರ ನಾರಾಯಣ ಗುರುಗಳ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಯಾವುದೇ ಸಮಾಜ ಮುಂದೆ ಬರಬೇಕಾದರೆ ಶಿಕ್ಷಣ ಪಡೆಯಬೇಕು. ಸಮಾಜದ ಮೇರು ನಟರಾದ ಡಾ. ರಾಜಕುಮಾರ ಸರ್ವರಿಗೂ ಆದರ್ಶರಾಗಿದ್ದಾರೆ. ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಸಾಕಷ್ಟು ಕೆಲಸ ಮಾಡಿದ್ದಾರೆ ಎಂದರು.ಉಪನ್ಯಾಸಕ ಅಣ್ಣಪ್ಪ ನಾರಾಯಣ ಗುರುಗಳ ಜೀವನ ಕುರಿತು ವಿಶೇಷ ಉಪನ್ಯಾಸ ನೀಡಿ, ಹಿಂದುಳಿದ ಸಮಾಜ ಮುನ್ನೆಲೆಗೆ ಬರಬೇಕಾದರೆ ಅದು ವಿದ್ಯೆಯಿಂದ ಮಾತ್ರ ಸಾಧ್ಯ ಎಂಬ ಸಂದೇಶವನ್ನು150 ವರ್ಷಗಳ ಹಿಂದೆ ಬ್ರಹ್ಮರ್ಷಿ ನಾರಾಯಣ ಗುರುಗಳು ನೀಡಿದ್ದಾರೆ. ಬ್ರಹ್ಮಶ್ರೀ ನಾರಾಯಣ ಗುರುಗಳು ಅಂದಿನ ದಿನಗಳಲ್ಲಿ ತುಳಿತಕ್ಕೆ ಒಳಗಾದ ಸಮಾಜದ ಧ್ವನಿಯಾಗಿ ದುಡಿದರು.
ಶೋಷಿತರ ಪರವಾಗಿ ಕಾರ್ಯ ನಿರ್ವಹಿಸುವ ಮೂಲಕ ಸಮಾಜದ ಏಳಿಗೆಗೆ ಶ್ರಮಿಸಿದ್ದರು. ನಾರಾಯಣ ಗುರುಗಳ ಶ್ರಮದ ಫಲವಾಗಿ ಇಂದು ಕೇರಳ ರಾಜ್ಯ ದೇಶಕ್ಕೆ ಮಾದರಿಯಾಗುವ ರೀತಿಯಲ್ಲಿ ಶೈಕ್ಷಣಿಕ ಪ್ರಗತಿ ಸಾಧಿಸಿದೆ. ಗುರುಗಳು ಹೇಳಿದಂತೆ ರಾಜ್ಯದಲ್ಲಿ ಎಲ್ಲರೂ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಲು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವುದು ಅವಶ್ಯಕ ಎಂದರು.ಈಡಿಗ ಸಮಾಜದ ಮುಖಂಡರಾದ ಚಂದ್ರಪ್ಪ ಮಾತನಾಡಿದರು. ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ, ಸಮಾಜದ ಮುಖಂಡರಿಗೂ ಹಾಗೂ ನಿವೃತ್ತಿ ಹೊಂದಿದ ಪ್ರಾಂಶುಪಾಲ ನಾರಾಯಣಸ್ವಾಮಿ ಅವರಿಗೆ ಸನ್ಮಾನಿಸಲಾಯಿತು.
ಈ ವೇಳೆ ಈಡಿಗ ಸಮಾಜದ ಗೌರವಾಧ್ಯಕ್ಷ ಈ.ದೇವದಾಸ್, ತಾಲೂಕು ಅಧ್ಯಕ್ಷ ಜಗದೀಶ್ ಗೌಡ್ರು, ಕಾರ್ಯದರ್ಶಿ ಕಂಚಿಕೇರಿ ವೆಂಕಟೇಶ, ಪದ್ಮಾನಾಭ, ಗುರುಶಾಂತಪ್ಪ, ಎ.ಆನಂದಪ್ಪ, ಸೋಮನಾಥ, ಚಂದ್ರಪ್ಪ, ಚಿದಾನಂದ, ಗಂಗಾದರ, ನಾರಾಯಣಸ್ವಾಮಿ, ಯರ್ರಿಸ್ವಾಮಿ ಎಚ್.ಡಿ., ಶರತ್ ಎಚ್.ಎನ್., ಬಸವರಾಜಪ್ಪ, ಎ.ವಿ. ರಾಜು, ರಮೇಶ್, ಬೀಮೇಶ, ತೆಲಿಗಿ ಈಡಿಗರ ಬಸಣ್ಣ, ವಿಜಯ, ಸುನೀಲ್, ಅಂಜಿನಪ್ಪ, ಪಲ್ಲವಿ, ಅರ್ಚನ, ಫಕ್ಕೀರಮ್ಮ, ಶಶಿಕಲಾ, ನಿವೇದಿತಾ, ಕಲ್ಪನಾ, ರೇಷ್ಮಾ, ಸುಧಾ, ಸಂಗೀತಾ, ಉಷಾ, ಉಮಾ, ಶಿವಮ್ಮ, ಸರೋಜಮ್ಮ, ಮೀನಾಕ್ಷಿ ಸೇರಿದಂತೆ ಆನೇಕರು ಬಾಗವಹಿಸಿದ್ದರು.