ಸಾರಾಂಶ
೭ನೇ ಹೊಸಕೋಟೆಯಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ ಜಯಂತಿ ಕಾರ್ಯಕ್ರಮಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಬ್ರಹ್ಮಶ್ರೀ ನಾರಾಯಣಗುರುಗಳ ಬದಕು ಮತ್ತು ಬೋಧನೆ ಇಂದಿಗೂ ಪ್ರಸ್ತುತ ಎಂದು ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಹೇಳಿದರು.೭ನೇ ಹೊಸಕೋಟೆಯ ಬ್ರಹ್ಮಶ್ರೀ ನಾರಾಯಣಗುರು ಚಾರಿಟೇಬಲ್ ಟ್ರಸ್ಟ್ ಆವರಣದಲ್ಲಿ ಟ್ರಸ್ಟ್, ಎಸ್‌ಎನ್‌ಡಿಪಿ ಶಾಖೆಯ ಅಧ್ಯಕ್ಷರು ಹಾಗೂ ಸರ್ವಸದಸ್ಯರು, ವನಿತಾ ಸಮಿತಿ ಮತ್ತು ಯೂತ್ ಕಮಿಟಿ ಆಶ್ರಯದಲ್ಲಿ ಆಯೋಜಿಸಲಾದ ನಾರಾಯಣಗುರು ಜಯಂತಿ ಕಾರ್ಯ್ರಮದ ಸಮಾರೋಪದಲ್ಲಿ ಮಾತನಾಡಿದರು.
ನಾರಾಯಣಗುರುಗಳ ಹೋರಾಟ ಗುರಿ ಸೇರಿದೆಯೇ ಎಂಬುದರ ಬಗ್ಗೆ ಆತ್ಮಾವಲೋಕನ ಅಗತ್ಯ ಎಂದು ಅವರು, ರಾಜಕಾರಣಿಗಳು ತಮ್ಮ ಕಾರ್ಯಸಾಧನೆಗೆ ಜನರನ್ನು ಒಡೆದು ಆಳುವನೀತಿ ಅನುಸರಿಸುತ್ತಾರೆ. ಅದಕ್ಕೆ ಬಲಿಯಾಗದಿರಿ ಎಲ್ಲರೂ ಒಗ್ಗಟಾಗಿ ಹೋಗೋಣವೆಂದು ಅವರು ಕರೆ ನೀಡಿದರು. ಅವರು ಟ್ರಸ್ಟ್‌ಗೆ ಶಾಸಕರ ನಿಧಿಯಿಂದ 10 ಲಕ್ಷ ನೀಡುವುದಾಗಿ ತಿಳಿಸಿದರು.ಮಾಜಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಮಾತನಾಡಿ, ೧೭೧ ವರ್ಷಗಳ ಹಿಂದೆಯೇ ನಾವೆಲ್ಲರೂ ಒಂದೇ ಎಂದು ನಾರಾಯಣಗುರುಗಳು ಹೇಳಿದ್ದರು ಎಂದು ಬಣ್ಣಿಸಿದರು. ೭ನೇ ಹೊಸಕೋಟೆ ವ್ಯಾಪ್ತಿಯಲ್ಲಿ ಒಂದೂವರೆ ಕೋಟಿ ರು. ವೆಚ್ಚದಲ್ಲಿ ಅನಾಥ ಆಶ್ರಮ ನಿರ್ಮಿಸುತ್ತಿದ್ದು, ಆಶ್ರಯ ಕೋರಿ ಬರುವ ಎಲ್ಲರಿಗೂ ಅವಕಾಶ ಕಲ್ಲಿಸುವುದಾಗಿ ಅವರು ಹೇಳಿದರು. ಅವರು ಟ್ರಸ್ಟ್‌ಗೆವಿಧಾನ ಪರಿಷತ್ ಸದಸ್ಯರ ನಿಧಿಯಿಂದ 5 ಲಕ್ಷ ರು. ನೀಡುವ ಭರವಸೆ ನೀಡಿದರು.ಕಾರ್ಯಕ್ರಮದಲ್ಲಿ ಕೇರಳದ ಶ್ರೀ ಪ್ರೇಮಾನಂದ ಸ್ವಾಮೀಜಿ ಆರ್ಶಿವಚನ ನೀಡಿದರು.
ಸಮಾಜ ಸೇವಕ ಎನ್.ವಿ.ಪದ್ಮನಾಭ ಮಾತನಾಡಿದರು. ಮತ್ತು ಚಾರಿಟೆಬಲ್ ಟ್ರಸ್ಟ್ಗೆ ರೂ ೫೦,೦೦೦ ದೇಣಿಗೆಯನ್ನು ಘೋಷಿಸಿದರು. ಕೊಡಗು ಕಸಾಪ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಶಾಖೆಯು ಬೆಳೆದು ಬಂದ ಇತಿಹಾಸವನ್ನು ಮೆಲುಕುಹಾಕಿದರು.ವೇದಿಕೆಯಲ್ಲಿ ೭ನೇ ಹೊಸಕೋಟೆಯ ನೂರುಲ್ ಮಸೀದಿ ಖತೀಬ್ ಆಶ್ರಫ್ ಸಖಾಫಿ, ೭ನೇ ಹೊಸಕೋಟೆ ಗ್ರಾ.ಪಂ. ಅಧ್ಯಕ್ಷ ಇ.ಬಿ.ಜೋಸೆಫ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಂದೀಶ್, ಶ್ರೀ ಮಹಾಗಣಪತಿ, ಗೋಪಾಲಕೃಷ್ಣ ದೇವಸ್ಥಾನ ಸಮಿತಿಯ ದಾಸಂಡ ರಮೇಶ್ ಚಂಗಪ್ಪ, ವಿ.ಎನ್.ಪದ್ಮನಾಭ, ಎಸ್‌ಎನ್‌ಡಿಪಿ ಮಹಿಳಾ ವಿಭಾಗ ಅಧ್ಯಕ್ಷೆ ವಿಲಾಸಿನಿ ಶೇಖರ್, ಕಾರ್ಯದರ್ಶಿ ನಿರ್ಮಲಾ ಪ್ರಕಾಶ್, ಯುವವಿಭಾಗದ ಅಧ್ಯಕ್ಷ ಕೆ.ಎಂ.ರಮೇಶ್, ಕಾರ್ಯದರ್ಶಿ ಕೆ.ಎಚ್.ಸುಜಿತ್ ಮತ್ತಿತರರು ವೇದಿಕೆಯಲ್ಲಿ ಪಾಲ್ಗೊಂಡಿದ್ದರು.ದಾನಿಗಳಿಗೆ ಹಾಗೂ ಸಾಧಕಿ ಬಿಎಸ್‌ಎಫ್‌ನಲ್ಲಿ ಉಪನಿರೀಕ್ಷಕರಾಗಿ ನೇಮಕಗೊಂಡಿರುವ ೭ನೇ ಹೊಸಕೋಟೆಯ ನಿವಾಸಿ ವಿಸ್ಮಯದಾಸ್ ಅವರನ್ನು ಗೌರವಿಸಲಾಯಿತು. ಎಸ್‌ಎನ್‌ಡಿಪಿ ೭ನೇ ಹೊಸಕೋಟೆಯ ಕಾರ್ಯದರ್ಶಿ ಕೆ.ಜೆ.ಶಿವನ್ ಸ್ವಾಗತಿಸಿದರು.ದಿನವಿಡೀ ವಿವಿಧ ಕಾರ್ಯಕ್ರಮ:
ಶ್ರೀ ನಾರಾಯಣಗುರುಗಳ ೧೭೧ನೇ ಜಯಂತಿ ಹಿನ್ನೆಲೆ ದಿನವಿಡೀ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.೭ನೇ ಹೊಸಕೋಟೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸೌಮ್ಯ ಪೂಕಳಂ ಸ್ಪರ್ಧೆಯನ್ನು ಉದ್ಘಾಟಿಸಿದರು. ೭ನೇ ಹೊಸಕೋಟೆ ಎಸ್‌ಎನ್‌ಡಿಪಿ ಶಾಖಾ ಅಧ್ಯಕ್ಷ ಸಿ.ಬಿ.ರಾಜೇಶ್ ಧ್ವಜಾರೋಹಣ ನೇರವೇರಿಸಿದರು. ಬ್ರಹ್ಮಶ್ರೀ ನಾರಾಯಣಗುರು ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಟಿ.ಕೆ.ಸಾಯಿಕುಮಾರ್ ಗುರು ಪೂಜೆ ನೆರವೇರಿಸಿದರು.ಶ್ರೀ ನಾರಾಯಣಗುರುಗಳ ಭಾವಚಿತ್ರದ ಭವ್ಯ ಮೆರವಣಿಗೆಯನ್ನು ಅರಕಲಗೂಡು ವಿಧಾನಸಭಾ ಕ್ಷೇತ್ರದ ಶಾಸಕ ಎ.ಮಂಜು ಉದ್ಘಾಟಿಸಿದರು.ನಂತರ ನಾರಾಯಣಗುರುಗಳ ಭಾವಚಿತ್ರವನ್ನು ಭವ್ಯ ಮಂಟಪದಲ್ಲಿ ಇರಿಸಿ ಕೇರಳದ ಚೆಂಡೆ ಮೇಳದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.ಪೂಕಳಂ ಸ್ಪರ್ಧೆ, ಭಜನಾ ಕಾರ್ಯಕ್ರಮ, ಹಾಡುಗಾರಿಕೆ, ನೃತ್ಯ ನಡೆದವು.