ಸಾಹಿತಿಗಳಿಗೆ ಸೂಕ್ತ ಗೌರವ, ಶ್ರಮಕ್ಕೆ ತಕ್ಕ ಪ್ರತಿಫಲವನ್ನು ನೀಡುತ್ತಲೇ ಪುಸ್ತಕಗಳನ್ನು ಜನರಿಗೆ ತಲುಪಿಸಲು ವಿನೂತನ ಮಾರ್ಗಗಳನ್ನು ಅನ್ವೇಷಿಸುವುದು ಮುಖ್ಯ.

ಕನ್ನಡಪ್ರಭ ವಾರ್ತೆ ಮೈಸೂರುಹೊಸ ಲೇಖಕರ ಕೃತಿ, ಬಹುಮಾನ್ಯವಲ್ಲದ ವಿಷಯಗಳ ಪ್ರಕಟಣೆಗೂ ಅವಕಾಶ ಬೇಕಿದೆ ಎಂದು ಹಿರಿಯ ಲೇಖಕ ಪ್ರಧಾನ ಗುರುದತ್ತ ಹೇಳಿದರು.ನಗರದ ನಾರಾಯಣ ಶಾಸ್ತ್ರಿ ರಸ್ತೆಯ ಸಪ್ನ ಬುಕ್‌ ಹೌಸ್‌ ಮಳಿಗೆಯಲ್ಲಿ ಶನಿವಾರ 70ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತ 70 ಕೃತಿಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.ಸಪ್ನಾ ಬುಕ್‌ ಹೌಸ್‌ ಅತ್ಯುತ್ತಮ ಸಾಹಿತ್ಯ ಸೇವೆ ಮಾಡುತ್ತಿದೆ. ಉತ್ತಮ ವಿಷಯಗಳನ್ನು ಓದುಗರಿಗೆ ತಲುಪಿಸುವುದು ಮಾತ್ರವಲ್ಲದೇ ಲೇಖಕಕರಿಗೂ ಸ್ಫೂರ್ತಿಯಾಗಿದೆ. ಹೊಸ ತಲೆಮಾರಿನ ಲೇಖಕರಿಗೆ ಅವಕಾಶ ಸಿಗಬೇಕು. ಆಗ ಮಾತ್ರ ಸಾಹಿತ್ಯ ಕ್ಷೇತ್ರ ಪ್ರಗತಿ ಕಾಣಬಹುದು ಎಂದರು.ಸಾಹಿತಿಗಳಿಗೆ ಸೂಕ್ತ ಗೌರವ, ಶ್ರಮಕ್ಕೆ ತಕ್ಕ ಪ್ರತಿಫಲವನ್ನು ನೀಡುತ್ತಲೇ ಪುಸ್ತಕಗಳನ್ನು ಜನರಿಗೆ ತಲುಪಿಸಲು ವಿನೂತನ ಮಾರ್ಗಗಳನ್ನು ಅನ್ವೇಷಿಸುವುದು ಮುಖ್ಯ. ಕನ್ನಡ ಸಾಹಿತಿಗಳಿಗೆ ಸಹಕರಿಸಿ, ಪುಸ್ತಕ ಲೋಕವನ್ನು ಹಿಗ್ಗಿಸುವ ಪ್ರಕಾಶಕ ಸಂಸ್ಥೆಗಳ ಅಗತ್ಯ ಹೆಚ್ಚಿದೆ ಎಂದು ಅವರು ತಿಳಿಸಿದರು.ವಿದ್ವಾಂಸ ಟಿ.ವಿ. ವೆಂಕಟಾಚಲಶಾಸ್ತ್ರಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಮಾತನಾಡಿದರು.ಹೃದಯ ತಾರುಣ್ಯ, ಮನುಷ್ಯ ಮತ್ತು ಪ್ರೀತಿ, ಹಾಸಿಗೆಯ ಹಾಸ್ಯ ವಿಲಾಸ, ಕಾಳೀದುರ್ಗ, ನನ್ನ ಸೋಲೊ ಟ್ರಿಪ್‌, ಕಣ್ಣಿಲ್ಲದ ಹೆಣ್ಣು, ಬತ್ತದಿರಲಿ ಒಲವು, ಪಟಿಯಾಲಾ ಪೆಗ್‌, ಹಿರಿಯ ಕಿರಿಯರ ಜತೆಗೆ, ಕ್ಷಿತಿಜ ಸ್ಪರ್ಷ ಮುಂತಾದ 70 ಪುಸ್ತಕಗಳು ಬಿಡುಗಡೆಗೊಂಡವು.ಶಾಖಾ ವ್ಯವಸ್ಥಾಪಕ ಜಿಗಾರ್, ಮೂಗೂರು ನಂಜುಂಡಸ್ವಾಮಿ. ಜಯಪ್ಪ ಹೊನ್ನಾಳಿ ಮೊದಲಾದವರು ಇದ್ದರು.