ಶೋಷಿತರ ದನಿಯಾಗಿದ್ದ ನಾರಾಯಣಗುರು

| Published : Oct 07 2024, 01:32 AM IST

ಸಾರಾಂಶ

ಅನಿಷ್ಠ ಪದ್ದತಿಗಳಿಂದ ಕೂಡಿದ್ದ ಕಾಲದಲ್ಲಿ ಸಮಾಜ ಸುಧಾರಣೆಗೆ ಹೋರಾಡಿದ ನಾರಾಯಣಗುರುಗಳು, ಜಾತಿಯಕಾರಣಕ್ಕೆ ಶೋಷಿತರ ಪರವಾಗಿ ದನಿಎತ್ತಿ ಶ್ರೇಷ್ಠ ಚಿಂತಕರಾಗಿದ್ದರು. ಅಂದಿನ ಕಾಲದಲ್ಲಿ ಮನುವಾದವು ತಳಸ್ತರದ ಜನರನ್ನು ಸೇವೆಮಾಡಲೆಂದೇ ಪರಿಗಣಿಸಲಾಗಿತ್ತು. ನಾರಾಯಣಗುರುಗಳ ಈ ಅನಿಷ್ಟತೆಗಳ ವಿರುದ್ಧ ಹೋರಾಡಿದರು.

ಕನ್ನಡಪ್ರಭ ವಾರ್ತೆ ಗೌರಿಬಿದನೂರು

ಜಾತಿಯ ಶ್ರೇಷ್ಠತೆ ಕಾರಣಕ್ಕೆ ತಾರತಮ್ಯ ಮಾಡುತ್ತಿದ್ದವರ ವಿರುದ್ಧ ಹೋರಾಟ ನಡೆಸಿ ಪುರೋಹಿತಶಾಹಿ ವ್ಯವಸ್ಥೆಯನ್ನು ಖಂಡಿಸಿದ ಶ್ರೇಷ್ಠ ಸಾಮಾಜಿಕ ಸುಧಾರಣೆಯ ಕ್ರಾಂತಿಗೆ ಕಾರಣರಾದ ನಾರಾಯಣ ಗುರೂಜಿ ಅವರ 170ನೇ ಜಯಂತಿ ಆಚರಿಸಲಾಗುತ್ತಿದೆ. ಅವರು ಸಮಾಜ ಸುಧಾರಕರಾಗಿ ಒಂದು ಜಾತಿ, ಧರ್ಮದ ಗುರುವಲ್ಲ. ಅವರು ಲೋಕಗುರು ಎಂದ ಶಾಸಕ ಕೆ.ಎಚ್. ಪುಟ್ಟಸ್ವಾಮಿಗೌಡ

ನಗರದ ಡಾ.ಹೆಚ್.‌ಎನ್‌.ಕಲಾಭವನದಲ್ಲಿ ಆರ್ಯಈಡಿಗರ ಕ್ಷೇಮಾಭಿವೃದ್ದಿ ಸಂಘ(ರಿ)ವತಿಯಿಂದ ಆಯೋಜಿಸಿದ್ದ ಬ್ರಹ್ಮ ಶ್ರೀನಾರಾಯಣಗುರುಜೀ 170ನೇ ಜಯಂತ್ಯುತ್ಸವವನ್ನು ದೀಪಬೆಳಗುವ ಮೂಲಕ ಉದ್ಘಾಟಿಸಿ, ಪುಷ್ಪನಮನಸಲ್ಲಿಸಿ ಮಾತನಾಡಿದವರು.

ಶೋಷಿತರ ಪರ ಹೋರಾಟ:

ತಮ್ಮ ಸೈದ್ದಾಂತಿಕ ನಿಲುವುಗಳ ಮೂಲಕ ಅನಿಷ್ಠ ಪದ್ದತಿಗಳಿಂದ ಕೂಡಿದ್ದ ಕಾಲದಲ್ಲಿ ಸಮಾಜ ಸುಧಾರಣೆಗೆ ಹೋರಾಡಿದ ನಾರಾಯಣಗುರುಗಳು, ಜಾತಿಯಕಾರಣಕ್ಕೆ ಶೋಷಿತರ ಪರವಾಗಿ ದನಿಎತ್ತಿ ಶ್ರೇಷ್ಠ ಚಿಂತಕರಾಗಿದ್ದರು. ಅಂದಿನ ಕಾಲದಲ್ಲಿ ಮನುವಾದವು ತಳಸ್ತರದ ಜನರನ್ನು ಸೇವೆಮಾಡಲೆಂದೇ ಪರಿಗಣಿಸಲಾಗಿತ್ತು. ನಾರಾಯಣಗುರುಗಳ ಈ ಅನಿಷ್ಟತೆಗಳ ವಿರುದ್ದ ಪ್ರತಿಭಟಿಸಿದರು ಎಂದರು.

ಶಿಕ್ಷಣ ಕ್ರಾಂತಿಯ ಮೂಲಕ ಶೂದ್ರಾತಿ ಶೂದ್ರರಲ್ಲಿ ಅಕ್ಷರ ಪ್ರೀತಿಯನ್ನು ಹುಟ್ಟಿಸಿದ್ದು ನಾರಾಯಣಗುರುಗಳ ಮಹಾಪವಾಡ. ಕಲಿಯಿರಿ-ಕಲಿಸಿರಿ, ಬೇಳೆಯಿರಿ-ಬೆಳೆಸಿರಿ, ಯೋಜಿಸಿರಿ- ಯೋಚಿಸಿರಿ, ಚೈತನ್ಯಪೂರ್ಣರಾಗಿ ಒಗ್ಗಟ್ಟಿನಿಂದ ಕರ್ತವ್ಯ ಪ್ರಜ್ಷೆಯಿಂದ ಜಾಗೃತರಾಗಿ ಸಮಾಜದಲ್ಲಿ ಸಮಾನತೆಯನ್ನು ಪಡಯುವ ಏಕೈಕಸಾಧನ ಶಿಕ್ಷಣ ಎನ್ನುತ್ತಾ ವೃತ್ತಿಶಿಕ್ಷಣಕ್ಕೆ ಧಾನ್ಯವನ್ನು ನೀಡಿ ಕಾರ್ಯರೂಪಕ್ಕೆ ತಂದರು.

ಪೂಜೆಗೆ ಸೀಮಿತಗೊಳಿಸಬೇಡಿ:

ಗೌರಿಬಿದನೂರು ಆರ್ಯ ಈಡಿಗರ ಕ್ಷೇಮಾಭಿವೃದ್ದಿ ಸಂಘದ ಗೌರವಾಧ್ಯಕ್ಷ ಜಿ.ಎನ್.ನಾಗರಾಜು ಮಾತನಾಡಿ, ಶಿಕ್ಷಣದ ಮೂಲಕ ವೈಚಾರಿಕತೆ ಮತ್ತು ವೈಜ್ಞಾನಿಕ ಮನೋಭಾವ ಬೆಳೆದು ನಾವು ಸಮಾನತೆಯ ಜೀವನ ನಡೆಸಿ ನಮ್ಮ ಹಕ್ಕುಗಳನ್ನು ಪಡೆಯಲು ನೆರವಾದ ನಾರಾಯಣಗುರುಗಳು ಪ್ರೇರಣಾ ಶಕ್ತಿಯಾಗಬೇಕೆ ಹೊರತು ಪೂಜಾ ಶಕ್ತಿಯಾಗಬಾರದು. ಜಾತಿ ಸಂಕೋಲೆಗಳಿಂದ ಬಿಡುಗಡೆಯಾಗಿ, ನಾವೆಲ್ಲರೂ ಒಂದೇ ಎಂಬ ಭಾವನೆಯಿಂದ ಬದುಕಬೇಕೆಂದು ಹೇಳಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ನಗರಸಭೆಯ ಅಧ್ಯಕ್ಷ ಲಕ್ಷ್ಮೀನಾರಾಯಣಪ್ಪ, ಸ.ಕಿ.ಪ್ರಾ.ಶಿಕ್ಷಕ ಕೆ.ವೆಂಕಟರವಣಪ್ಪ, ಸ್ಥಾಪಕಅಧ್ಯಕ್ಷ-ಪ್ರಸಾದ್, ಮಾಜಿಅಧ್ಯಕ್ಷರು-ಸೂರಜ್, ಆರ್ಯಈಡಿಗ ಸಂಘದ ಅಧ್ಯಕ್ಷ ವಿಜಯರಾಕಲ್ ಚಂದ್, ಮಂಜುನಾಥ್, ಸಂಘದ ಎಲ್ಲಾ ಪದಾಧಿಕಾರಿಗಳು ಪಾಲ್ಗೊಂಡಿದ್ದರು.